ಹಾವೇರಿಯಲ್ಲಿ ಶಿರಸಿಯ ಅದ್ವೈತ ಸ್ಕೇಟಿಂಗ್ ಪಯಣ
- Ananthamurthy m Hegde
- Dec 30, 2024
- 1 min read

ಶಿರಸಿಯ "ಅದ್ವೈತ ಸ್ಕೇಟರ್ಸ್ & ಸ್ಪೋರ್ಟ್ಸ್ ಕ್ಲಬ್" ಇದೀಗ ಹಾವೇರಿಯ ಪ್ರಸಿದ್ಧ ವಿದ್ಯಾಶಿಲ್ಪ್ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳಿಗೆ ಸ್ಕೇಟಿಂಗ್ ತರಬೇತಿಯನ್ನು ನೀಡಲು ಮುಂದಾಗಿದೆ. ಈ ಹೊಸ ಪ್ರಯತ್ನವು ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಕೇಟಿಂಗ್ ಕ್ರೀಡೆಯನ್ನು ಮತ್ತಷ್ಟು ಪ್ರಸಾರಗೊಳಿಸಲು ಸಹಕಾರಿಯಾಗಿದೆ. ವಿದ್ಯಾಶಿಲ್ಪ್ ಇಂಟರ್ನ್ಯಾಷನಲ್ ಸ್ಕೂಲಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನೂತನ ಸ್ಕೇಟಿಂಗ್ ರಿಂಕನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅದ್ವೈತ ಸ್ಕೇಟಿಂಗ್ ಕ್ಲಬ್ ಅಧ್ಯಕ್ಷ ರೊ. ಕಿರಣಕುಮಾರ್ ಅವರು ಹಾಜರಿದ್ದು, ತಮ್ಮ ಮಾರ್ಗದರ್ಶನ ಮತ್ತು ಪ್ರೋತ್ಸಾಹದ ಮೂಲಕ ಈ ಯೋಜನೆಗೆ ಪ್ರೇರಣೆಯಾದರು. ತರಬೇತುದಾರ ತರುಣ ಗೌಳಿ, ಶಾಲಾ ಮುಖ್ಯಸ್ಥ ನರೇಂದ್ರ ಮಾಳಿ, ಕಾರ್ಯದರ್ಶಿ ಸೌಮ್ಯ ಮಾಳಿ, ಪ್ರಾಚಾರ್ಯ ಜೇವಿಯರ್ ಅಂಥೋನಿ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಅದ್ವೈತ ಸ್ಕೇಟಿಂಗ ಕ್ಲಬ್‌ನ ಕ್ರೀಡಾಪಟುಗಳು ತಮ್ಮ ಸ್ಕೇಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದರು. ಅಭಿ ಕೆಲ್ಲಾ, ನಮನ ನಾಯಕ, ಆರ್ಯನ್ ಗೌಳಿ, ಮೋಹಿತ್ ದೇವಾಡಿಗ ಹಾಗೂ ವಿಶೇಷವಾಗಿ ಇಂಟರ್ನ್ಯಾಷನಲ್ ಬುಕ್ ಆಫ್ ರೇಕಾರ್ಡ ಪ್ರಶಸ್ತಿ ವಿಜೇತ ಮಾಸ್ಟರ್ ಅದ್ವೈತ ಕುಡಾಳಕರ ಅವರು ತಮ್ಮ ಪ್ರತಿಭೆಗಳಿಂದ ಎಲ್ಲರ ಮೆಚ್ಚುಗೆ ಗಳಿಸಿದರು.















Comments