Bigg Boss Kannada 11: ರಂಜಿತ್-ಜಗದೀಶ್ ಎಲಿಮಿನೇಷನ್ ಬೆನ್ನಲ್ಲೇ Wildcard entry; ಯಾರಿವನು?
- Oct 22, 2024
- 1 min read
Updated: Oct 24, 2024
ಕಳೆದೊಂದು ವಾರದಿಂದ ಜಗಳ ಮತ್ತು ಎಲಿಮಿನೇಷನ್ ನಿಂದಾಗಿ ಸುದ್ದಿಗೆ ಗ್ರಾಸವಾಗಿದ್ದ ಬಿಗ್ ಬಾಸ್ ಕನ್ನಡ ಸೀಸನ್ 11 ಕಾರ್ಯಕ್ರಮದಲ್ಲಿ ಇದೀಗ ಮತ್ತೊಂದು ಟ್ವಿಸ್ಟ್ ದೊರೆತ್ತಿದ್ದು, ಖ್ಯಾತ ಉದಯೋನ್ಮುಖ ಗಾಯಕ ಹಾಗೂ ಪಕ್ಕಾ ಗ್ರಾಮೀಣ ಪ್ರತಿಭೆಯನ್ನು ಬಿಗ್ ಹೌಸ್ ಗೆ ಕಳುಹಿಸಲಾಗಿದೆ.

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ನಲ್ಲಿ ಸ್ಪರ್ಧಿಗಳಾಗಿದ್ದ ರಂಜಿತ್ ಮತ್ತು ಜಗದೀಶ್ ಎಲಿಮಿನೇಷನ್ ಬೆನ್ನಲ್ಲೇ ಮತ್ತೊಂದು ಟ್ವಿಸ್ಟ್ ದೊರೆತಿದ್ದು, ಹೊಸ ಸ್ಪರ್ಧಿಯೊಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ.
ಹೌದು.. ಕಳೆದೊಂದು ವಾರದಿಂದ ಜಗಳ ಮತ್ತು ಎಲಿಮಿನೇಷನ್ ನಿಂದಾಗಿ ಸುದ್ದಿಗೆ ಗ್ರಾಸವಾಗಿದ್ದ ಬಿಗ್ ಬಾಸ್ ಕನ್ನಡ ಸೀಸನ್ 11 ಕಾರ್ಯಕ್ರಮದಲ್ಲಿ ಇದೀಗ ಮತ್ತೊಂದು ಟ್ವಿಸ್ಟ್ ದೊರೆತ್ತಿದ್ದು, ಖ್ಯಾತ ಉದಯೋನ್ಮುಖ ಗಾಯಕ ಹಾಗೂ ಪಕ್ಕಾ ಗ್ರಾಮೀಣ ಪ್ರತಿಭೆಯನ್ನು ಬಿಗ್ ಹೌಸ್ ಗೆ ಕಳುಹಿಸಲಾಗಿದೆ.
ಸರಿಗಮಪ ಖ್ಯಾತಿಯ ಗಾಯಕ ಹನುಮಂತ ಲಮಾಣಿ ಇದೀಗ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಹೌಸ್ ಸೇರಿಕೊಂಡಿದ್ದು, ಹಾವೇರಿ ಜಿಲ್ಲೆಯ ಚಿಲ್ಲೂರು ಬಡ್ನಿ ಗ್ರಾಮದ ಹನುಮಂತ ಮೂಲತಃ ಕುರಿಗಾಹಿ. ತನ್ನ ಧ್ವನಿಯಿಂದಲೇ ಫೇಮಸ್ ಆಗಿದ್ದರು.
ಮನೆಗೆ ಕಾಲಿಡುತ್ತಿದ್ದಂತೆಯೇ ಖುಲಾಯಿಸಿದ ಹನುಮಂತನ ಅದೃಷ್ಟ
ಇನ್ನು ಗಾಯಕ ಹನುಮಂತ ಲಮಾಣಿ 'ಬಿಗ್ ಬಾಸ್' ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ಅದೃಷ್ಟ ಖುಲಾಯಿಸಿದ್ದು, ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ ಮೊದಲ ದಿನವೇ ಹನುಮಂತನನ್ನು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದ್ದಾರೆ. ಈಗಾಗಲೇ 'ಬಿಗ್ ಬಾಸ್' ಮನೆಯು ಇಬ್ಬರು ಕ್ಯಾಪ್ಟನ್‌ಗಳನ್ನು ನೋಡಿದೆ. ಹಂಸ ಮತ್ತು ಶಿಶಿರ್ ಕ್ಯಾಪ್ಟನ್ ಆಗಿದ್ದಾರೆ. ಉಳಿದ ಸ್ಪರ್ಧಿಗಳಿಗೂ ಕ್ಯಾಪ್ಟನ್ ಆಗಬೇಕೆಂಬ ಆಸೆ ಇದೆ. ಇದರ ನಡುವೆಯೇ ಹೊಸ ಎಂಟ್ರಿ ಹನುಮಂತನನ್ನು ಮನೆಯ ಕ್ಯಾಪ್ಟನ್ ಮಾಡಿರುವುದು ಸ್ಪರ್ಧಿಗಳಿಗೇ ಅಚ್ಚರಿಯನ್ನುಂಟು ಮಾಡಿದೆ.
ಬಿಗ್ ಬಾಸ್ ಗೇ 'ಆಮೇಲೆ ಮಾತಾಡ್ತಿನ್ರೀ..' ಎಂದ ಹನುಮಂತ ಫುಲ್ ಬಿಂದಾಸ್!
ಸರಿಗಮಪ ಮಾತ್ರವಲ್ಲದೇ, 'ಡಾನ್ಸ್ ಕರ್ನಾಟಕ ಡಾನ್ಸ್' ಸೇರಿದಂತೆ ಈ ಹಿಂದೆ ಕಾಮಿಡಿ ಶೋಗಳಲ್ಲೂ ಪಾಲ್ಗೊಂಡಿದ್ದ ಹನುಮಂತ ತನ್ನ ಮುಗ್ಧತೆಯಿಂದೇ ಖ್ಯಾತಿ ಗಳಿಸಿದ್ದವರು. ಅವರ ಮುಗ್ಧತೆ ಇದೀಗ ಬಿಗ್ ಹೌಸ್ ನಲ್ಲೂ ಹೈಲೈಟ್ ಆಗುತ್ತಿದ್ದು, ಮನೆಯೊಳಗೆ ಎಂಟ್ರಿ ಕೊಟ್ಟ ಹನುಮಂತ ಎಲ್ರನ್ನೂ ಮಾತನಾಡಿಸುತ್ತ, ನಂತರ ಡೈನಿಂಗ್ ಟೇಬಲ್ ಮೇಲೆ ಊಟ ಮಾಡುತ್ತಿರುತ್ತಾರೆ.
ಆಗ 'ಬಿಗ್ ಬಾಸ್' ಧ್ವನಿ ಕೇಳಿಸುತ್ತದೆ. "ಹನುಮಂತ… ನಿಮಗೆ ಬಿಗ್ ಬಾಸ್ ಮನೆಗೆ ಸ್ವಾಗತ.." ಎಂದು ಬಿಗ್ ಬಾಸ್ ಹೇಳುತ್ತಾರೆ. ಆಗ ಹನುಮಂತ, "ಊಟ ಮಾಡಕ್ಕತ್ತೀನ್ರೀ.. ಇನ್ನು ಏನ್ ಮಾತಾಡಬೇಕು ಅನ್ನೋದು ತಲ್ಯಾಗೆ ಹೊಕ್ಕೊಂಡಿಲ್ಲ. ಆಮೇಲೆ ಮಾತಾಡ್ತಿನ್ರೀ.." ಎಂದು ಮುಗ್ಧತೆಯಿಂದ ಹೇಳಿರುವ ವಿಡಿಯೋವನ್ನು ಕಲರ್ಸ್ ಕನ್ನಡ ಹಂಚಿಕೊಂಡಿದೆ.
Kommentare