ಶಾಸಕರ ಅನುದಾನದಿಂದ ಭಟ್ಕಳ ಪೊಲೀಸ್ ಇಲಾಖೆಗೆ ನೂತನ ಕಾರ್
- Ananthamurthy m Hegde
- Jan 13
- 1 min read
ಭಟ್ಕಳ: ಶಾಸಕರ ಅನುದಾನದಿಂದ ಭಟ್ಕಳ ಪೊಲೀಸ ಇಲಾಖೆಗೆ ಖರೀದಿಸಿದ ನೂತನ ಕಾರನ್ನು ಸಚಿವ ಮಂಕಾಳ್ ವೈದ್ಯ ಭಟ್ಕಳ ಡಿ.ವೈ.ಎಸ್ಪಿ ಮಹೇಶ ಕೆ. ಅವರಿಗೆ ಹಸ್ತಾಂತರ ಮಾಡಿದ್ದಾರೆ.

ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಅನುಧಾನದ ನಿಧಿಯಿಂದ ಒಟ್ಟು 35 ಲಕ್ಷ ಮೌಲ್ಯದ 2 ವಾಹನವನ್ನು ಅದರಲ್ಲಿ ಒಂದು ವಾಹನವನ್ನು ಭಟ್ಕಳ ಡಿ.ವೈ.ಎಸ್ಪಿಗೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಂಕಾಳ್ ವೈದ್ಯ ಕೇಂದ್ರ ಸರ್ಕಾರ 15 ವರ್ಷದ ಹಳೆಯ ವಾಹನವನ್ನು ತೆಗೆಯುವಂತೆ ಹೇಳಿದನ್ನು ಬಿಟ್ಟರೇ ಯಾರಿಗೂ ವಾಹನವನ್ನು ನೀಡಿಲ್ಲ ಆದರೆ ನಮ್ಮ ಸರ್ಕಾರ ಓರ್ವ ಶಾಸಕನಿಗೆ ಶಾಸಕ ನಿಧಿಯಿಂದ 2 ವಾಹನವನ್ನು ಪೊಲೀಸ ಇಲಾಖೆಗೆ ನೀಡಿದೆ. ಅದರಲ್ಲಿ ಒಂದನ್ನು ಇಂದು ಭಟ್ಕಳ ಡಿ.ವೈಎಸ್ಪಿ ಗೆ ಹಸ್ತಾಂತರ ಮಾಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಮುರುಡೇಶ್ವರ ಠಾಣೆಯ ಪಿ.ಎಸ್.ಐ ಹನುಮಂತಪ್ಪ ಬಿರಾದಾರ್ ಉಪಸ್ಥಿತರಿದ್ದರು
コメント