ಸೈಕಲ್ ಜಾಥ ಮೂಲಕ ಪರಿಸರ ಜಾಗೃತಿ
- Ananthamurthy m Hegde
- Nov 29, 2024
- 1 min read
ಶಿರಸಿ : ಹಸಿರಿಗಾಗಿ ಸೈಕಲ್ ಬಳಸಿ, ಸುಲಭ ಸಂಚಾರಕ್ಕಾಗಿ ಸೈಕಲ್ ತುಳಿಯಿರಿ, ಇಂದು ಸೈಕಲ್ ತುಳಿದರೆ ನಾಳೆ ಉತ್ತಮ ಆರೋಗ್ಯ ಎಂಬ ಘೋಷ ವಾಕ್ಯದಿಂದ ಟೂರ್ ಆಪ್ ಕರ್ನಾಟಕ ಬಳಗ ಸೈಕಲ್ ಜಾಥ ಮೂಲಕ ಪರಿಸರ ಕಾಳಜಿ ಮೆರೆಯುತ್ತಿದೆ.
2015ರಲ್ಲಿ ಕೇವಲ 15 ಮಂದಿಯಿಂದ ಪ್ರಾರಂಭಗೊಂಡ ಸೈಕಲ್ ಪ್ರವಾಸದಲ್ಲಿ ಇದೀಗ ಬರೋಬ್ಬರಿ 200 ಕ್ಕೂ ಹೆಚ್ಚು ಪ್ರವಾಸಿಗರು ಸೇರ್ಪಡೆಗೊಂಡಿದ್ದಾರೆ. ಆರೋಗ್ಯ ದೃಷ್ಠಿಯಿಂದ ಪ್ರಾರಂಭಗೊಂಡ ಸೈಕಲ್ ಪ್ರವಾಸ ಇದೀಗ ರಾಜ್ಯ ಮೂಲೆ ಮೂಲೆಗಳನ್ನ ತಲುಪಿದೆ. ಇದೀಗ ಧರ್ಮಸ್ಥಳದಿಂದ ಆರಂಭಗೊಂಡ ಸೈಕಲ್ ಪ್ರವಾಸ ಉಡುಪಿ, ಸಾಗರದಿಂದ ಶಿರಸಿ ತಲುಪಿದೆ. ಇನ್ನು ಶಿರಸಿಯಿಂದ ಕಾರವಾರದಲ್ಲಿ ಅಂತ್ಯಗೊಳ್ಳಲಿದೆ. ಸೈಕಲ್ ಪ್ರವಾಸದಿಂದ ಆರೋಗ್ಯ ವೃದ್ಧಿಸೋ ಜೊತೆಗೆ ಪಕೃತಿ ಸೊಬಗನ್ನ ಕಣ್ತುಂಬಿದಂತಾಗುತ್ತದೆ ಎನ್ನುತ್ತಾರೆ ಸೈಕಲ್ ಪ್ರವಾಸಿಗರು.
Comments