ವಿಭಾಗೆ ಐಐಟಿ ಜಾಮ್ ಪರೀಕ್ಷೆಯಲ್ಲಿ 125ನೇ ರ್ಯಾಂಕ್
- Ananthamurthy m Hegde
- Jul 2
- 1 min read

ಶಿರಸಿ: ಎಂಇಎಸ್ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿ ಎಸ್ ಸ್ಸಿ ಅಂತಿಮ ವರ್ಷ ಓದುತ್ತಿರುವ ವಿಭಾ ವಿಜಯೇಂದ್ರ ಹೆಗಡೆ ಐಐಟಿ ಜಾಮ್ ಪರೀಕ್ಷೆಯಲ್ಲಿ ಜೈವಿಕ ತಂತ್ರಜ್ಞಾನ ವಿಷಯದಲ್ಲಿ 125ನೇ ರಾಂಕ್ ಅನ್ನು ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾಳೆ. ಇವಳು ಬಾಳೆಗದ್ದೆ ಸಿಂಗನ ಮನೆಯ ವಿಜೇಂದ್ರ ಹೆಗಡೆ ಹಾಗೂ ಭಾರತಿ ಹೆಗಡೆಯವರ ಪುತ್ರಿಯಾಗಿದ್ದು, ವಿದ್ಯಾರ್ಥಿನಿಯ ಈ ಸಾಧನೆಗೆ ಎಂಇಎಸ್ ನ ಅಧ್ಯಕ್ಷ ಜಿ ಎಂ ಹೆಗಡೆ ಮುಳಖಂಡ,ಎಂ ಇ ಎಸ್ ನ ಪದಾಧಿಕಾರಿಗಳು, ಉಪಸಮಿತಿ ಅಧ್ಯಕ್ಷ ಎಸ್ ಕೆ ಭಾಗವತ್, ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊಫೆಸರ್ ಜಿ ಟಿ ಭಟ್, ಬೋಧಕ, ಭೋದಕೆತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ
Comments