ಸಿದ್ದಾಪುರದ ಒಂಟಿ ಮಹಿಳೆ ಕೊಲೆ; ಆರೋಪಿ ಬಂಧನ
- Ananthamurthy m Hegde
- Dec 31, 2024
- 1 min read
ಡಿ.25ರಂದು ಸಿದ್ದಾಪುರದಲ್ಲಿ ಪಿಗ್ಮಿ ಸಂಗ್ರಹಿಸುತ್ತಿದ್ದ ಮಹಿಳೆಯ ಕೊಲೆ ನಡೆದಿತ್ತು. ಆದರೆ ಕೊಲೆ ಹೇಗೆ ನಡೆದಿತ್ತು, ಮತ್ತು ಯಾರು? ಯಾಕೆ? ಕೊಲೆಯನ್ನು ಮಾಡಿದ್ದರು ಎಂಬುವುದರ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಪೊಲೀಸರು ನಿರಂತರ ಪ್ರಯತ್ನದಿಂದ ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ. ಪಟ್ಟಣ ವ್ಯಾಪ್ತಿಯ 30 ವರ್ಷದ ಅಭಿಜಿತ್ ಗಣಪತಿ ಮಡಿವಾಳ್ ಪೊಲೀಸರ ಅಥಿತಿಯಾಗಿದ್ದಾನೆ. ಕೊಲೆಯಾಗಿದ್ದ ಮಹಿಳೆ ಗೀತಾ ಹುಂಡೆಕರ್ ಪಟ್ಟಣದ ವಿನಾಯಕ ಸೌಹಾರ್ದ ಬ್ಯಾಂಕ್ ನಲ್ಲಿ ಪಿಗ್ಮಿಯನ್ನು ಸಂಗ್ರಹಿಸುತ್ತಿದ್ದಳು. ಸಿದ್ದಾಪುರ ಪೊಲೀಸರ ಯಶಸ್ವಿ ಕಾರ್ಯಾಚರಣೆಯಿಂದ ಆರೋಲಿಯು ಸಿಕ್ಕಿಕೊಂಡಿದ್ದಾನೆ .
Comments