೧೫ ನಿಮಿಷದೊಳಗೆ ಬೈಕ್ ಕದ್ದು ಪರಾರಿಯಾದ ಖದೀಮ
- Ananthamurthy m Hegde
- Dec 25, 2024
- 1 min read
ಭಟ್ಕಳ: ತಾಲೂಕಿನ ಶಂಸುದ್ದಿನ್ ಸರ್ಕಲ್ ಸಮೀಪವಿರುವ ಭಾರತ್ ಪೆಟ್ರೋಲ್ ಪಂಪ್ ನಲ್ಲಿ ನಿಲ್ಲಿಸಿದ್ದ ಬೈಕನ್ನು ಕಳ್ಳನೋರ್ವ ಕೇವಲ 15 ನಿಮಿಷದೊಳಗೆ ಕದ್ದು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತಾಲೂಕಿನ ಬೆಳ್ನಿ ನಿವಾಸಿ ಮಂಜುನಾಥ ಹೆಮ್ಮಯ್ಯ ನಾಯ್ಕ ಅವರಿಗೆ ಸೇರಿದ ಬೈಕ್ ಇದಾಗಿದೆ. ಇವರು ಮಂಗಳವಾರ ಬೆಳ್ಳಿಗ್ಗೆ 11.30 ರ ಸುಮಾರಿಗೆ ಇಲ್ಲಿನ ಶಂಸುದ್ದಿನ್ ಸರ್ಕಲ್ ಸಮೀಪವಿರುವ ಭಾರತ್ ಪೆಟ್ರೋಲ್ ಪಂಪ್ ತನ್ನ ಬೈಕ್ ನಿಲ್ಲಿಸಿ ತಮ್ಮ ಕೆಲಸದ ನಿಮಿತ್ತ ಅಲ್ಲೇ ಸಮೀಪ ಹೋಗಿ ಬರುವುದರೊಳಗಾಗಿ ಬೈಕ್ ಕಳ್ಳತನವಾಗಿದೆ. ಈ ಖಾತರ್ನಾಕ ಕಳ್ಳ ಮೊದಲ ಬೈಕ್ ಸಮೀಪ ಬಂದವನು ಕೀ ಹಾಕಿರುದನ್ನು ಗಮನಿಸಿದ ಕಳ್ಳ ಕೆಲ ಕಾಲ ಬೈಕ್ ಸಮೀಪ ತನ್ನ ಕೈಚಳಕ ತೋರಿದ್ದಾನೆ . ಬಳಿಕ ಅಲ್ಲಿಂದ ತೆರಳಿದ ಆತ ತಾನು ತಂದಿರುವ ಬೈಕ್ ಅನ್ನು ಅಲ್ಲೇ ಪೆಟ್ರೋಲ್ ಪಂಪ್ ಮುಂದೆ ಪಾರ್ಕಿಂಗ್ ಮಾಡಿ ಪುನಃ ಈ ಬೈಕ್ ಸಮೀಪ ಬಂದು ಬೈಕ್ ಕದ್ದು ಪರಾರಿಯಾಗಿದ್ದಾನೆ. ನಂತರ 11.45 ಸುಮಾರಿಗೆ ಬಂದು ನೋಡಿದ್ದಾನೆ. ನಂತರ ಕೆಲವರ ಬಳಿ ವಿಚಾರಿಸಿದರು ಕೂಡ ಯಾವುದೇ ಮಾಹಿತಿ ತಿಳಿಯದೆ ಇರುವುದರಿಂದ ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಬಳಿಕ ಪೆಟ್ರೋಲ್ ಪಂಪ್ ನಲ್ಲಿರುವ ಸಿಸಿಟಿವಿ ಪರಿಶೀಲನೆ ಮಾಡಿದಾಗ ಬೈಕ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಬೈಕ್ ಕಳ್ಳತನವಾಗಿರೋ ಬಗ್ಗೆ ಪರಿಶೀಲನೆ ನಡೆಸುತ್ತಿರುವಾಗಲೇ ಕಳ್ಳ ತಾನು ಮೊದಲು ನಿಲ್ಲಿಸಿದ್ದ ಬೈಕ್ ಅನ್ನು, ಅವರ ಮುಂದೆಯೇ ತೆಗೆದುಕೊಂಡು ಹೋಗಿದ್ದಾನೆ. ಬಳಿಕ ಸಿಸಿಟಿವಿಯಲ್ಲಿ ಪರಿಶೀಲಿಸಿದಾಗ ತಮ್ಮ ಮುಂದೆಯೇ ಕಳ್ಳ ತಾನು ಮೊದಲು ಪಾರ್ಕ್ ಮಾಡಿದ್ದ ಬೈಕ್ ಅನ್ನು ತೆಗೆದುಕೊಂಡು ಹೋಗಿದ್ದಾನೆ ಅನ್ನೋದು ಗೊತ್ತಾಗಿದೆ. ಈ ಎಲ್ಲಾ ದೃಶ್ಯಗಳು ಸದ್ಯ ಪೆಟ್ರೋಲ್ ಪಂಪ್‌ನಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ
Comments