ಸಿದ್ದಾಪುರ; ಹೆಗ್ಗರಣಿಯಲ್ಲಿರುವ ಉಂಚಳ್ಳಿ ಜಲಪಾತದ ಸೊಬಗು; ತಲುಪುವ ಮಾರ್ಗ
- Oct 21, 2024
- 1 min read
Updated: Oct 22, 2024
ಕಾರವಾರ, ಅಕ್ಟೋಬರ್, 07: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗರಣಿ ವ್ಯಾಪ್ತಿಯಲ್ಲಿ ಕಂಡುಬರುವ ಉಂಚಳ್ಳಿ ಜಲಪಾತದ ಸೊಬಗನ್ನು ನೋಡಲು ಪ್ರವಾಸಿಗರು ನಿತ್ಯ ಕಕ್ಕಿರಿದು ಬರುತ್ತಾರೆ. ಹಚ್ಚ ಹಸಿರಿನ ಅರಣ್ಯದ ನಡುವೆ ಬಿಳಿ ಹಾಲ್ನೊರೆಯಂತೆ ದುಮ್ಮಿಕ್ಕುವ ಈ ಜಲಪಾತ ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತದೆ. ಮಳೆಗಾಲದಲ್ಲಿ ಇದರ ಸೌಂದರ್ಯ ಇನ್ನು ಹೆಚ್ಚಾಗಿರುತ್ತದೆ. ಅಲ್ಲದೆ ನೂರಾರು ಮೀಟರ್ ದೂರಕ್ಕೆ ದುಮ್ಮಿಕ್ಕುವ ಈ ಜಲಧಾರೆಯ ಸದ್ದು ನೋಡುಗರರನ್ನು ತನ್ನತ್ತ ಸೆಳೆದೇ ಬಿಡುತ್ತದೆ.
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗರಣಿ ವ್ಯಾಪ್ತಿಯಲ್ಲಿ ಈ ಜಲಪಾತ ಕಂಡುಬರುತ್ತದೆ. ಇಲ್ಲಿ ನೀರಿನ ಬೋರ್ಗರೆತದ ಸದ್ದು ಕಿವಿಗೆ ಇಂಪು ನೀಡುತ್ತದೆ. ಇದನ್ನು ಕೆಪ್ಪ ಜೋಗ ಎಂತಲೂ ಕರೆಯಲಾಗುತ್ತದೆ. 1875ರಲ್ಲಿ ಬ್ರಿಟಿಷ್ ಅಧಿಕಾರಿ ಜೆ.ಡಿ. ಲೂಶಿಂಗ್ಟನ್ ಅವರು ಜಲಪಾತವನ್ನು ಗುರುತಿಸಿದ್ದರು ಎನ್ನಲಾಗಿದೆ. ಆದ್ದರಿಂದ ಇದನ್ನು ಲೂಶಿಂಗ್ಟನ್ ಜಲಪಾತ ಎಂತಲೂ ಕರೆಯುತ್ತಾರೆ.
ಅಘನಾಶಿನಿ ನದಿಗೆ ಹೊಂದಿಕೊಂಡಿರುವ ಈ ಜಲಪಾತಕ್ಕೆ ನೀರು ಮಲೆನಾಡಿನ ನದಿ ಮೂಲಗಳಿಂದ ಹರಿದುಬರುತ್ತದೆ. ಕೊನೆಗೆ ಇದು ಕರಾವಳಿಯ ಕುಮಟಾದಲ್ಲಿ ಕಡಲಿನ ಮಡಿಲು ಸೇರುತ್ತದೆ. ಮಳೆಗಾಲದಲ್ಲಿ ಕೆಸರು ನೀರಿನಿಂದ ದುಮ್ಮಿಕ್ಕುವಾಗ ಅದರ ಸೌಂದರ್ಯ ವರ್ಣಿಸುವುದಕ್ಕೂ ಅಸಾಧ್ಯವಾಗಿರುತ್ತದೆ. ಬೆಳಗಿನ ಸಮಯದಲ್ಲಿ ಜಲಧಾರೆಯ ಬಳಿ ಇಬ್ಬನಿ ಮುಸಿಕಿದ ವಾತವರಣ ಇದ್ದು, ಜಲಪಾತದ ಸಂಪೂರ್ಣ ದೃಶ್ಯ ಗೋಚರವಾಗುವುದಿಲ್ಲ. ಆದರೂ ಕಾದು ನೋಡುವವರಿಗೆ ಜಲಾಪಾತದ ಸ್ವರ್ಗ ದರ್ಶನ ಗೋಚರವಾಗುತ್ತದೆ. ಮಳೆಗಾಲ ಮುಗಿದು ಕೆಲ ತಿಂಗಳುಗಳವರೆಗೂ ಜಲಪಾತ ವೀಕ್ಷಣೆಗೆ ಯೋಗ್ಯವಾದ ಸಮಯವಾಗಿದೆ

ಕಾಲ್ನಡಿಗೆಯಲ್ಲಿ ಸಾಗುವುದು ಅನಿವಾರ್ಯ ಇನ್ನು ಜಲಪಾತ ವೀಕ್ಷಣೆಗೆ ತೆರಳುವವರು ಒಂದು ಕಿಲೋ ಮೀಟರ್‌ಗೂ ಹೆಚ್ಚು ಕಾಲ್ನಡಿಗೆಯಲ್ಲಿ ಸಾಗಬೇಕಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಮೆಟ್ಟಿಲುಗಳ ವ್ಯವಸ್ಥೆ ಮಾಡಲಾಗಿದ್ದು, ಜಲಪಾತ ವೀಕ್ಷಣೆಗೆ ಎರಡು ವೀಕ್ಷಣಾ ಗೋಪುರ ಕೂಡ ಇವೆ. ಈ ಗೋಪುರದ ಮೇಲೆ ಹತ್ತಿದರೆ ಸಾಕು ಎರಡು ಕಡೆಯಿಂದಲೂ ಜಲಪಾತದ ಸೌಂದರ್ಯ ಸ್ಪಷ್ಟವಾಗಿ ಗೋಚರವಾಗುತ್ತದೆ. ಅಲ್ಲದೆ ಕುಳಿತುಕೊಳ್ಳುವುದಕ್ಕೆ ಆಸನದ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಜಲಪಾತದ ಸಮೀಪದಲ್ಲಿಯೇ ಅಂಗಡಿ ಇದೆ ಆದರೂ, ಆ ಅಂಗಡಿ ಎಲ್ಲ ದಿನವೂ ತೆರೆಯುವುದಿ
Comments