ಹುಬ್ಬಳ್ಳಿ-ರಾಮೇಶ್ವರಂ ರೈಲು ಅವಧಿ ವಿಸ್ತರಣೆ
- Ananthamurthy m Hegde
- Dec 27, 2024
- 1 min read

ಹುಬ್ಬಳ್ಳಿ: ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ-ರಾಮೇಶ್ವರಂ ನಿಲ್ದಾಣಗಳ ಸಂಚರಿಸುವ ಮಧ್ಯ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಅವಧಿ ವಿಸ್ತರಿಸಲು ರೈಲ್ವೆ ಮಂಡಳಿಯು ಅನುಮೋದನೆ ನೀಡಿದೆ.
ರೈಲು ಸಂಖ್ಯೆ 07355 ಎಸ್‌ಎಸ್‌ಎಸ್ ಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಜ. 4ರಿಂದ ಜೂನ್ 28ರ ವರೆಗೆ ತನ್ನ ಸೇವೆ ಮುಂದುವರಿಸಲಿದೆ. ಡಿ.28ರವರೆಗೆ ಓಡಿಸಲು ಸೂಚಿಸಲಾಗಿತ್ತು. ರೈಲು ಸಂಖ್ಯೆ 07356 ರಾಮೇಶ್ವರಂ-ಎಸ್‌ಸ್ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಜ. 5ರಿಂದ ಜೂ. 29ರವರೆಗೆ ತನ್ನ ಸೇವೆ ಮುಂದುವರಿಸಲಿದೆ.
ಈ ಮೊದಲು ಡಿ.29ರವರೆಗೆ ಓಡಿಸಲು ಸೂಚಿಸಲಾಗಿತ್ತು. ಮಧುರೈ ವಿಭಾಗದ ವ್ಯಾಪ್ತಿಯಲ್ಲಿ ಬರುವ ಶಿವಗಂಗಾ ನಿಲ್ದಾಣದಲ್ಲಿ ಈ ರೈಲುಗಳಿಗೆ ಹೆಚ್ಚುವರಿ ನಿಲುಗಡೆ ಒದಗಿಸಲಾಗಿದೆ. ಜ. 4ರಿಂದ ರೈಲು ಸಂಖ್ಯೆ 07355 ಎಸ್‌ಎಸ್‌ಎಸ್ ಹುಬ್ಬಳ್ಳಿ-ರಾಮೇಶ್ವರಂ ಮತ್ತು ಜ. 5ರಿಂದ ರೈಲು ಸಂಖ್ಯೆ 07356 ರಾಮೇಶ್ವರಂ-ಎಸ್ಎಸ್ ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಪರಿಷ್ಕೃತ ಸಮಯ ಜಾರಿಗೆ ಬರಲಿದೆ.















Comments