top of page

ಅಕ್ಕನ ಪರಿಚಯವೇ ಸಿಗಲಿಲ್ಲ; ತಮ್ಮನನ್ನು ನೋಡಿ ಕಣ್ಣೀರಿಟ್ಟ ಮೋಕ್ಷಿತಾ

  • Writer: Ananthamurthy m Hegde
    Ananthamurthy m Hegde
  • Jan 1
  • 1 min read
ree

ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ. ಏಕೆಂದರೆ ದಸ್ಯರ ಕುಟುಂಬಸ್ಥರು ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆ ಸಂಚಿಕೆಯಲ್ಲಿ ಭವ್ಯಾ ಗೌಡ, ತ್ರಿವಿಕ್ರಮ್ ಹಾಗೂ ರಜತ್ ಕುಟುಂಬಸ್ಥರು ಆಗಮಿಸಿದ್ದರು. ಇಂದಿಂದ ಸಂಚಿಕೆಯಲ್ಲಿ ಆಗಮಿಸಿದ ಮೋಕ್ಷಿತಾ ಪೈ ಕುಟುಂಬಸ್ಥರಾದ ತಮ್ಮ ವಿಶೇಷ ಚೇತನ ಹಾಗೇ ಅಮ್ಮ, ಅಪ್ಪ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ತಮ್ಮನನ್ನು ನೋಡಿ ಕಣ್ಣೀರಿಟ್ಟಿದ್ದಾರೆ ಮೋಕ್ಷಿತಾ. ಮೋಕ್ಷಿತಾ ಅವರು ತಮ್ಮನ ಅಷ್ಟು ದಿನ ಬಿಟ್ಟಿದ್ದೇ ಇಲ್ಲ. ಆದರೆ, ಬಿಗ್ ಬಾಸ್‌‌‌‌ಗಾಗಿ ಅವರು ಕುಟುಂಬವನ್ನು ಮೂರು ತಿಂಗಳು ಬಿಟ್ಟಿದ್ದರು. ಈ ಕಾರಣಕ್ಕೆ ಮೋಕ್ಷಿತಾ ಅವರನ್ನು ತಮ್ಮ ಮರೆತೇಬಿಟ್ಟಿದ್ದಾರೆ. ಇದೀಗ ಈ ಪ್ರೋಮೋ ಔಟ್‌ ಆಗಿದೆ. ಈ ದೃಶ್ಯವನ್ನು ಕಂಡು ಗೌತಮಿ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಮೋಕ್ಷಿತಾ ಪೈ ಈ ಹಿಂದೆ ಮನ ಬಿಚ್ಚಿ ಮಾತನಾಡಿದ್ದರು. ಮದುವೆ ಆಗುವಂತೆ ಮನೆ ಮಂದಿ ಕೂಡ ಒತ್ತಾಯಿಸುತ್ತಿದ್ದಾರೆ. ಆದರೆ, ಮನೆಯ ಮಂದಿಯ ಒತ್ತಡದ ಮಧ್ಯೆನೂ ಮೋಕ್ಷಿತಾ ಆಗೋಕೆ ಮನಸು ಮಾಡ್ತಿಲ್ಲ. ಅದಕ್ಕೆ ಏನು ಕಾರಣ ಅನ್ನೋದನ್ನ ಕೂಡ ಮೋಕ್ಷಿತಾ ಪೈ ಹೇಳಿಕೊಂಡಿದ್ದರು. ಆದರೂ ಮದುವೆ ಆಗುವಂತೆ ಒತ್ತಡ ಕಳೆದ ಒಂದು ವರ್ಷದಿಂದಲೂ ಜಾಸ್ತಿ ಆಗಿತ್ತು. ಈ ಬಗ್ಗೆ ಮೋಕ್ಷಿತಾ ಪೈ ಮುಕ್ತವಾಗಿಯೇ ಹೇಳಿಕೊಂಡಿದ್ದರು. ನನ್ನ ಮನೆಯಲ್ಲಿ ಸದ್ಯ ಮದುವೆ ಒತ್ತಡ ಇದೆ. ಮದುವೆ ಆಗುವ ಅಂತ ಕಳೆದ ಒಂದು ವರ್ಷದಿಂದ ಅಪ್ಪ ಮತ್ತು ಅಮ್ಮ ಹೇಳ್ತಾನೇ ಇದ್ದಾರೆ. ಆದರೆ, ಮದುವೆ ಆಗೋಕೆ ನನಗೆ ಭಯ ಇದೆ. ಆ ಭಯಕ್ಕೆ ಒಂದು ಕಾರಣ ಕೂಡ ಇದೆ ಅಂತ ಮೋಕ್ಷಿತಾ ಪೈ ಹೇಳಿಕೊಂಡಿದ್ದರು. ನಾನು ಮದುವೆ ಆದ್ರೆ ನನ್ನ ಅಪ್ಪ ಅಮ್ಮನನ್ನ ನೋಡೋರು ಯಾರು? ನನ್ನ ತಮ್ಮ ವಿಶೇಷ ಚೇತನನೇ ಆಗಿದ್ದಾನೆ. ಹಾಗಾಗಿಯೇ ನಮ್ಮ ತಂದೆ-ತಾಯಿಗೆ ನಾನು ಮಗ ಮತ್ತು ಮಗಳು ಎರಡೂ ಆಗಿದ್ದೇನೆ. ಆದರೆ, ಮದುವೆ ಒತ್ತಡ ಜಾಸ್ತಿನೇ ಆಗಿದೆ ಅಂತಲೂ ಮೋಕ್ಷಿತಾ ಹೇಳಿಕೊಂಡಿದ್ದರು.ಆದರೆ, ಈ ಮದುವೆ ಒತ್ತಡದಿಂದ ನಾನು ನನ್ನ ಅಮ್ಮ ಮತ್ತು ಅಪ್ಪನಿಗೆ ಬೈದಿರೋದು ಇದೆ. ಸಿಟ್ಟಿನಿಂದ ಕೂಗಾಡಿದ್ದು ಇದೆ. ಅದನ್ನ ನೆನಪಿಸಿಕೊಂಡ್ರೆ ತುಂಬಾನೆ ಬೇಸರ ಆಗುತ್ತದೆ ಅಂತಲೂ ಮೋಕ್ಷಿತಾ ಪೈ ಹೇಳಿಕೊಂಡಿದ್ದರು.

Comments


Top Stories

bottom of page