ಶಿವಮೊಗ್ಗದಲ್ಲಿ ಸದ್ಯದಲ್ಲೇ ಕಾರ್ಗೊ ವಿಮಾನ ಹಾರಾಟ
- Ananthamurthy m Hegde
- Dec 26, 2024
- 1 min read

ಶಿವಮೊಗ್ಗ ತಾಲೂಕಿನ ಸೋಗಾನೆ ವಿಮಾನ ನಿಲ್ದಾಣದಿಂದ ಕಾರ್ಗೊ ವಿಮಾನಗಳ ಹಾರಾಟಕ್ಕೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲು 50 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇನ್ನೂ 45 ದಿನಗಳಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ಲಭ್ಯವಾಗಲಿದೆ. ರನ್ ವೇ ವಿಸಿಬಲಿಟಿ ಸಮಸ್ಯೆ ಪರಿಹಾರವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಗೊ ವಿಮಾನಗಳ ಹಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ರೈತರು ಬೆಳೆದ ಬೆಳೆ ಮತ್ತು ಇತರೆ ವಸ್ತುಗಳನ್ನು ರಫ್ತು ಮಾಡಲು ಈ ಮೂಲಕ ಅನುಕೂಲವಾಗಲಿದೆ ಎಂದರು.
ಮೈಸೂರಿಗಿಂತ ಹೆಚ್ಚು
ಕಳೆದ ಒಂದು ವರ್ಷದಲ್ಲಿ 8,500ಕ್ಕೂ ಹೆಚ್ಚು ಪ್ರವಾಸಿಗರು ಶಿವಮೊಗ್ಗ ವಿಮಾನ ನಿಲ್ದಾಣದಿಂದ ಓಡಾಡಿದ್ದಾರೆ. ಇದೇ ಅವಧಿಯಲ್ಲಿ ಮೈಸೂರು ವಿಮಾನ ನಿಲ್ದಾಣದಿಂದ 7,500 ಪ್ರವಾಸಿಗರು ಪ್ರಯಾಣಿಸಿದ್ದಾರೆ. ಮೈಸೂರಿಗಿಂತಲೂ ಹೆಚ್ಚು ಪ್ರವಾಸಿಗರು ನಮ್ಮ ವಿಮಾನ ನಿಲ್ದಾಣ ಬಳಸಿದ್ದಾರೆ. ಈ ನಿಲ್ದಾಣ ಮಧ್ಯ ಕರ್ನಾಟಕದ ಪ್ರಮುಖ ವಿಮಾನ ನಿಲ್ದಾಣವಾಗಲಿದೆ ಎಂದರು. ಆ. 31ರಿಂದ ಬೆಂಗಳೂರು- ಶಿವಮೊಗ್ಗ ವಿಮಾನಯಾನ ಆರಂಭ, ಮಧ್ಯ ಕರ್ನಾಟಕದಲ್ಲಿ ಈಗ ಹೂಡಿಕೆ ಸುಲಭ ಮುಂಬಯಿ ವಿಮಾನ ನಿಲ್ದಾಣದಲ್ಲಿ ಟ್ರಾಫಿಕ್ ಕ್ಲಿಯರೆನ್ಸ್ ಲಭಿಸಿಲ್ಲ. ಆದ್ದರಿಂದ ಇಂಡಿಗೋ ವಿಮಾನಯಾನ ಸಂಸ್ಥೆ ಶಿವಮೊಗ್ಗದಿಂದ ಹೊಸದಿಲ್ಲಿ, ಅಹಮದಾಬಾದ್, ಪುಣೆ ಮಾರ್ಗದಲ್ಲಿ ವಿಮಾನಯಾನ ಆರಂಭಕ್ಕೆ ಅನುಮತಿ ಕೇಳಿದೆ. ಇದಕ್ಕೆ ಸಂಬಂಧಿಸಿದಂತೆ ವಿಮಾನಯಾನ ಸಚಿವರಿಗೆ ಪತ್ರ ಬರೆದು ಶೀಘ್ರ ಅನುಮತಿ ನೀಡುವಂತೆ ಮನವಿ ಮಾಡಲಾಗುವುದು ಎಂದರು.















Comments