ಹೆಗ್ಗೇರಿಯಲ್ಲಿ ಸಾಮೂಹಿಕ ಸತ್ಯನಾರಾಯಣ ವೃತ, ಪ್ರತಿಭಾ ಪುರಸ್ಕಾರ
- Ananthamurthy m Hegde
- Dec 1, 2024
- 1 min read
ಸಿದ್ದಾಪುರ : ತಾಲೂಕಿನ ಹೆಗ್ಗೇರಿಯ ಶ್ರೀ ಮಹಾಲಕ್ಷ್ಮಿ ಪ್ರಸನ್ನ ವೆಂಕಟರಮಣ ದೇವಾಲಯದಲ್ಲಿ 29 ನೇ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಸತ್ಯನಾರಾಯಣ ವೃತ, ಸಾಧಕರಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಶನಿವಾರ ನಡೆಯಿತು.
ಕಾರ್ಯಕ್ರಮ ನಿಮಿತ್ತ ಪಲ್ಲಕ್ಕಿ ಉತ್ಸವ, ತುಲಾಭಾರ ಹೋಮ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು ತೀರ್ಥ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.
ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ ಮನಸಿನಲ್ಲಿ ಯಾವುದೇ ಕಲ್ಮಶವಿಲ್ಲದೆ ಭಗವಂತನ ಸೇವೆ ಸಲ್ಲಿಸಿದಾಗ ಭಗವಂತನನ್ನು ಕಾಣಲು ಸಾಧ್ಯ ಎಂದರು.
ಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರದ ಕಾರ್ಯದರ್ಶಿ ರವಿ ನಾಯ್ಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು,
ಮುಖ್ಯ ಅತಿಥಿಗಳಾದ ವಿ ಎನ್ ನಾಯ್ಕ್ ಬೇಡ್ಕಣಿ, ವಸಂತ ನಾಯ್ಕ ಮನ್ಮನೆ, ಬಿ ಆರ್ ನಾಯ್ಕ, ರಾಮಕೃಷ್ಣ ನಾಯ್ಕ ಶಿರೂರು, ಶಾಂತಲಾ ನಾಯ್ಕ, ವ್ರತ ಕಮಿಟಿ ಅಧ್ಯಕ್ಷ ಕೆ ಟಿ ನಾಯ್ಕ್ ಹೆಗ್ಗೇರಿ, ರಾಜಾರಾಮ ನಾಯ್ಕ ಮಾತನಾಡಿದರು. ಆಡಳಿತ ಕಮಿಟಿ ಅಧ್ಯಕ್ಷ ಚಂದ್ರಕಾಂತ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
Komentar