ಸಮುದ್ರ ತೀರದಲ್ಲಿ ವೀಲಿಂಗ್ : ವಾಹನ ಪೊಲೀಸ್ ವಶ
- Ananthamurthy m Hegde
- Dec 7, 2024
- 1 min read

ಭಟ್ಕಳ: ಮುರುಡೇಶ್ವರ ಸಮುದ್ರ ತೀರದಲ್ಲಿ ನಿರ್ಲಕ್ಷ ಚಾಲನೆ ಅಂಡ್ ವೀಲಿಂಗ್ ಮಾಡಿದ ಬೆಂಗಳೂರು ಮೂಲದ ವಾಹನ ಚಾಲಕನಿಗೆ ಮುರುಡೇಶ್ವರ ಪೊಲೀಸರು ದಂಡ ವಿಧಿಸಿದ್ದಾರೆ.
ಮುರುಡೇಶ್ವರ ಸಮುದ್ರ ತೀರದಲ್ಲಿ ಮಾರುತಿ ಸುಜುಕಿ ಕಂಪನಿಯ ಇಕೋ ಕಾರನ್ನು(ಸಂಖ್ಯೆ KA03MN3852) ಅಜಾಗರೂಕ ಹಾಗೂ ನಿರ್ಲಕ್ಷ ಚಾಲನೆ ಅಂಡ್ ವೀಲಿಂಗ್ ಮಾಡುತ್ತಿದ್ದ ಬೆಂಗಳೂರು ಮೂಲದ ಗಣೇಶ ಎನ್. ವಿ
ವಾಹನ ಚಾಲಕನಿಗೆ 1 ಸಾವಿರ ದಂಡ ವಿಧಿಸಿದ ಮುರುಡೇಶ್ವರ ಠಾಣೆಯ ಪೊಲೀಸರು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Comments