top of page

ಸ್ಟೆಮ್ ಲ್ಯಾಬ್ ಹೊಂದಿದ ಮೊದಲ ಸರ್ಕಾರಿ ಶಾಲೆ !

  • Writer: Ananthamurthy m Hegde
    Ananthamurthy m Hegde
  • Jan 1
  • 1 min read
ree

ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಸ್ಟೆಮ್ ಲ್ಯಾಬ್ ಅಳವಡಿಸಲಾಗಿದೆ. ಇದೇ ಮೊದಲ ಬಾರಿ ಸರ್ಕಾರಿ ಶಾಲೆಯಲ್ಲಿ ಅಳವಡಿಸಿದ್ದು. ಸ್ಟೆಮ್ ಲ್ಯಾಬ್ ಎಂದರೆ ಸೈನ್ಸ್, ಟೆಕ್ನಾಲಜಿ, ಇಂಜಿನಿಯರಿಂಗ್, ಮ್ಯಾತ್ಸ್ ಲ್ಯಾಬ್ ಎಂದರ್ಥ. ಈಗಾಗಲೇ ಮಧ್ಯಪ್ರದೇಶ, ಗೋವಾದಲ್ಲಿ ಎರಡು ವರ್ಷದ ಹಿಂದೆಯೇ ಜಾರಿಯಾಗಿರುವ ಈ ಲ್ಯಾಬ್ ಕರ್ನಾಟಕದ ಖಾಸಗಿ ಶಾಲೆಗಳಲ್ಲಿರಬಹುದು. ಆದರೆ ಸರ್ಕಾರಿ ಶಾಲೆಗಳಲ್ಲಿ ಇದೇ ಮೊದಲ ಬಾರಿಗೆ ಸ್ಟೆಮ್ ಲ್ಯಾಬ್‌ನ್ನು ಅಳವಡಿಸಲಾಗಿದೆ. ಇದನ್ನು ಸ್ಕೋಡ್‌ ವೇಸ್‌ ಹಾಗೂ ದೇಸಾಯಿ ಫೌಂಡೇಶನ್ ಅವರು ಮಾರಿಕಾಂಬಾ ಪ್ರೌಢಶಾಲೆಗೆ ನೀಡಿದ್ದಾರೆ. ಪ್ರಸ್ತುತ 1500 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಮಕ್ಕಳಿಗೆ 8, 9, 10 ನೇ ತರಗತಿಯಲ್ಲಿಯೇ ರೋಬೋಟಿಕ್ಸ್ ಹೇಳಿಕೊಡಲಾಗುತ್ತಿದೆ. ಸ್ಟೆಮ್ ಲ್ಯಾಬ್‌ನಲ್ಲಿ ರೋಬೋಟಿಕ್ಸ್ ಅನ್ನು ಮಕ್ಕಳಿಗೆ ಬೋಧಿಸಲಾಗಿದ್ದು, ಮಕ್ಕಳು ಇಂಜಿನಿಯರಿಂಗ್ ಹಾಗೂ ಟೆಕ್ನಾಲಜಿಯ ಬಗ್ಗೆ 8 ನೇ ತರಗತಿಯಲ್ಲಿಯೇ ಕಲಿಯುತ್ತಿದ್ದಾರೆ. ಇದರಿಂದ ಅವರಿಗೆ ಹೊಸ ಅನುಭವ ದಕ್ಕುತ್ತಿದೆ. ಹೀಗೆ ರೋಬೋಟಿಕ್ಸ್, ಇಂಜಿನಿಯರಿಂಗ್ ಹಾಗೂ ಎ ಐ(AI) ನಂತರ ವಿಷಯಗಳನ್ನು ಈ ಶಾಲೆಯಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಆ ಮೂಲಕ ಸರ್ಕಾರಿ ಶಾಲೆ ಯಾವುದಕ್ಕೂ ಕಮ್ಮಿಯಿಲ್ಲ ಎಂಬುದಕ್ಕೆ ಮಾರಿಕಾಂಬಾ ಪ್ರೌಢಶಾಲೆ ಸಾಕ್ಷಿಯಾಗಿದೆ.

Comments


Top Stories

bottom of page