top of page

2025ರಲ್ಲಿ ಟೀಮ್‌ ಇಂಡಿಯಾ ಆಡಲಿರುವ ಕ್ರಿಕೆಟ್‌ ಸರಣಿಗಳ ವೇಳಾಪಟ್ಟಿ

Writer: Ananthamurthy m Hegde
Ananthamurthy m Hegde
Jan 1, 2025
2 min read

ಬೆಂಗಳೂರು : 2025ರಲ್ಲಿ ಟೀಮ್‌ ಇಂಡಿಯಾ ಕೆಲವು ಗೆಲುವಿನ ಟಾರ್ಗೆಟ್‌ಗಳನ್ನು ಇರಿಸಿಕೊಂಡಿದೆ. ಅದರಲ್ಲಿ ಮುಖ್ಯವಾಗಿ ಚಾಂಪಿಯನ್ಸ್‌ ಟ್ರೋಫಿ, ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿ ಹಾಗೂ ಏಷ್ಯಾ ಕಪ್‌. ಕೆರಿಬಿಯನ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಗೆಲುವು ಕಂಡ ಬಳಿಕ ಟೀಮ್‌ ಇಂಡಿಯಾದ ವಿಶ್ವಾಸ ವೃದ್ಧಿಸಬಲ್ಲ ಗೆಲುವುಗಳು 2024ರಲ್ಲಿ ಸಿಕ್ಕಿಲ್ಲ.


ಈ ವರ್ಷ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಟೀಮ್‌ ಇಂಗ್ಲೆಂಡ್‌ ವಿರುದ್ಧ ಐದು ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿ ಆಡಲಿದ್ದು, ಜನವರಿ 22 ರಿಂದ ಸರಣಿ ಆರಂಭವಾಗಲಿದೆ. ಅದಾದ ಬಳಿಕ ಭಾರತ ತಂಡ ಐದು ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರವಾಸ ಮಾಡಲಿದೆ. ಆ ಮೂಲಕ ಟೀಮ್‌ ಇಂಡಿಯಾ ನಾಲ್ಕನೇ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಸೈಕಲ್‌ಅನ್ನು ಆರಂಭಿಸಲಿದೆ.

ಭಾರತದ ತವರಿನ ಸೀಸನ್‌ 2024ರ ಅಕ್ಟೋಬರ್‌ನಿಂದ ಆರಂಭವಾಗಲಿದ್ದು, ಏಷ್ಯಾಕಪ್‌ ಹಾಗೂ ವೆಸ್ಟ್‌ ಇಂಡೀಸ್‌ ವಿರುದ್ಧ 2 ಟೆಸ್ಟ್‌ ಪಂದ್ಯಗಳ ಸರಣಿ ನಿಗದಿಯಾಗಿದೆ. 2025ರಲ್ಲಿ ಭಾರತ ಪುರುಷರ ಕ್ರಿಕೆಟ್‌ ತಂಡ ಒಟ್ಟು 18 ಟಿ20, 10 ಟೆಸ್ಟ್‌ ಹಾಗೂ 12 ಏಕದಿನ ಪಂದ್ಯಗಳನ್ನು ದ್ವಿಪಕ್ಷೀಯ ಸರಣಿಗಳಲ್ಲಿ ಆಡಲಿದೆ. ಇದು ಐಸಿಸಿ ಹಾಗೂ ಎಸಿಸಿ ಕ್ರಿಕೆಟ್‌ ಪಂದ್ಯಗಳ ಹೊರತಾದ ಪಂದ್ಯಗಳಾಗಿವೆ.

ಭಾರತದ ಸಂಪೂರ್ಣ ವೇಳಾಪಟ್ಟಿ:

ಭಾರತ vs ಆಸ್ಟ್ರೇಲಿಯಾ, 5 ನೇ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ - ಜನವರಿ 3-7 (ಸಿಡ್ನಿ)

ಭಾರತ vs ಇಂಗ್ಲೆಂಡ್ (5 T20Is, 3 ODI)-ಜನವರಿ-ಫೆಬ್ರವರಿ 2025

1 ನೇ T20I: ಜನವರಿ 22 (ಚೆನ್ನೈ)

2 ನೇ T20I: ಜನವರಿ 25 (ಕೋಲ್ಕತ್ತಾ)

3ನೇ T20I: ಜನವರಿ 28 (ರಾಜ್‌ಕೋಟ್)

4 ನೇ T20I: ಜನವರಿ 31 (ಪುಣೆ)

5 ನೇ T20I: ಫೆಬ್ರವರಿ 2 (ಮುಂಬೈ)

1 ನೇ ODI: ಫೆಬ್ರವರಿ 6 (ನಾಗ್ಪುರ)

2ನೇ ODI: ಫೆಬ್ರವರಿ 9 (ಕಟಕ್)

3ನೇ ODI: ಫೆಬ್ರವರಿ 12 (ಅಹಮದಾಬಾದ್)

ಚಾಂಪಿಯನ್ಸ್ ಟ್ರೋಫಿ -- ಫೆಬ್ರವರಿ-ಮಾರ್ಚ್ 2025

ಭಾರತ vs ಬಾಂಗ್ಲಾದೇಶ: ಫೆಬ್ರವರಿ 20 (ದುಬೈ)

ಭಾರತ vs ಪಾಕಿಸ್ತಾನ: ಫೆಬ್ರವರಿ 23 (ದುಬೈ)

ಭಾರತ vs ನ್ಯೂಜಿಲೆಂಡ್: ಮಾರ್ಚ್ 2 (ದುಬೈ)

ಸೆಮಿಫೈನಲ್ (ಅರ್ಹತೆ ಪಡೆದಲ್ಲಿ): ಮಾರ್ಚ್ 4 (ದುಬೈ)

ಅಂತಿಮ (ಅರ್ಹತೆ ಪಡೆದಲ್ಲಿ): ಮಾರ್ಚ್ 9 (ದುಬೈ)

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (ಅರ್ಹತೆ ಪಡೆದಲ್ಲಿ) – ಜೂನ್ 2025 (ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್)

ಭಾರತ vs ಇಂಗ್ಲೆಂಡ್ (5 ಟೆಸ್ಟ್)- ಜೂನ್-ಆಗಸ್ಟ್ 2025 (ಪ್ರವಾಸ ಸರಣಿ)

1 ನೇ ಟೆಸ್ಟ್: ಜೂನ್ 20-24 (ಹೆಡಿಂಗ್ಲಿ)

2ನೇ ಟೆಸ್ಟ್: ಜುಲೈ 2-6 (ಎಡ್ಜ್‌ಬಾಸ್ಟನ್)

3ನೇ ಟೆಸ್ಟ್: ಜೂನ್ 10-14 (ಲಾರ್ಡ್ಸ್)

4 ನೇ ಟೆಸ್ಟ್: ಜೂನ್ 23-27 (ಮ್ಯಾಂಚೆಸ್ಟರ್)

5ನೇ ಟೆಸ್ಟ್: ಜುಲೈ 31-ಆಗಸ್ಟ್ 4 (ಓವಲ್)

ಭಾರತ vs ಬಾಂಗ್ಲಾದೇಶ (3 ODS, 3 T20I)-ಆಗಸ್ಟ್ 2025 (ಪ್ರವಾಸ ಸರಣಿ)

ಭಾರತ vs ವೆಸ್ಟ್ ಇಂಡೀಸ್ (2 ಟೆಸ್ಟ್)-ಅಕ್ಟೋಬರ್ 2025

ಏಷ್ಯಾ ಕಪ್ T20 - ಅಕ್ಟೋಬರ್-ನವೆಂಬರ್ 2025

ಭಾರತ vs ಆಸ್ಟ್ರೇಲಿಯಾ (3 ODIಗಳು, 5 T20Iಗಳು) -ನವೆಂಬರ್ 2025 (ಪ್ರವಾಸ ಸರಣಿ)

ಭಾರತ vs ದಕ್ಷಿಣ ಆಫ್ರಿಕಾ (2 ಟೆಸ್ಟ್‌ಗಳು, 3 ODIಗಳು, 5 T20Iಗಳು)- ನವೆಂಬರ್-ಡಿಸೆಂಬರ್ 2025

Comments


Top Stories

1/322
bottom of page