ವಿಶ್ವದಾಖಲೆ ಮಾಡಿದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ
- Ananthamurthy m Hegde
- Dec 30, 2024
- 1 min read

ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮತ್ತೊಂದು ವಿಶ್ವದಾಖಲೆ ಮಾಡಿದ್ದಾರೆ. ಒಂದೆಡೆ ಟೀಂ ಇಂಡಿಯಾ ಎಡವುತ್ತಿದ್ದರೇ, ಬುಮ್ರಾ ಮಾತ್ರ ತಮ್ಮ ಬೌಲಿಂಗ್ ಮುಲಕ ದಾಖಲೆಗಳನ್ನು ಮುರಿಯುತ್ತಿದ್ದರೆ. ಈಗಾಗಲೇ ಟೆಸ್ಟ್ ನಲ್ಲಿ ವಿಕೇಟ್ ಗಳ ಮೈಲಿಗಲ್ಲು ಸ್ಥಾಪಿಸಿದ ಭಾರತದ ವೇಗದ ಬೌಲರ್ ಎಂಬ ದಾಖಲೆಯನ್ನು ಈಗಾಗಲೇ ಸಾಧಿಸಿರುವ ಬುಮ್ರಾ ಇತ್ತೀಚೆಗೆ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದರು . ಐದು ಟೆಸ್ಟ್‌ಗಳ ಈ ಸರಣಿಯ ಭಾಗವಾಗಿ, ಮೆಲ್ಬೋರ್ನ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಬುಮ್ರಾ 4 ವಿಕೆಟ್‌ಗಳನ್ನು ಪಡೆದರು. ಈ ಸರಣಿಯಲ್ಲಿ ಅವರು ಈಗಾಗಲೇ 30 ವಿಕೆಟ್ ಪಡೆದಿದ್ದಾರೆ. ಎರಡೂ ತಂಡದ ಯಾವುದೇ ಬೌಲರ್ ಬುಮ್ರಾಗೆ ಹತ್ತಿರವಾಗಿಲ್ಲ. 2ನೇ ಸ್ಥಾನದಲ್ಲಿರುವವರು ಕಮಿನ್ಸ್ 20 ವಿಕೆಟ್ ಪಡೆದಿದ್ದಾರೆ. ಬುಮ್ರಾ SENA(ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿ ತಮ್ಮ 9 ನೇ ಐದು ವಿಕೆಟ್ ಸಾಧನೆಯಾಗಿದೆ. ಪರ್ತ್‌ನಲ್ಲಿ ನಡೆದ ಈ ಸರಣಿಯ ಮೊದಲ ಟೆಸ್ಟ್‌ನಲ್ಲಿ ಅವರು ಐದು ವಿಕೆಟ್‌ಗಳನ್ನು ಪಡೆದರು ಮತ್ತು ಒಟ್ಟು ಎಂಟು ವಿಕೆಟ್‌ಗಳನ್ನು ಪಡೆದರು. ಅಡಿಲೇಡ್‌ನಲ್ಲಿ 4 ವಿಕೆಟ್ ಪಡೆದರು. ಗಬ್ಬಾ ಟೆಸ್ಟ್‌ನಲ್ಲಿ 9 ವಿಕೆಟ್ ಪಡೆದಿದ್ದ ಬುಮ್ರಾ, ಇತ್ತೀಚಿನ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದರು. ಇದು ಆಸ್ಟ್ರೇಲಿಯಾ ನೆಲದಲ್ಲಿ ಬುಮ್ರಾ ಅವರ 4 ನೇ ಐದು ವಿಕೆಟ್ ಗೊಂಚಲಾಗಿದೆ. ಅವರು ದಕ್ಷಿಣ ಆಫ್ರಿಕಾದಲ್ಲಿ 3 ಬಾರಿ, ಇಂಗ್ಲೆಂಡ್‌ನಲ್ಲಿ 2 ಬಾರಿ ಮತ್ತು ವೆಸ್ಟ್ ಇಂಡೀಸ್‌ನಲ್ಲಿ 2 ಬಾರಿ ಈ ಸಾಧನೆ ಮಾಡಿದ್ದಾರೆ.
Comments