top of page

ಸಿ.ಟಿ ರವಿ ಅವಾಚ್ಯ ಪದ ಬಳಕೆ ಆರೋಪ : ಹೆಬ್ಬಾರ್ ಖಂಡನೆ

  • Writer: Ananthamurthy m Hegde
    Ananthamurthy m Hegde
  • Dec 21, 2024
  • 1 min read


ಮುಂಡಗೋಡ: ಸಿ.ಟಿ ರವಿ ಅವರೇ ಆಗಲಿ ಯಾರೇ ಆಗಲಿ ಮಹಿಳೆಯರ ಬಗ್ಗೆ ಅಗೌರವಾಗಿ ನಡೆದುಕೊಳ್ಳುವ ರೀತಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಪ್ರವಾಸ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಸಿ.ಟಿ ರವಿ ಅವರು ಅವಾಚ್ಯ ಪದ ಬಳಕೆ ಮಾಡಿದಿದ್ದರೆ ಅದು ಅಕ್ಷಮ್ಯ ಅಪರಾಧ. ಅವರು ಶಾಸಕರಾಗಿ ಮಂತ್ರಿಗಳಾಗಿದ್ದವರು. ಸದನದಲ್ಲಿ ಏನೆಲ್ಲಾ ಶಬ್ದ ಉಪಯೋಗಿಸುತ್ತಿರುವುದು ಸಮಾಜಕ್ಕೆ ಶೋಭೆ ತರುವುದಿಲ್ಲ. ಉನ್ನತ ಸ್ಥಾನದಲ್ಲಿರುವವರ ಬಾಯಲ್ಲಿ ಅಂತಹ ಶಬ್ದ ಬರಬಾರದು. ಬಹಳಷ್ಟು ಜವಾಬ್ದಾರಿಯುತವಾಗಿ ಶಬ್ದ ಬಳಕೆ‌ ಮಾಡಬೇಕು, ಇತರರಿಗೆ ಆದರ್ಶವಾಗಿರಬೇಕು.ನಮ್ಮಂತವರ ಬಾಯಲ್ಲಿ ಇಂತಹ ಶಬ್ದ ಬಂದರೆ ಸಮಾಜ ನಮ್ಮನ್ನು ಏನನ್ನುತ್ತೆ ? ಅದು ಯಾವುದೇ ರಾಜಕೀಯ ಪಕ್ಷವಾಗಿರಬಹುದು, ಸಮಾಜದಲ್ಲಿ ಸ್ತ್ರೀಯರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ‌ ಇರಬೇಕು.

ಈ ರೀತಿಯ ಹೇಳಿಕೆ ಅಕ್ಷಮ್ಯ ಅಪರಾಧವಾಗಿದ್ದು, ಅದನ್ನು ಖಂಡಿಸುತ್ತೇನೆ. ಸಂಬಂಧಪಟ್ಟವರು ದೂರು ಸಲ್ಲಿಸಿದಾಗ ಕಾನೂನು ತನ್ನ ಕೆಲಸ ಮಾಡೇ ಮಾಡುತ್ತದೆ ಎಂದು‌ ಅವರು ಹೇಳಿದರು.

Comments


Top Stories

bottom of page