ಸಿದ್ದಾಪುರದಲ್ಲಿ ಗೇರು ಸಸಿ ನಾಟಿ ಕುರಿತು ಮಾಹಿತಿ ಕಾರ್ಯಾಗಾರ
- Ananthamurthy m Hegde
- Oct 30, 2024
- 1 min read
ಸಿದ್ದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಹಣಜೀಬೈಲ್ನಲ್ಲಿ ಗೇರು ಸಸಿ ನಾಟಿ ಕುರಿತು ಮಾಹಿತಿ ಕಾರ್ಯಗಾರ ನಡೆಯಿತು. ತಾಲೂಕಿನ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಪ್ರಶಾಂತ ಜಿ.ಎಸ್ ಗೇರು ಸಸಿ ನಾಟಿಯ ಬಗ್ಗೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು.
ಗೇರು ಕೃಷಿಯು ರಾಜ್ಯದಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿರುವುದನ್ನು ಮನಗಂಡ ಕರ್ನಾಟಕ ಗೇರು ಉತ್ಪಾದಕರ ಒಕ್ಕೂಟ ಮತ್ತು ವಿಜಯಲಕ್ಷ್ಮೀ ಪ್ರತಿಷ್ಠಾನ ಮೂಡಬಿದರೆ ಇವರ ರೈತರಿಗೆ ಉತ್ಕೃಷ್ಟ ಗುಣಮಟ್ಟದ ಗೇರು ಗಿಡಗಳನ್ನು ಒದಗಿಸಲು ಕಾರ್ಯಯೋಜನೆ ರೂಪಿಸಿದೆ. 2016ನೇ ಸಾಲಿನಲ್ಲಿ ಆರಂಭವಾದ ಈ ಯೋಜನೆಯಡಿಯಲ್ಲಿ ಒಟ್ಟು 21000 ರೈತರಿಗೆ ಒಟ್ಟು 10 ಲಕ್ಷ ಕಸಿ ಗೇರು ಗಿಡಗಳನ್ನು ಒದಗಿಸಿದ್ದಾರೆ ಎಂದು ಸಂಘದ ತಾಲೂಕು ಯೋಜನಾಧಿಕಾರಿ ಗಿರೀಶ್ ಜಿಪಿ ತಿಳಿಸಿದರು.
ತಾಲೂಕಿನ 88 ರೈತರಿಗೆ ಒಟ್ಟು 4300 ಸಸಿ ವಿತರಣೆ ಮಾಡಲಾಯಿತು. ಕೃಷಿ ಮೇಲ್ವಿಚಾರಕ ಮಹಾದೇವ ನಿರೂಪಿಸಿದರು. ಸ್ಥಳೀಯ ಮೇಲ್ವಿಚಾರಕಿ ಜ್ಯೋತಿ ಸೇವಾ ಪ್ರತಿನಿಧಿಗಳಾದ ಚಂದ್ರಮತಿ ಹಾಗೂ ವಿಜಯಲಕ್ಷ್ಮಿ ಉಪಸ್ಥಿತರಿದ್ದರು.














Comments