ಸಾರಾಯಿ ನಶೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ
- Ananthamurthy m Hegde
- Nov 6, 2024
- 1 min read

ಯಲ್ಲಾಪುರ: ಉಮ್ಮಚ್ಗಿಯಲ್ಲಿ ಸಾರಾಯಿ ನಶೆಯಲ್ಲಿ ವಿಷ ಸೇವಿಸಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಜ್ಜಿಮೋಹನ ಕೃಷ್ಣ ನಾಯರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದ ಇವರು ಬಹು ವರ್ಷಗಳಿಂದ ಮದ್ಯ ವ್ಯಸನಿಯಾಗಿದ್ದರು ಮಾನಸಿಕವಾಗಿ ಕುಗ್ಗಿದ್ದ ಇವರು ನ.೩ರ ರಾತ್ರಿ ಸಾರಾಯಿಯೊಂದಿಗೆ ಕ್ರಿಮಿ ನಾಶಕ ಬೆರೆಸಿ ಸೇವಿಸಿದ್ದಾರೆ. ಈ ಕುರಿತು ಮರುದಿನ ಬೆಳಗ್ಗೆ ಗಮನಕ್ಕೆ ಬಂದಿದ್ದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Comments