ಶಿಕ್ಷಕರು, ಸಾರ್ವಜನಿಕರ ಸಹಭಾಗಿತ್ವ ಇದ್ದರೆ ಸರಕಾರಿ ಶಾಲೆ ಮಾದರಿಯಾಗಲು ಸಾಧ್ಯ
- Ananthamurthy m Hegde
- Dec 26, 2024
- 1 min read
ಯಲ್ಲಾಪುರ: ಶಿಕ್ಷಕರು ಹಾಗೂ ಸಾರ್ವಜನಿಕರ ಸಹಭಾಗಿತ್ವ ಇದ್ದರೆ ಸರ್ಕಾರಿ ಶಾಲೆಗಳು ಮಾದರಿಯಾಗಿ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಹೇಳಿದರು.
ಅವರು ತಾಲೂಕಿನ ಆನಗೋಡ ಸಮೀಪದ ಗೋಳಿಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮಿಲನದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಹಿರಿಯ ವೈದಿಕ ನಾರಾಯಣ ಭಟ್ಟ ಕೊರಗಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮಸ್ಥರ ಸಹಕಾರದೊಂದಿಗೆ ನಿರ್ಮಿಸಿದ ಮಹಾದ್ವಾರವನ್ನು ಗ್ರಾ.ಪಂ ಅಧ್ಯಕ್ಷೆ ಮೀನಾಕ್ಷಿ ಭಟ್ಟ ಉದ್ಘಾಟಿಸಿದರು. ವಿದ್ಯಾರ್ಥಿಗಳ ಕೈಬರಹ ಪತ್ರಿಕೆಯನ್ನು ಗ್ರಾ.ಪಂ ಸದಸ್ಯ ಕೆ.ಟಿ.ಹೆಗಡೆ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಪರಿಸರಮಿತ್ರ ಇಕೊ ಕ್ಲಬನ್ನು ಗಿಡ ನೆಡುವ ಮೂಲಕ ಉದ್ಘಾಟಿಸಲಾಯಿತು.
ನಾಟಿ ವೈದ್ಯ ದೇಮು ಮರಾಠಿ, ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಶಿವರಾಮ ಹೆಗಡೆ ಗೋಳಿಗದ್ದೆ ಅವರನ್ನು ಸನ್ಮಾನಿಸಲಾಯಿತು. ಹಿರಿಯ ವೈದಿಕ ನಾರಾಯಣ ಭಟ್ಟ ಕೊರಗಿ, ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಹಾಗೂ ಶಾಲಾಭಿವೃದ್ಧಿಗೆ ಸಹಕರಿಸಿದ ರಮೇಶ ಮರಾಠಿ ಆನಗೋಡ ಅವರನ್ನು ಗೌರವಿಸಲಾಯಿತು.
ವೇ.ಗೋಪಾಲಕೃಷ್ಣ ಭಟ್ಟ ಕೊರಗಿ, ಗ್ರಾ.ಪಂ ಉಪಾಧ್ಯಕ್ಷೆ ಕುಸುಮಾ ಸಿದ್ದಿ, ಸದಸ್ಯ ಪರಮೇಶ್ವರ ಗಾಂವ್ಕರ, ಸಿ.ಆರ್.ಪಿ ಚಂದ್ರಹಾಸ ನಾಯ್ಕ, ಎಸ್.ಡಿ.ಎಂ.ಸಿ ಶಂಕರ ಹೆಗಡೆ, ಶಿಕ್ಷಣ ಇಲಾಖೆಯ ಪ್ರಶಾಂತ.ಜಿ.ಎನ್, ಪ್ರಶಾಂತ ಪಟಗಾರ, ಸಂತೋಷ ನಾಯ್ಕ, ದಿಲೀಪ ದೊಡ್ಮನಿ, ನಿವೃತ್ತ ಶಿಕ್ಷಕ ಎಂ.ಬಿ.ಶೇಟ್, ಮುಖ್ಯಾಧ್ಯಾಪಕ ಶ್ರೀಧರ ಮಡಿವಾಳ, ಶಿಕ್ಷಕಿ ಸುಮಂಗಲಾ ಭಟ್ಟ ಇತರರಿದ್ದರು.
Comments