ಹಾವು ಕಡಿದು ಅಂಗನವಾಡಿಗೆ ಹೋಗಿದ್ದ ಬಾಲಕಿ ಸಾವು
- Ananthamurthy m Hegde
- Dec 31, 2024
- 1 min read

ಮುಂಡಗೋಡ ಪಟ್ಟಣದ ಮಾರಿಕಾಂಬಾ ಅಂಗನವಾಡಿಗೆ ಹೋಗಿದ್ದ ಬಾಲಕಿಗೆ ಹಾವು ಕಡಿದು ಸಾವಿಗೀಡಾಗಿದ ಘಟನೆ ಮಂಗಳವಾರ ನಡೆದಿದೆ. ಮಾರಿಕಾಂಬಾ ನಗರದ ಮಯೂರಿ ಸುರೇಶ್ ಕುಂಬಳೆಪ್ಪನವರ ( 5) ಮೃತ ಬಾಲಕಿ. ಮೂತ್ರ ವಿಸರ್ಜನೆಗೆ ಹೋಗಿದ್ದಾಗ ಬಾಲಕಿಗೆ ಹಾವು ಕಚ್ಚಿದೆ ಎನ್ನಲಾಗಿದೆ. ಬಾಲಕಿಯ ಕಾಲಿಗೆ ರಕ್ತಸ್ರಾವ ಆಗಿದ್ದನು ನೋಡಿದ ಅಂಗನವಾಡಿ ಕಾರ್ಯಕರ್ತೆ ತಕ್ಷಣವೇ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿರುವುದಾಗಿ ಕಿಮ್ಸ್ ವೈದ್ಯರು ತಿಳಿಸಿದ್ದಾರೆ.
Comments