ಸಿಡಿಲು ಬಡಿದು ಹಾನಿ
- Ananthamurthy m Hegde
- Dec 6, 2024
- 1 min read

ಸಿದ್ದಾಪುರ: ಭೀಕರ ಸಿಡಿಲು ಬಡಿದ ಪರಿಣಾಮ ತಾಲೂಕಿನ ಬೇಡ್ಕಣಿಯ ಮನೆಯೊಂದರಲ್ಲಿ ಅಪಾರ ಹಾನಿ ಸಂಭವಿಸಿದೆ . ಮೀಟರ್ ಬೋರ್ಡ್ ಸ್ವಿಚ್ ಬೋರ್ಡ್ ಗಳಿಗೆ ಹಾನಿಯಾಗಿದ್ದು, ಟಿವಿ, ಎಲೆಕ್ಟ್ರಿಕಲ್ ವಸ್ತುಗಳು ನಾಶವಾಗಿವೆ. ಸಿಡಿಲಿನ ರಭಸಕ್ಕೆ ಮನೆಯ ಗೋಡೆ ಬಿರುಕು ಬಿಟ್ಟಿದೆ. ಇಬ್ಬರ ಕೈಗೆ ಸಿಡಿಲಿನ ಶಾಕ್ ತಗುಲಿದ್ದು ಅದೃಷ್ಟ ವಶಾತ್ ಅಪಾಯದಿಂದ ಜನರು ಪಾರಾಗಿದ್ದಾರೆ. ಅಂದಾಜು 35 ಸಾವಿರ ರೂ ನಷ್ಟ ಸಂಭವಿಸಿದೆ .
Comentários