top of page

ಸತೀಶ್ ಜಾರಕಿಹೊಳಿಗೆ ಡಾಕ್ಟರೇಟ್: ಮೈಸೂರು ವಿವಿಯ ನಿರ್ಧಾರವನ್ನು ನಯವಾಗಿ ತಿರಸ್ಕರಿಸಿದ ಸಚಿವ!

  • Writer: Ananthamurthy m Hegde
    Ananthamurthy m Hegde
  • Jun 3
  • 1 min read

ree

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್‌ ಡಿ.ಲಿಟ್‌ ಅನ್ನು ಘೋಷಿಸಿತ್ತು. ಆದರೆ ಈ ನಿರ್ಧಾರವನ್ನು ಸತೀಶ್ ಜಾರಕಿಹೊಳಿ ನಯವಾಗಿ ತಿರಸ್ಕರಿಸಿದ್ದಾರೆ.

ಈ ಸಂಬಂಧ ಸತೀಶ್ ಜಾರಕಿಹೊಳಿ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಪತ್ರ ಬರೆದಿದ್ದು ವಿವಿ ವತಿಯಿಂದ ನನಗೆ ನೀಡಿದಂತಹ ಗೌರವ ಡಾಕ್ಟರೇಟ್‌ ಪದವಿಯನ್ನು ಹಿಂಪಡೆಯಲು ಕೋರುತ್ತೇನೆ. ನನ್ನ ಈ ನಿರ್ಧಾರವನ್ನು ಅನ್ಯತ ಭಾವಿಸದೆ ನಾನು ಸಂಪೂರ್ಣ ಮನಸ್ಸಿನಿಂದ ಕೈಗೊಂಡ ನಿರ್ಧಾರವಾಗಿದ್ದು, ಈ ತೀರ್ಮನವನ್ನು ಸ್ವಾಗತಿಸುತ್ತೀರೆಂದು ಭಾವಿಸುವುದಾಗಿ ಹೇಳಿದ್ದಾರೆ.

ಗೌರವ ಡಾಕ್ಟರೇಟ್‌ ಪದವಿಯನ್ನು ನನಗೆ ಪ್ರದಾನಿಸುವ ಮೂಲಕ ತಾವು ಸಮಾಜದಲ್ಲಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿರುತ್ತೀರಿ. ಸಾಮಾಜಿಕ ಸೇವೆಯಲ್ಲಿ ನಾನು ಕೈಗೊಂಡಿರುವ ಕಾರ್ಯಕ್ರಮಗಳನ್ನು ಸಫಲಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿಕೊಂಡಿದ್ದೇನೆ. ಅದನ್ನು ಕಾರ್ಯರೂಪಕ್ಕೆ ತರುವಂತಹ ಗುರುತರವಾದ ಹೊಣೆಗಾರಿಕೆ ನನ್ನ ಮೇಲಿದೆ. ಇದಕ್ಕೆ ಇನ್ನೂ ಹೆಚ್ಚಿನ ಕಾಲಾವಕಾಶ ಅವಶ್ಯಕತೆ ಇರುತ್ತದೆ ಎಂದಿದ್ದಾರೆ.

ರಾಜ್ಯ ಮುಕ್ತ ವಿವಿ ಕುಲಾಧಿಪತಿ, ಸಮಕುಲಾಧಿಪತಿ, ಕುಲಪತಿ ಮತ್ತು ವ್ಯವಸ್ಥಾಪನ ಮಂಡಳಿ ಸದಸ್ಯರ ವತಿಯಿಂದ ಮಾರ್ಚ್ 27ರಂದು ವಿವಿಯ ಗೌರವ ಡಾಕ್ಟರೇಟ್‌ ಡಿ.ಲಿಟ್‌ ಗೌರವ ಪದವಿಯನ್ನು ನೀಡುವುದರ ಮೂಲಕ ಸನಾನಿಸಿದ ವ್ಯವಸ್ಥಾಪನ ಮಂಡಳಿಗೆ ನಾನು ಹುತ್ಪೂರ್ತಕ ಅಬಾರಿಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

Comments


Top Stories

bottom of page