ವೈದ್ಯರ ವರ್ಗಾವಣೆ ವಿರೋಧಿಸಿ ಬಿಜೆಪಿಯಿಂದ ಸಹಾಯಕ ಕಮಿಷನರ್ ಕಲ್ಯಾಣಿ ವೆಂಕಟೇಶ್ ಕಾಂಬಳೆ ಅವರಿಗೆ ಮನವಿ ಸಲ್ಲಿಕೆ
- Ananthamurthy m Hegde
- Jun 27
- 1 min read
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ಬೇರೆಡೆಗೆ ವರ್ಗಾಯಿಸಿರುವುದನ್ನು ಪ್ರತಿಭಟಿಸಿ ಇಂದು ಕುಮಟಾ ಸಹಾಯಕ ಕಮಿಷನರ್ ಕಲ್ಯಾಣಿ ವೆಂಕಟೇಶ್ ಕಾಂಬಳೆ ಅವರಿಗೆ ಭಾರತೀಯ ಜನತಾ ಪಕ್ಷದ ಪ್ರಪೋಸ್ಟದ ಅಧ್ಯಕ್ಷ ಎಂ ಜಿ ಭಟ್ ನೇತತ್ವದಲ್ಲಿ ಇಂದು ಮನವಿ ನೀಡಲಾಯಿತು. ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ಶ್ರೀನಿವಾಸ್ ನಾಯಕ್ ಮತ್ತು ಡಾಕ್ಟರ್ ಪಾಂಡುರಂಗ ದೇವಾಡಿಗ ಸೇರಿದಂತೆ ಸರ್ಕಾರಿ ಆಸ್ಪತ್ರೆಯಿಂದ ಐದು ಸರ್ಕಾರಿ ವೈದ್ಯರನ್ನು ವರ್ಗಾಯಿಸಲಾಗಿದೆ ಇದನ್ನು ತಡೆ ಹಿಡಿಯುವಂತೆ ಮತ್ತು ಕೊರತೆ ಇರುವ ವೈದ್ಯರನ್ನು ನೇಮಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ ಒಮ್ಮೆ ವರ್ಗಾಯಿಸಿದ್ದೆ ಆದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.ಸಿ
Comments