ಸರಕಾರದ ಯೋಜನೆಗಳು ಜನತೆಗೆ ತಲುಪಲು ನೌಕರರ ಶ್ರಮ ಮುಖ್ಯ : ಭೀಮಣ್ಣ
- Ananthamurthy m Hegde
- Dec 3, 2024
- 1 min read
ಸಿದ್ದಾಪುರ : ತಾಲೂಕ ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ಸರಕಾರದ ಯೋಜನೆಗಳು ಜನತೆಗೆ ತಲುಪಬೇಕಾದರೆ ನೌಕರರ ಶ್ರಮ ಮುಖ್ಯವಾಗಿರುತ್ತದೆ. ಸರಕಾರ ಕಾಲ ಕಾಲಕ್ಕೆ ನಿಮ್ಮ ಬೇಕು ಬೇಡಿಕೆ ಈಡೇರಿಸುತ್ತದೆ. ಯಾರು ಕೂಡ ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸಬೇಡಿ ಇದರಿಂದ ಜನತೆಗೆ ತೊಂದರೆ ಆಗುತ್ತದೆ ಎಂದರು.
ನಮ್ಮ ತಾಲೂಕಿನ ಎಲ್ಲಾ ನೌಕರರು ಸರ್ಕಾರದ ಯೋಜನೆಗಳನ್ನು ಗ್ಯಾರಂಟಿ ಸ್ಕೀಮ್ ಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದ್ದಾರೆ ಎಲ್ಲಾ ನೌಕರರಿಗೂ ಉತ್ತಮವಾದ ಸಹಕಾರ ನೀಡಲು ನಾನು ಬದ್ಧನಿದ್ದೇನೆ. ತಾಲೂಕ ನೌಕರರ ಸಂಘವು ಎಲ್ಲಾ ನೌಕರರು ಇನ್ನು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ಮನವರಿಕೆ ಮಾಡಿ ಪ್ರೋತ್ಸಾಹಿಸಬೇಕಾಗಿ ಕೇಳಿಕೊಳ್ಳುತ್ತೇನೆಂದರು .
ನೌಕರರ ಸಂಘದ ಅಧ್ಯಕ್ಷ ರಾಜೇಶ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಹಸೀಲ್ದಾರ ಎಂ.ಆರ್ ಕುಲಕರ್ಣಿ, ಇ.ಒ ದೇವರಾಜ ಹಿತ್ತಲಕೊಪ್ಪ , ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹೆಚ್ ನಾಯ್ಕ , ಚುನಾವಣಾ ಅಧಿಕಾರಿ ಎಂ ಎಸ್ ಭಟ್ ಹಾಗೂ ಎಲ್ಲ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.
2024 ರಿಂದ 29 ರ ಅವಧಿಯ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
Comments