top of page

ಹೊಸ ವರ್ಷಕ್ಕೆ ಕಟ್ಟು ನಿಟ್ಟಿನ ನಿಯಮ

  • Writer: Ananthamurthy m Hegde
    Ananthamurthy m Hegde
  • Dec 8, 2024
  • 1 min read

ree

ಬೆಂಗಳೂರು: ಹೊಸ ವರ್ಷವನ್ನು ಸ್ವಾಗತಿಸಲು ಜನರು ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ರೆಸ್ಟೋರೆಂಟ್​ ಮತ್ತು ಪಬ್​ಗಳು ಹೊಸ ವರ್ಷಕ್ಕೆ ಆಶ್ಚರ್ಯಕರ ಆಫರ್​ಗಳನ್ನು ನೀಡಲು ಸಿದ್ದವಾಗಿವೆ. ಎಂಜಿ ರೋಡ್, ಬ್ರಿಗೇಡ್​ ರೋಡ್​ ಮತ್ತು ಕೋರಮಂಗಲದ ಪಬ್​ಗಳಲ್ಲಿ ಪಾರ್ಟಿ ಮಾಡಿ, ನಶೆಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಆದರೆ, ನೀವೇನಾದರು ನಶೆಯಲ್ಲಿ ಹೊರಗಡೆ ಓಡಾಡಿದರೆ ಪೊಲೀಸರ ಕೈಯಲ್ಲಿ ಲಾಕ್​ ಆಗುವುದು ಪಕ್ಕಾ.

ಹೌದು, ಬೆಂಗಳೂರು ನಗರ ಪೊಲೀಸರು ಮತ್ತು ಸಿಸಿಬಿ ಪೊಲೀಸರು ಡ್ರಗ್ಸ್​ ಜಾಲದ ಮೇಲೆ ಕಣ್ಣಿಟ್ಟಿದ್ದು, ಈಗಾಗಲೆ ಹಲವು ಕಡೆ ದಾಳಿ ಮಾಡಿ, ಕೋಟ್ಯಾಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದೀಗ, ಮಾದಕ ವಸ್ತು ಅಥವಾ ಮದ್ಯಪಾನ ಮಾಡಿ ರಸ್ತೆಗಳಲ್ಲಿ ಸುತ್ತಾಡುವರನ್ನು ಪತ್ತೆ ಹಚ್ಚಲು ಪೊಲೀಸರು ತಪಾಸಣಾ ಕಿಟ್​ವೊಂದನ್ನು ಖರೀದಿಸಿದ್ದಾರೆ.

ಹೊಸ ವರ್ಷ ಸಂಭ್ರಮಾಚರಣೆ ಒಂದು ವಾರಕ್ಕೂ ಮುಂಚೆಯೇ ತಪಾಸಣೆ ಆರಂಭಿಸಲಿದ್ದಾರೆ. ಅನುಮಾನ ಬಂದವರನ್ನು ತಪಾಸಣೆಗೆ ಒಳಪಡಿಸುತ್ತಾರೆ. ಈ ಕಿಟ್​​ನಿಂದ ಕ್ಷಣಾರ್ಧದಲ್ಲೇ ವರದಿ ಬರಲಿದೆ. ಈ ತಪಾಸಣಾ ಕಿಟ್​ ಏಕಕಾಲದಲ್ಲಿ ಆರು ಟೆಸ್ಟಿಂಗ್ ರಿಪೋರ್ಟ್ ನೀಡುತ್ತದೆ. ಮೆತ್ ಆಂಫೆಟಮೈನ್, ಕೊಕೇನ್, ಓಪಿಐಓಡಿಎಸ್ ಸೇರಿದಂತೆ ಆರು ಮಾದಕ ದ್ರವ್ಯಗಳನ್ನು ತಪಾಸಣೆ ನಡೆಸಲಿದೆ. ಮಧ್ಯಪಾನ ಸೇರಿದಂತೆ ಗಾಂಜಾಸೇವನೆ, ಡ್ರಗ್ ಸೇವನೆ ​ವರದಿ ನೀಡಲಿದೆ.

ಈಗಾಗಲೇ ಪೊಲೀಸರು 120ಕ್ಕೂ ಹೆಚ್ಚು ಡ್ರಗ್​ ವ್ಯಸನಿಗಳ ಮೇಲೆ ಕಣ್ಣು ಇಟ್ಟಿದ್ದಾರೆ. ಹಾಗೇ, ಡ್ರಗ್ಸ್​ ಪೆಡ್ಲರ್​ಗಳ ಮೇಲೂ ಹದ್ದಿನ ಕಣ್ಣಿಟ್ಟಿದ್ದಾರೆ. 21 ವರ್ಷದ ಒಳಗಿರುವ ಯುವಕ, ಯುವತಿಯರ ಮೇಲೆ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. 21 ವರ್ಷದ ಒಳಗಿನ ಯುವಕ, ಯುವತಿಯರು ಪಬ್​ ಅಥವಾ ಬಾರ್​ಗೆ ಪ್ರವೇಶಿಸಿದರೇ, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Comments


Top Stories

bottom of page