ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಾಗಿ ಹೇಳಿ ಮೋಸ!
- Ananthamurthy m Hegde
- Dec 30, 2024
- 1 min read

ಜಗತ್ತಿನಲ್ಲಿ ಎಲ್ಲಿಯವರೆಗೂ ಮೋಸ ಹೋಗುವವರು ಇರುತ್ತಾರೋ, ಅಲ್ಲಿಯವರೆಗೂ ವಂಚಕಾರು ಮೋಸ ಮಾಡುತ್ತಲೇ ಇರುತ್ತಾರೆ. ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡುವ ವ್ಯಕ್ತಿಗಳು ನಮ್ಮ ಕಣ್ಣ ಮುಂದೆಯೇ ಕಾಣ ಸಿಗುತ್ತಾರೆ. ಕೆಎಎಸ್ ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಪಾಸ್ ಮಾಡಿಸೋದಾಗಿ ನಂಬಿಸಿದ ವಂಚಕ ಗೋವಿಂದರಾಜು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಎಸಿಪಿ ಚಂದನ್ ಕುಮಾರ್ ಅಂಡ್ ಟೀಂ ಆರೋಪಿಯೊಯನ್ನು ಬಂಧಿಸಿದ್ದಾರೆ. ವಂಚಕ ಕೆಎಎಸ್, ಪಿಡಿಒ, ಪಿಎಸ್ಐ, ಎಫ್ ಡಿಎ ಸೇರಿದಂತೆ ವಿವಿಧ ಪರೀಕ್ಷೆ ಬರೆಯಲು ಸಿದ್ದರಾಗಿರುವ ಅಭ್ಯರ್ಥಿಗಳಿಂದ ಎಕ್ಸಾಮ್ ಪಾಸ್ ಮಾಡಿಸೋದಾಗಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿದ್ದನು .
ಗೊತ್ತಿರೋದನ್ನ ಬರೆದ ಉಳಿದದ್ದು ಖಾಲಿ ಬಿಟ್ಟು ಬರುವಂತೆ ಸೂಚಿನೆ
ಅಬ್ಯರ್ಥಿಗಳಿಗೆ ಈ ವಂಚಕ, ನಿಮಗೆ ಗೊತ್ತಿರೋದನ್ನ ಬರೆದ ಉಳಿದದ್ದನ್ನು ಖಾಲಿ ಬಿಟ್ಟು ಬರುವಂತೆ ಸೂಚಿಸ್ತಿದ್ದನಂತೆ. ಅದರಂತೆ ಅವರೆಲ್ಲ ತಮಗೆ ಬರದಿರುವ ಉತ್ತರಗಳನ್ನು ಬಿಟ್ಟು ಬರುತ್ತಿದ್ದರು. ಆದರೆ ಪರೀಕ್ಷೆ ಪಾಸ್ ಆಗದಿದ್ದಾಗ, ಈತ ಮೋಸ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ. ಆರೋಪಿ ಮಾತು ನಂಬಿ ಸ್ಪರ್ಧಾಕಾಂಕ್ಷಿಗಳು ಲಕ್ಷಾಂತರ ರೂ. ಹಣ ನೀಡಿದ್ದಾರೆ. ಆರೋಪಿ ಗೋವಿಂದರಾಜು ರೇಲ್ವೇ ಉದ್ಯೋಗಿಯಾಗಿರೋದು ಬೆಳಕಿಗೆ ಬಂದಿದೆ. ಈ ಹಿಂದೆ 2019 ರಲ್ಲಿ ಸಿಸಿಬಿ ಪೊಲೀಸರು ಗೋವಿಂದರಾಜು ಮೇಲೆ ಕೇಸ್ ಮಾಡಿದ್ದರು.















Comments