ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ : ರೈತರ ಆಕ್ರೋಶ
- Ananthamurthy m Hegde
- Nov 28, 2024
- 1 min read
ಶಿರಸಿ: ನಗರದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ವಿವಿಧ ಇಲಾಖೆ ಅಧಿಕಾರಿಗಳ ಹಾಗೂ ರೈತ ಸಂಘದ ಸಭೆ ನಡೆಯಿತು. ಉಪವಿಭಾಗಧಿಕಾರಿ ಕಾವ್ಯರಾಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತರ ಸಮಸ್ಯೆ ಕುರಿತ ಅನೇಕ ವಿಷಯಗಳ ಚರ್ಚೆ ನಡೆಸಲಾಯಿತು.
ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ ಹಾಗೂ ಕಳಪೆ ಕಾಮಗಾರಿ ವಿರುದ್ಧ ರೈತರು ಸಂಬಂಧಪಟ್ಟ ಸಂಸ್ಥೆಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನು ರೈತರಿಗೆ ನೀಡಬೇಕಾದ ಬೆಳೆವಿಮೆ ಇದುವರೆಗೂ ರೈತರ ಖಾತೆಗೆ ಜಮೆ ಆಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಅಲ್ಲದೇ ಕಾಡು ಪ್ರಾಣಿಗಳಿಂದ ಬೆಳೆಗಳಿಗೆ ಅಪಾರವಾದ ಹಾನಿಯಾಗಿತ್ತಿದೆ. ಆಹಾರ ಹಾಗೂ ನೀರು ಅರಸಿ ಬರುವ ಪ್ರಾಣಿಗಳಿಗೆ ಇಲಾಖೆ ಕಡಿವಾಣ ಹಾಕಬೇಕಿದೆ ಎಂದು ರೈತರು ಇಲಾಖೆಯಲ್ಲಿ ಮನವಿ ಮಾಡಿದರು. ಸಭೆಯಲ್ಲಿ ತಹಸೀಲ್ದಾರ್ ಶ್ರೀಧರ್ ಮಂದಲಮನಿ, ಡಿವೈಎಸ್ಪಿ ಕೆ.ಎಲ್ ಗಣೇಶ್, ರೈತ ಮುಖಂಡ ರಾಘವೇಂದ್ರ ಕಿರುವತ್ತಿ. ರೈತ ಸಂಘದ ಜಿಲ್ಲಾಧ್ಯಕ್ಷ ಸತೀಶ್ ನಾಯ್ಕ, ಕಾರ್ಯದರ್ಶಿ ನಾಗರಾಜ್ ಡಾಂಗಿ, ಕೃಷಿ ಇಲಾಖೆ ನಿರ್ದೇಶಕ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.
Comments