top of page

ಸಿ.ಎಂ , ಡಿಸಿಎಂ ಗೆ ಕಿವಿಮಾತು ಹೇಳಿದ ಖರ್ಗೆ

  • Writer: Ananthamurthy m Hegde
    Ananthamurthy m Hegde
  • Mar 9
  • 1 min read

ಕಲಬುರಗಿ: ಕಳೆದ ಕೆಲ ತಿಂಗಳುಗಳಿಂದ ನಡೆಯುತ್ತಿದ್ದ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಿಎಂ ಸ್ಥಾನ ಬದಲಾವಣೆ ಚರ್ಚೆ ಹೇಳಿಕೆಗಳ ಬೆನ್ನಲ್ಲೆ ಕಾಂಗ್ರೆಸ್‌ ಹಿರಿಯ ನಾಯಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನು ಕಲಬುರಗಿಗೆ ಕರೆಸಿಕೊಂಡು ಬೆನ್ನುಟ್ಟಿ, ಬಳಿಕ ಕಿವಿಮಾತು ಹೇಳಿ ಕಳಿಸಿದ್ದಾರೆ.

ಕಲಬುರಗಿಯಲ್ಲಿ ಶನಿವಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ 1,000 ಕೋಟಿ ರೂ. ವೆಚ್ಚದಲ್ಲಿ 1,150 ಕಿ.ಮೀ ರಸ್ತೆ ನಿರ್ಮಿಸುವ 'ಕಲ್ಯಾಣ ಪಥ' ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ಇತ್ತು. ಸಿಎಂ, ಡಿಸಿಎಂ ಇಬ್ಬರನ್ನೂ ಮಲ್ಲಿಕಾರ್ಜುನ ಖರ್ಗೆ ವೇದಿಕೆ ಮೇಲೆ ಹೊಗಳಿದರು. "ಡಿಕೆ ಶಿವಕುಮಾರ್‌ ಪಕ್ಷಕ್ಕೆ ಉತ್ತಮ ನಾಯಕ ಎಂದು ನಾಯಕತ್ವ ಗುಣ ಉಲ್ಲೇಖಿಸಿದರೆ, ಸಿಎಂ ಸಿದ್ದರಾಮಯ್ಯ ಸಾಧನೆಯ, ಜನಪರ ಬಜೆಟ್‌ ಮಂಡನೆ ಮಾಡಿದ್ದಾರೆ " ಎಂದು ಖರ್ಗೆ ಹೇಳಿದರು.

ree

ಮಲ್ಲಿಕಾರ್ಜುನ ಖರ್ಗೆ ಹೇಳಿದ ಮೂರು ಕಿವಿಮಾತುಗಳೇನು?

  • ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಒಗ್ಗಟ್ಟಾಗಿ ಮುಂದೆ ಹೋಗಬೇಕು.

  • ಅಭಿವೃದ್ಧಿ ಬಿಟ್ಟು ಬೇರೆ ವಿಚಾರಗಳನ್ನು ಮಾತನಾಡಬಾರದು.

  • ಅಭಿವೃದ್ಧಿ ಮರೆತು ನಡೆದರೆ ಜನ ನಿಮ್ಮನ್ನು ಕ್ಷಮಿಸಲ್ಲ.

ಪರ ವಿರೋಧ ಹೇಳಿಕೆಗೆ ಬೀಳುತ್ತಾ ಬ್ರೇಕ್‌:

ಸಿಎಂ ಸ್ಥಾನ ಬದಲಾವಣೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಚರ್ಚೆ, ಪರ ವಿರೋಧ ಹೇಳಿಕೆಗಳು ಕಳೆದ 2-3 ತಿಂಗಳಿಂದ ಜೋರಾಗಿ ಕೇಳಿ ಬಂದಿದೆ. ಸದ್ಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಸಲಹೆ, ಸೂಚನೆ ನೀಡದ ಬಳಿಕ ಈ ಅಧಿಕಾರ ಬದಲಾವಣೆ ಚರ್ಚೆ, ಹೇಳಿಕೆಗಳಿಗೆ ಕಡಿವಾಣ ಬೀಳುತ್ತದೆಯೋ ಕಾದುನೋಡಬೇಕಿದೆ.

'ಕಲ್ಯಾಣ ಪಥ' ಯೋಜನೆಗೆ ಚಾಲನೆ:

''ರಾಜ್ಯದ ಯಾವುದೇ ಅಭಿವೃದ್ಧಿ ಯೋಜನೆ ಆರಂಭಿಸಬೇಕಿದ್ದರೆ ಅದನ್ನು ಕಲ್ಯಾಣ ಕರ್ನಾಟಕದಿಂದ ಶುರುಮಾಡಿ,'' ಎಂದು ಸೂಚಿಸಿದ ಖರ್ಗೆ, ''ಇಲ್ಲಿಂದ ಆರಂಭಿಸಿದ ಯೋಜನೆ ಬೆಂಗಳೂರುವರೆಗೆ ತಲುಪುತ್ತದೆ. ಇದರಿಂದ ನಿಮ್ಮ ಕಲ್ಯಾಣವೂ ಆಗಲಿದೆ. ನೀವು ಮೈಸೂರಿನಿಂದ ಯೋಜನೆಗಳನ್ನು ಆರಂಭಿಸಿದರೆ ಬೆಂಗಳೂರಿಗೇ ನಿಲ್ಲುತ್ತದೆ,'' ಎಂದು ಸಿಎಂ ಸಿದ್ದರಾಮಯ್ಯಗೆ ಟಾಂಗ್‌ ನೀಡಿದರು.

ಸಮಾನ ಅನುದಾನ ನೀಡಿ ಎಂದು ಸಲಹೆ:

ಡಿಸಿಎಂ ಡಿ.ಕೆ.ಶಿವಕುಮಾರ ಮಾತನಾಡುವಾಗ ಕಲ್ಯಾಣ ಕರ್ನಾಟಕಕ್ಕೆ ನಮ್ಮ ಸರಕಾರ 5,000 ಕೋಟಿ ರೂ. ನೀಡುತ್ತಿದೆ ಎಂದು ಹೇಳಿದ್ದರು. ನಂತರ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತ್ಯುತ್ತರ ನೀಡಿ, ''ಸ್ವಾಮಿ, 5,000 ಕೋಟಿ ಅಲ್ಲ ಲಕ್ಷ ಕೋಟಿ ರೂ. ಕೊಟ್ಟರೂ ನಿಮ್ಮಷ್ಟು ನಾವು ಅಭಿವೃದ್ಧಿ ಆಗುವುದಿಲ್ಲ. ನಮ್ಮ ಭಾಗ ನಿಮ್ಮಷ್ಟೇ ಅಭಿವೃದ್ಧಿಯಾಗಬೇಕೆಂದರೆ ನಿಮ್ಮಷ್ಟೇ ಸಮಾನ ಅನುದಾನ ನಮಗೂ ಕೊಡಬೇಕು,'' ಎಂದರು.

Comments


Top Stories

bottom of page