ಸಿರಿಧಾನ್ಯಗಳಿಂದ ನಿರ್ಮಿಸಲಾದ ಮುಮ್ಮಡಿ ಕೃಷ್ಣರಾಜ ಓಡೆಯಾರ್ ಪತ್ರಿಮೆ
- Ananthamurthy m Hegde
- Jan 3
- 1 min read

ಮೈಸೂರಿನಲ್ಲಿ ಮಾಗಿ ಉತ್ಸವ ಆಯೋಜನೆ ಮಾಡಲಾಗಿದೆ. ಈ ಉತ್ಸವದಲ್ಲಿ ಸಿರಿ ಧಾನ್ಯಗಳಿಂದ ತಯಾರಿಸಿದ ಶ್ರೀ ಮುಮ್ಮಡಿ ಕೃಷ್ಣರಾಜ ಓಡೆಯಾರ್ ಅವರ ಪತ್ರಿಮೆ ೩ ಎಲ್ಲರನ್ನು ಆಕರ್ಷಿಸುತ್ತಿದೆ. ವಿಶೇಷವಾಗಿ ಪತ್ರಿಮೆ ನಿರ್ಮಾಣ ಮಾಡಿರುವ ಸ್ಥಳದಲ್ಲೇ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಇತಿಹಾಸ ಹಾಗೂ ಅವರ ಆಡಳಿತ ಬಗ್ಗೆ ಸಂಪೂರ್ಣ ಇತಿಹಾಸವನ್ನು ನೀಡಲಾಗಿದೆ. ಇನ್ನು ವಿಶೇಷವಾಗಿ ಪ್ರತಿಮೆಯ ಸುತ್ತಲೂ ಅನೇಕ ವಿಶಿಷ್ಟ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ಸಾರ್ವಜನಿಕರು ಈ ಆಕರ್ಷಕ ಮೂರ್ತಿಯನ್ನು ಕಣ್ತುಂಬಿಕೊಳ್ಳುವುದು ಮಾತ್ರವಲ್ಲದೇ, ಇತಿಹಾಸದ ಮಾಹಿತಿಯಯನ್ನ ಕೂಡ ಪಡೆದುಕೊಳ್ಳುವ ಅವಕಾಶ ನೀಡಲಾಗಿದೆ.
ಉಳಿದಂತೆ ಹೊಸ ವರ್ಷಾಚರಣೆಯ ಪ್ರಯುಕ್ತ ಪ್ರವಾಸಿಗರನ್ನು ಅಕರ್ಷಣೆ ಮಾಡುವ ಉದ್ದೇಶದಿಂದ ಅರಮನೆಯ ಆವರಣದಲ್ಲಿ ಮಾಗಿ ಉತ್ಸವ ಏರ್ಪಡಿಸಲಾಗುತ್ತದೆ. ಈ ಮಾಗಿ ಉತ್ಸವದಲ್ಲಿ ಛಾಯಾಚಿತ್ರ ಪ್ರದರ್ಶನ ಅಯೋಜನೆ ಎಲ್ಲರ ಗಮನ ಸೆಳೆಯಿತು. ಮೈಸೂರು ಮಹಾರಾಜರ ಬಾಲ್ಯ ಮಹಾರಾಜರು ಬೆಳದು ಬಂದ ಹಾದಿ, ಮೈಸೂರು ಮಹಾರಾಜ ಇತಿಹಾಸವನ್ನು ಈ ಒಂದು ಛಾಯಾಚಿತ್ರ ಪ್ರದರ್ಶನದಲ್ಲಿ ಅನಾವರಣ ಮಾಡಲಾಗಿತ್ತು.
ಛಾಯಾಚಿತ್ರದಲ್ಲಿ ವಿಶೇಷವಾಗಿ ಚಾಮರಾಜ ಒಡೆಯರ ಅವರು ಸಿಂಹಾಸನದಲ್ಲಿ ಕುಳಿತು ದರ್ಬಾರ್ ನಡೆಸುತ್ತಿರುವ ಚಿತ್ರಗಳು. ಅವರು ನಡೆಸುತ್ತಿದ್ದ ಸಭೆ ಸಮಾರಂಭಗಳು ಹಾಗೂ ಹಳೆಯ ಮರದ ಅರಮನೆ ಹಾಗೂ ಶ್ರೀಕಂಠದತ್ತ ನರಸಿಂಹರಾಜ್ ಓಡೆಯರ್ ಅವರ ಬಳಿ ಇದ್ದ ಕಾರುಗಳು ,ರಾಜರು ಬಳಸುತ್ತಿದ್ದ ಅಯುಧಗಳ ಚಿತ್ರಗಳನ್ನು ಈ ಒಂದು ಪ್ರದರ್ಶನದಲ್ಲಿ ಏರ್ಪಡಿಸಲಾಗಿತ್ತು. ಈ ಛಾಯಾಚಿತ್ರ ವೀಕ್ಷಣೆಗೆ ವಯಸ್ಕರಿಗೆ 30 ರೂಪಾಯಿ, ಮಕ್ಕಳಿಗೆ 10 ರೂ ಗಳ ಶುಲ್ಕವನ್ನು ನಿಗಧಿ ಮಾಡಲಾಗಿತ್ತು.
Comentarios