ಸಿದ್ದಾಪುರ: ಕೆರೆ ಬೇಟೆಗೆ ಬಂದು ಮೀನು ಸಿಗದಿದ್ದಕ್ಕೆ ಆಕ್ರೋಶ
- Oct 21, 2024
- 1 min read
Updated: Oct 22, 2024
ಮೇ 29: ದೇವಾಲಯದ ಕಟ್ಟಡ ನಿರ್ಮಾಣ ಸಹಾಯಾರ್ಥವಾಗಿ ಕೆರೆಯಲ್ಲಿನ ಮೀನು ಹಿಡಿಯುವುದಕ್ಕಾಗಿ ದೇವಸ್ಥಾನ ಕಮಿಟಿ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು.
ಮೀನು ಬೇಟೆಗಾಗಿ ಆಗಮಿಸಿದ್ದ ಸಾವಿರಾರು ಮಂದಿ ಕೆರೆಗೆ ಇಳಿದಿದ್ರು. ಆದರೆ ಕೆರೆಯಲ್ಲಿ ಮೀನು ಸಿಕ್ಕಿಲ್ಲ ಅನ್ನೋ ಕಾರಣಕ್ಕೆ ರೊಚ್ಚಿಗೆದ್ದ ಜನರು ಮೀನು ಬೇಟೆ ಆಯೋಜನೆ ಮಾಡಿದ ಸಮಿತಿ ವಿರುದ್ಧವೇ ಆಕ್ರೋಶಗೊಂಡು ಗಲಾಟೆ ನಡೆಸಿದ್ದು, ಪೆಂಡಾಲ್ ಸೇರಿದಂತೆ ಸಿಕ್ಕ ವಸ್ತುಗಳನ್ನೆಲ್ಲ ಹೊತ್ತೊಯ್ದಿದ್ದಾರೆ.
ಮೀನು ಗಲಾಟೆಗೆ ಸುಖಾಂತ್ಯ ಮೀನು ಬೇಟೆಗಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದ ಸಮಿತಿ ಪ್ರತಿ ಕುಣಿಕೆಗೆ 600 ರೂಪಾಯಿ ಹಣ ಪಡೆದುಕೊಳ್ಳಲಾಗಿತ್ತು. ಅದರಂತೆ 3000 ಸಾವಿರ ಜನರು 600ರೂಪಾಯಿ ಹಣ ನೀಡಿ ಪ್ರವೇಶ ಪಡೆದು ಕೆರೆಯಲ್ಲಿ ಮೀನು ಬೇಟೆಗೆ ಇಳಿದಿದ್ದರು. ಆದರೆ ಕೆರೆಗೆ ಇಳಿದ ಬಹುತೇಕರಿಗೆ ಒಂದೇ ಒಂದು ಮೀನು ಸಿಕ್ಕಿರಲಿಲ್ಲ ಇದರಿಂದ ಆಕ್ರೋಶಕ್ಕೊಳಗಾದ ಮತ್ಸ್ಯ ಪ್ರಿಯರು ಕಾರ್ಯಕ್ರಮ ಆಯೋಜನೆ ಮಾಡಿದ್ದ ಸಂಘಟಕರ ವಿರುದ್ದ ಆಕ್ರೋಶಗೊಂಡು ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಶಾಮಿಯಾನವನ್ನು ಕಿತ್ತರಲ್ಲದೆ, ಸೌಂಡ್ ಬಾಕ್ಸ್, ಸ್ಪೀಕರ್, ಸೇರಿದಂತೆ ಸಿಕ್ಕ ವಸ್ತುಗಳನ್ನು ಹೊತ್ತೊಯ್ದಿದ್ದಾರೆ.

ಸಮಿತಿ ಸದಸ್ಯರ ಮೇಲೂ ಹಲ್ಲೆ ನಡೆಸಿದ್ದು ಸ್ಥಳಕ್ಕೆ ಆಗಮಿಸಿ ಪೊಲೀಸರ ಮೇಲೆ ಸಹ ಜನರು ಆಕ್ರೋಶ ಹೊರಹಾಕಿ ಹಲ್ಲೆ ಮಾಡಿದ್ದಾರೆ. ಒಟ್ಟಾರೆ ಸಿದ್ದಾಪುರ ತಾಲೂಕಿನ ಕಾನಗೋಡದಲ್ಲಿ ಆಯೋಜನೆ ಮಾಡಲಾಗಿದ್ದ ಕೆರೆ ಮೀನು ಬೇಟೆ ಗಲಾಟೆ ಕೊನೆಗೂ ಪೊಲೀಸರು ಕಾರ್ಯಕ್ರಮ ಆಯೋಜಕರ ಜೊತೆ ಮಾತುಕತೆ ನಡೆಸಿ ಜನರ ಹಣವನ್ನು ವಾಪಸ್ ಕೊಡಿಸೋ ಮೂಲಕ ಕೆರೆ ಮೀನು ಗಲಾಟೆಗೆ ಸುಖಾಂತ್ಯ ಹಾಡಿದ್ದಾರೆ.
Comments