top of page

ವಿಷ್ಣು ದೇವಾಡಿಗರಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ

  • Writer: Ananthamurthy m Hegde
    Ananthamurthy m Hegde
  • Nov 3, 2024
  • 1 min read

ಭಟ್ಕಳ : ಕಳೆದ ಮೂರು ದಶಕಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡ ತಾಲೂಕಿನ ಹಿರಿಯ ಪತ್ರಕರ್ತ ವಿಷ್ಣು ದೇವಾಡಿಗರವರವರಿಗೆ ತಾಲೂಕಾ ಆಡಳಿತವು ತಾಲೂಕಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಭಾ ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿಷ್ಣು ದೇವಾಡಿಗ ಅವರಿಗೆ ಪ್ರಶಸ್ತಿ ಪತ್ರವನ್ನು ನೀಡಿ ಸನ್ಮಾನಿಸಿದರು.

೧೯೯೩ರಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಇವರು ಮೊದಲು ಜನಮಾಧ್ಯಮ, ಮುಂಗಾರು ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದರು. ಆನಂತರ ಜಿಲ್ಲೆಯ ಪತ್ರಿಕೆಗಳಾದ ಕರಾವಳಿ ಮುಂಜಾವು, ಲೋಕಧ್ವನಿ, ಜನಾಂತರAಗ, ಜನವಾಹಿನಿ, ಕನ್ನಡ ಪ್ರಭ, ವಿಶ್ವವಾಣಿ, ಕೊಂಕಣವಾಣಿ ಸೇರಿದಂತೆ ಜಲ್ಲಾಮಟ್ಟದ ಹಾಗೂ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ಪ್ರಸ್ತುತ ಟೈಮ್ಸ್ ಆಫ್ ಇಂಡಿಯಾ ಬಳಗದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಾಧ್ಯಮ ಕ್ಷೇತ್ರ ಮಾತ್ರವಲ್ಲದೆ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲೂ ಇವರು ಛಾಪು ಮೂಡಿಸಿದ್ದು ತಾಲೂಕಾ ಪಂಚಾಯತಿಯ ಸದಸ್ಯರು ಆಗಿ ಕಾರ್ಯನಿರ್ವಹಿಸಿದ್ದಾರೆ ಜತೆಗೆ ಸಮಾಜದ ಓರ್ವ ಮುಖಂಡರಾಗಿಯೂ ಗುರುತಿಸಿಕೊಂಡಿದ್ದಾರೆ.

ಭಟ್ಕಳದ ಪತ್ರಕರ್ತ ಸಂಘದ ಅಧ್ಯಕ್ಷರಾಗಿ, ರಾಜ್ಯ ಉಪಾಧ್ಯಕ್ಷರಾಗಿ, ರಾಷ್ಟ್ರೀಯ ಮಂಡಳಿಯ ಸದಸ್ಯರಾಗಿ ಸೇವೆಸಲ್ಲಿಸಿದ ಅನುಭವವನ್ನ ಹೊಂದಿರುವ ಇವರಿಗೆ ಪತ್ರಿಕಾ ವಿಭಾಗದಲ್ಲಿ ಪಶಸ್ತಿ ಲಭಿಸಿರುವುದಕ್ಕೆ ಭಟ್ಕಳ ತಾಲೂಕಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹರ್ಷ ವ್ಯಕ್ತಪಡಿಸಿದೆ.

Comments


Top Stories

bottom of page