top of page

ವೈಯಕ್ತಿಕ ದ್ವೇಷಕ್ಕೆ ಹಣ್ಣಿನ ಅಂಗಡಿಗೆ ಬೆಂಕಿ

  • Writer: Ananthamurthy m Hegde
    Ananthamurthy m Hegde
  • Dec 26, 2024
  • 1 min read

ಭಟ್ಕಳ: ಹಣ್ಣಿನ ಅಂಗಡಿಯ ಮಾಲೀಕನ ಮೇಲಿನ ದ್ವೇಷದಿಂದ ಹಣ್ಣಿನ ಅಂಗಡಿಗೆ ಪೆಟ್ರೋಲ್ ಹಾಕಿ ಬೆಂಕಿ ಹೆಚ್ಚಿರುವ ಘಟನೆ ಭಟ್ಕಳ ತಾಲೂಕಾ ಪಂಚಾಯತ ಮುಂಭಾಗದಲ್ಲಿ ಗುರುವಾರ ಮುಂಜಾನೆ 2.30 ಸುಮಾರಿಗೆ ನಡೆದಿದೆ.

ಮಾವಿನ ಕುರ್ವೆ ಪಂಚಾಯತ ವ್ಯಾಪ್ತಿಯ ತಲಗೋಡ ಕೋಟೆಮನೆ ರಾಮಚಂದ್ರ ಜಟ್ಟಪ್ಪ ನಾಯ್ಕ ಇವರಿಗೆ ಸೇರಿದ ಹಣ್ಣಿನ ಅಂಗಡಿ ಇದಾಗಿದೆ. ಇವರು ಇಲ್ಲಿನ ತಾಲೂಕಾ ಪಂಚಾಯತ ಮುಂಭಾಗದಲ್ಲಿ ತಾತ್ಕಾಲಿಕ ಹಣ್ಣಿನ ಅಂಗಡಿಗೆ ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದರು. ಆದರೆ ಇವರ ಮೇಲಿನ ದ್ವೇಷದಿಂದಾಗಿ ಪೆಟ್ರೋಲ್ ಹಾಕಿ ಬೆಂಕಿ ಹಾಕಿರುವುದರಿಂದ ಹಣ್ಣಿನ ಅಂಗಡಿ ಹಾಗೂ ಅಂಗಡಿಯಲ್ಲಿದ್ದ ಇತರೆ ಸಾಮಾನುಗಳು ಸೇರಿ ಒಟ್ಟು 7 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಸುಟ್ಟು ಹೋಗಿದೆ. ಅದೇ ರೀತಿ ನನ್ನ ಅಂಗಡಿಗೆ ಯಾರೋ ಪೆಟ್ರೋಲ್ ಹಾಕಿ ಬೆಂಕಿ ಹಾಕಿರುವ ಬಗ್ಗೆ ಸಂಶಯವಿದೆ ಈ ಬಗ್ಗೆ ತನಿಖೆ ಮಾಡುವಂತೆ ಪ್ರಕರಣ ನೀಡಿದ್ದಾರೆ.

ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿಹಣ್ಣಿನ ಅಂಗಡಿಯ ಮಾಲೀಕ ರಾಮಚಂದ್ರ ನಾಯ್ಕ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಿ.ಎಸ್.ಐ ಸೋಮರಾಜ ರಾಠೋಡ ತನಿಖೆ ಕೈಗೊಂಡಿದ್ದಾರೆ

Comments


Top Stories

bottom of page