top of page

ಹೂ ಕಟ್ಟಿ ಮಾರುವ ಮಹಿಳೆಯರನ್ನು ಸನ್ಮಾನಿಸಿದ ಯುವ ಬ್ರಿಗೇಡ್

  • Writer: Ananthamurthy m Hegde
    Ananthamurthy m Hegde
  • Dec 23, 2024
  • 1 min read

ಕುಮಟಾ: ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಹೂವನ್ನು ಕಟ್ಟಿ ಮಾರುವ ಸುಮಾರು 39 ತಾಯಂದಿರಿಗೆ  ಸನ್ಮಾನಿಸುವ ಮೂಲಕ  ಅಮ್ಮ ನಮನ ಎನ್ನುವ ಭಾವನಾತ್ಮಕ ಕಾರ್ಯಕ್ರಮ ಶ್ರೀ ಶಾಂತೇರಿ ಕಾಮಾಕ್ಷಿ ದೇವಾಲಯದಲ್ಲಿ ನಡೆಯಿತು.

ತಾಲೂಕಿನ ಆರೋಗ್ಯಾಧಿಕಾರಿ ಆಜ್ಞಾ ನಾಯಕ ಮಾತನಾಡಿ ದೇವರು ಹಾಗೂ ಮನುಷ್ಯನ ನಡುವಿನ ಸೇತುವೆಯಾಗಿ ಹೂವು ಮಾರುವವರು ಕೆಲಸ ಮಾಡುತ್ತಿದ್ದು ಗುರುತಿಸಿ ಸನ್ಮಾನಿಸುತ್ತಿರುವದು ಸಂತಸದ ಸಂಗತಿಯಾಗಿದೆ ಎಂದರು. ದೇವಾಲಯ ಸಮಿತಿಯ ಉಪಾಧ್ಯಕ್ಷ ಮೂಡ್ಲಗಿರಿ ನಾಯಕ ಹಾಗೂ ಪುರಸಭೆಯ ಸಮುದಾಯ ಸಂಘಟಕಿ ಮೀನಾಕ್ಷಿ ಆಚಾರಿ ಅವರು ಕಾರ್ಯಕ್ರಮದ ಕುರಿತು ಹರ್ಷವ್ಯಕ್ತಪಡಿಸಿದರು. ವಿಜಯ ನಾಯಕ ಬರ್ಗಿ ಎಲ್ಲಾ ತಾಯಂದಿರಿಗೆ ಸೀರೆಯನ್ನು ನೀಡಿದರು.

ಯುವಾ ಬ್ರಿಗೇಡ್ ತಾಲೂಕ ಸಂಚಾಲಕ ಸಚಿನ್ ಭಂಡಾರಿ ಸ್ವಾಗತಿಸಿದರು. ಅಣ್ಣಪ್ಪ ನಾಯ್ಕ ಪ್ರಾಸ್ತಾವಿಕ ಮಾತುಗಳನಾಡಿದರು. ಗೌರೀಶ ನಾಯ್ಕ ನಿರೂಪಿಸಿದರು. ಸದಸ್ಯರಾದ ರವೀಶ ನಾಯ್ಕ, ಚಿಂದಂಬರ ಅಂಬಿಗ, ಪ್ರಕಾಶ ನಾಯ್ಕ, ಲಕ್ಷ್ಮೀಕಾಂತ ಮುಕ್ರಿ, ಸಂದೀಪ ಮಡಿವಾಳ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದ ಜ್ಯೋತಿನಾಯ್ಕ, ಗಾಯತ್ರಿ ಮಡಿವಾಳ ಇನ್ನಿತರರು ಇದ್ದರು.

Comments


Top Stories

bottom of page