ಸಿದ್ದಾಪುರಲ್ಲಿ ಕರ್ನಾಟಕ ಸಂಭ್ರಮ ಜ್ಯೋತಿ ರಥಕ್ಕೆ ಅದ್ದೂರಿ ಸ್ವಾಗತ
- Ananthamurthy m Hegde
- Oct 30, 2024
- 1 min read
ಸಿದ್ದಾಪುರ : ಕರ್ನಾಟಕ ಸಂಭ್ರಮ-೫೦ರ ಜ್ಯೋತಿ ರಥ ಯಾತ್ರೆಯು ಮಂಗಳವಾರ ಬೆಳಿಗ್ಗೆ ಸಿದ್ದಾಪುರ ತಾಲೂಕಿಗೆ ಆಗಮಿಸುತ್ತಿದ್ದಂತೆ ತಾಲೂಕಿನ ಗಡಿ ಭಾಗದ ಕಾನಸೂರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಸಿದ್ದಾಪುರ ಪಟ್ಟಣಕ್ಕೆ ಬಂದ ರಥಕ್ಕೆ ಪಟ್ಟಣದ ತಿಮ್ಮಪ್ಪ ನಾಯಕ ಸರ್ಕಲ್ ಬಳಿ ಪಟ್ಟಣ ಪಂಚಾಯತ, ತಾಲೂಕು ಆಡಳಿತ, ಕಸಾಪ ಹಾಗೂ ಕನ್ನಡ ಅಭಿಮಾನಿಗಳಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯೇಂದ್ರ ಗೌಡರ್ ದೇವಿಗೆ ಮಾಲೆ ಹಾಕಿ ಪೂಜಿಸಿದರು. ನಂತರ ಬೇಡರ ವೇಷ, ವೀರಗಾಸೆ, ಡೊಳ್ಳು ಕುಣಿತ ಯಕ್ಷಗಾನ ವೇಷದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ತಾಲೂಕ ಆಡಳಿತ ಸೌಧ ಬಳಿ ಆಗಮಿಸಿ ಸಮಾರೋಪಗೊಂಡಿತು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ಗೋಪಾಲ್ ಭಾಷಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ನಾಯಕ್, ಉಪ ತಹಸೀಲ್ದಾರ್ ಶಾಮ್ ಸುಂದರ್, ವಿವಿಧ ಇಲಾಖೆಯ ಅಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ವಿದ್ಯಾರ್ಥಿಗಳು, ವಿವಿಧ ಕನ್ನಡ ಪರ ಸಂಘಟನೆ ಹೋರಾಟಗಾರರು ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು.














Comments