ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮಿಗಳಿಗೆ ಮೆರವಣಿಗೆ ಸ್ವಾಗತ
- Ananthamurthy m Hegde
- Dec 27, 2024
- 1 min read
ಮುಂಡಗೋಡ: ಅಯ್ಯಪ್ಪಸ್ವಾಮಿ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ರಜತ ಮಹೋತ್ಸವ ಲಕ್ಷ ದೀಪೋತ್ಸವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶುಕ್ರವಾರ ಕರ್ಕಿ ಜ್ಞಾನೇಶ್ವರಿ ಪೀಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮಿಗಳನ್ನು ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.
ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಗುರುವಾರದಿಂದ ವಿವಿಧ ಪೂಜೆ ನಡೆಯುತ್ತಿದೆ. ರಜತ ಮಹೋತ್ಸವದ ನಿಮಿತ್ತ ಗುರುವಾರ ಗಣೇಶ ಪೂಜೆ, ಸ್ಥಾನದೇವತಾ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರಗುವವು. ೨೬ರಂದು ಸುಮುಖ ಪೂಜೆ, ಅಧಿವಾಸ ಪೂಜೆ, ಬಿಂಬಶುದ್ದಿಪೂರ್ವಕ, ಜಲಧಿವಾಸ, ಗಣಹೋಮ, ನವಗೃಹ ಹೋಮ ನಡೆಯಿತು. ಪಟ್ಟಣದಲ್ಲಿ ರಾತ್ರಿ ಪಲ್ಲಕ್ಕಿ ಉತ್ಸವ ದೀಪದ ಅಂಗವಾಗಿ ನೂರಾರು ಸಂಖ್ಯೆಯ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳ ಭಜನೆ, ಅಯ್ಯಪ್ಪನ ಭಕ್ತಗೀತೆಗಳ ಮೂಲಕ ಮೆರವಣಿಗೆ ಜರುಗಿತು. ಶುಕ್ರವಾರ ಕರ್ಕಿ ಜ್ಞಾನೇಶ್ವರಿ ಪೀಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮಿಗಳನ್ನು ತೆರದ ವಾಹನ ಮೂಲಕ ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತ ಕೋರಲಾಯಿತು. ನಂತರ ಅಯ್ಯಪ್ಪಸ್ವಾಮಿ ಪ್ರತಿಷ್ಠಾಪನೆ, ಕಲಾನ್ಯಾಸ, ಕಲಾವೃದ್ಧಿ ಹೋಮ ಕುಂಬಾಭಿಷೇಕ, ಮಹಾಪೂಜೆ ನಡೆಯಿತು. ಸಂಜೆ ೭ಗಂಟೆಗೆ ಸ್ವಾಮಿಜಿಗಳಿಂದ ಆಶಿರ್ವಚನ ನೀಡಿದರು. ಡಿ. ೨೮ರಂದು ಸಂಜೆ ೬.೩೦ಕ್ಕೆ ಮಹಾಮಂಡಲ ಪೂಜೆ ದೀಪಾರಾಧನೆ ಪೂಜೆ ಲಕ್ಷ ದೀಪೋತ್ಸವ ಅನ್ನಸಂತರ್ಪಣೆ ನಡೆಯಲಿದೆ.
Comments