ಸೈಬರ್ ಅಪರಾಧಗಳ ಜಾಗೃತಿಗಾಗಿ ಪೋಸ್ಟರ್ ಅಭಿಯಾನ
- Ananthamurthy m Hegde
- Nov 18, 2024
- 1 min read

ಶಿರಸಿ : ಶಿರಸಿಯ ಕೆನರಾ ಬ್ಯಾಂಕ್ ಹಾಗೂ ಶಿರಸಿ ನಗರ ಪೊಲೀಸ್ ಠಾಣೆಯ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗೆ ಸೈಬರ್ ಸುರಕ್ಷತೆ ಮತ್ತು ಭದ್ರತೆ ಹಾಗೂ ಅಪರಾಧಗಳ ಕುರಿತು ಜಾಗೃತಿ ಮೂಡಿಸಲು ಪೋಸ್ಟರ್ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸೋಮವಾರ ಶಿರಸಿ ಉಪವಿಭಾಗದ ಡಿಎಸ್ಪಿ ಗಣೇಶ ಕೆ ಪೊಸ್ಟರ್ ಬಿಡುಗಡೆ ಮಾಡಿ ಶಿರಸಿ ನಗರ ಠಾಣೆಯ ವತಿಯಿಂದ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಬ್ಯಾಂಕ್ ,ಬಸ್ ನಿಲ್ದಾಣ ,ಆಟೋ ಸ್ಟ್ಯಾಂಡ್ ,ಮಾಲ್ ಗಳು,ಮಾರುಕಟ್ಟೆಯಂತಹ ಜನಸಂದಣಿ ಪ್ರದೇಶಗಳಲ್ಲಿ ಪೊಸ್ಟರ್ ಅಭಿಯಾನ ಕೈಗೊಳ್ಳಲಿದ್ದು,ಸಾರ್ವಜನಿಕರು ಸಹ ಸೈಬರ್ ಸುರಕ್ಷತೆ,ಭದ್ರತೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಿರಸಿ ವೃತ್ತ ನಿರೀಕ್ಷಕ ಶಶಿಕಾಂತ ವರ್ಮಾ,ನಗರ ಠಾಣೆ ಪಿಎಸ್ಐ ನಾಗಪ್ಪ.ಬಿ, ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಜಂಜೇಶ್ವರ ಭಾವಾ,ಸಹಾಯಕ ವ್ಯವಸ್ಥಾಪಕ ಯೋಗೇಶ ಪಾಟೀಲ್ ಹಾಗೂ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು.















Comments