ವನ್ನಳ್ಳಿ ಬಂದರಿನ ಕಡಲ ತೀರಕ್ಕೆ ತೇಲಿಬಂದ ನೀಲಿ ತಿಮಿಂಗಿಲ ಮೃತದೇಹ
- Ananthamurthy m Hegde
- Jun 26
- 1 min read

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ವನ್ನಳ್ಳಿ ಬಂದರಿಂದ ಸಮುದ್ರ ತೀರದಲ್ಲಿ ಬೃಹತ್ ಗಾತ್ರದ ತಿಮಿಂಗಲ ಮೃತದೇಹ ಪತ್ತೆಯಾಗಿದ್ದು, ಸುಮಾರು ೪೦ ಅಡಿಗಳಷ್ಟು ಉದ್ದವಿರುವ ತಿಮಿಂಗಲ ಮೃತಪಟ್ಟು 15 ದಿನ ಆಗಿರಬಹುದೆಂದು ಅಂದಾಜಿಸಲಾಗಿದೆ. ತಿಮಿಂಗಲದ ಮೃತದೇಹವು ಬುಧವಾರ ಸಮುದ್ರ ತೀರಕ್ಕೆ ಬಂದು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ. ದುರ್ವಾಸನೆ ಹೊರಬೀಳುತ್ತಿದ್ದು ಪಕ್ಕದ ಮನೆಯಲ್ಲಿ ವಾಸವಿರುವ ಜನರಿಗೆ ತೊಂದರೆ ಉಂಟಾಗಿದೆ ಸಾಮಾನ್ಯವಾಗಿ ತಿಮಿಂಗಲಗಳು ಆಳ ಸಮುದ್ರದಲ್ಲಿ ಇರುತ್ತದೆ ಈ ತಿಮಿಂಗಲ ಸಹ ಆಳ ಸಮುದ್ರದಲ್ಲಿ ಮೃತಪಟ್ಟೀರಬಹುದೆಂದು ನಂತರ ಬೃಹತ್ ಸಮುದ್ರದ ಅಲೆಗಳಿಗೆ ಮೃತದೇಹ ಸಮುದ್ರ ತೀರಕ್ಕೆ ಬಂದು ಬಿದ್ದಿದೆ. ಈ ತಿಮಿಂಗಲ ಬೃಹತ್ ಗಾತ್ರದಲ್ಲಿ ಬೆಳೆಯುವ ತಿಮಿಂಗಲಗಳ ಹೃದಯದಗಳಲ್ಲಿ ಎರಡನೆಯ ಸ್ಥಾನ ಪಡೆದಿದೆ ಇದಕ್ಕೆ ಸುಮಾರು 17 ವರ್ಷಗಳ ಆಗಿರ ಬಹುದು ಎಂದು ಅಂದಾಜಿಸಲಾಗಿದೆ.
Comments