top of page

ಹೋಳಿ ಆಡಿದ್ದ ಮೊಹಮ್ಮದ್ ಶಮಿ ಮಗಳು, ಮತಾಂದರಿಂದ ತೀವ್ರ ತರಾಟೆ!

  • Writer: Ananthamurthy m Hegde
    Ananthamurthy m Hegde
  • Mar 15
  • 1 min read

ನವದೆಹಲಿ: ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಇತ್ತೀಚಿನ ದಿನಗಳಲ್ಲಿ ಟೀಕೆಗಳಿಂದ ಸುತ್ತುವರೆದಿದ್ದಾರೆ. ಭಾರತದಾದ್ಯಂತ ಹೋಳಿ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಲಾಯಿತು. ಈ ಮಧ್ಯೆ ಮೊಹಮ್ಮದ್ ಶಮಿ ಮಗಳು ಹೋಳಿ ಆಡಿದ್ದ ಚಿತ್ರವನ್ನು ಶಮಿ ಅವರ ಮಾಜಿ ಪತ್ನಿ ಹಸೀನ್ ಜಹಾನ್ ಸ್ವತಃ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಶಮಿ ಅವರ ಮಗಳು ಐರಾ ಶಮಿ ಅವರ ಬಟ್ಟೆಗಳಿಗೆ ಬಣ್ಣ ಬಳಿಯಲಾಗಿದೆ. ಆದರೆ ಜನರು ಹಸೀನ್ ಜಹಾನ್ ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.

ಮುಸ್ಲಿಂ ಸಮುದಾಯದವರಾಗಿದ್ದೂ ಪವಿತ್ರ ರಂಜಾನ್ ತಿಂಗಳಲ್ಲಿ ಹೋಳಿ ಹಬ್ಬವನ್ನು ಆಚರಿಸಿದ್ದೀರಾ? ಅದು ದೊಡ್ಡ ಪಾಪ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಹಸೀನ್ ಜಹಾನ್ ತಮ್ಮ ಮಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಹಂಚಿಕೊಳ್ಳುತ್ತಾರೆ. ತಮ್ಮ ಮಗಳು ಐರಾ ಹೋಳಿ ಆಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಕ್ಕಾಗಿ ತೀವ್ರ ಟ್ರೋಲಿಂಗ್ ಎದುರಿಸಬೇಕಾಗುತ್ತದೆ ಎಂದು ಅವರು ಊಹಿಸಿರಲಿಕ್ಕಿಲ್ಲ. ಕಾಮೆಂಟ್ ವಿಭಾಗದಲ್ಲಿ ಅನೇಕ ಜನರು ಹಸೀನ್ ಜಹಾನ್ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಆದರೆ ಯಾರೋ ಒಬ್ಬರು ಮಾತ್ರ ದುರದೃಷ್ಟವಶಾತ್ ನಮ್ಮ ಸಮಾಜದಲ್ಲಿ ಅಂತಹ ಜನರಿದ್ದಾರೆ ಎಂದು ಹೇಳಿದರು. ಒಬ್ಬ ವ್ಯಕ್ತಿ ಹಸೀನ್ ಜಹಾನ್ ಮುಸ್ಲಿಂ ಆಗಿದ್ದಾರೋ ಇಲ್ಲವೋ ಎಂದು ಕೂಡ ಪ್ರಶ್ನಿಸಿದ್ದಾರೆ.

ಹಸೀನ್ ಜಹಾನ್ ಅವರನ್ನು ಟ್ರೋಲ್ ಮಾಡುವ ಕಾಮೆಂಟ್‌ಗಳು ಇಲ್ಲಿಗೆ ನಿಲ್ಲಲಿಲ್ಲ. ಒಬ್ಬ ವ್ಯಕ್ತಿ ಮೊಹಮ್ಮದ್ ಶಮಿ ಅವರ ಪತ್ನಿಯನ್ನು 'ಅಜ್ಞಾನಿ ಮಹಿಳೆ' ಎಂದು ಕರೆದಿದ್ದಾರೆ. ರಂಜಾನ್ ತಿಂಗಳಲ್ಲಿ ಹೀಗೆ ಮಾಡಿದ್ದಕ್ಕೆ ತನಗೆ ನಾಚಿಕೆಯಾಗುತ್ತಿಲ್ಲ ಎಂದು ಆ ವ್ಯಕ್ತಿ ಕೇಳಿದ್ದಾನೆ. ಹಸೀನ್ ಜಹಾನ್ ಅವರನ್ನು ನಿರ್ಬಂಧಿಸುವಂತೆ ಅವನು ಇತರರನ್ನು ಒತ್ತಾಯಿಸಿದ್ದಾನೆ.

ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ 2014ರಲ್ಲಿ ಹಸಿನ್ ಜಹಾನ್ ಅವರನ್ನು ವಿವಾಹವಾದರು. 2018ರಲ್ಲಿ ಶಮಿ ವಿರುದ್ಧ ಕೌಟುಂಬಿಕ ದೌರ್ಜನ್ಯ, ಕಿರುಕುಳ, ವಿಷಪ್ರಾಶನ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗುವ ಹೊತ್ತಿಗೆ ಅವರು ಮದುವೆಯಾಗಿ ಕೇವಲ 4 ವರ್ಷಗಳಾಗಿತ್ತು. ಶಮಿ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದರೂ, ಶಮಿ ಬೇರೆ ಮಹಿಳೆಯರೊಂದಿಗೆ ಸಂಬಂಧ ಹೊಂದಿರುವುದಾಗಿ ಹಸಿನ್ ಜಹಾನ್ ಹೇಳಿಕೊಂಡಿದ್ದಾರೆ. ಅಂದಿನಿಂದ ಇಬ್ಬರ ನಡುವಿನ ಅಂತರ ಹೆಚ್ಚಾಗತೊಡಗಿತ್ತು.


Comments


Top Stories

bottom of page