ಕಳಪೆ ಪಡೆದು ಜೈಲು ಸೇರಿದ ಹನುಮಂತ
- Ananthamurthy m Hegde
- Dec 27, 2024
- 1 min read

ಬಿಗ್ಬಾಸ್ ಮನೆಯಲ್ಲಿ ಈ ವಾರ ರೆಸಾರ್ಟ್ ಟಾಸ್ಕ್ ಆಡಿಸಲಾಗಿದೆ. ಮನೆ ಮಂದಿಯೆಲ್ಲ ಬಹಳ ಕಷ್ಟಪಟ್ಟು ಟಾಸ್ಕ್ ಆಡಿದ್ದಾರೆ. ಬಿಗ್ಬಾಸ್ ಅಭ್ಯರ್ಥಿಗಳನ್ನು ಎರಡು ತಂಡಗಳನ್ನಾಗಿ ಮಾಡಿತ್ತು. ಒಂದು ತಂಡಕ್ಕೆ ಭವ್ಯಹಾಗೂ ಮತ್ತೊಂದು ತಂಡಕ್ಕೆ ಚೈತ್ರಾ ಕ್ಯಾಪ್ಟನ್ ಆಗಿ ನೇಮಕ ಮಾಡಲಾಗಿತ್ತು. ಮೊದಲು ನೋಮಿನೇಷನ್ ಪ್ರಕ್ರಿಯೆಯಲ್ಲಿ ವಿಶೇಷವಾಗಿ ಬಿಗ್ಬಾಸ್ ನೊಮಿನೇಟ್ ಮಾಡುವ ಸದಸ್ಯರ ತಲೆಯ ಮೇಲೆ ಬಾಟಲಿಯನ್ನುಹೊಡೆದು ಕಾರಣವನ್ನು ಹೇಳಲು ನೀಡಿತ್ತು . ನಂತರ ಪ್ರತಿ ವಾರದಂತೆ ಈ ವಾರವು ಕೂಡ ಉತ್ತಮ ಹಾಗೂ ಕಳಪೆ ಕೊಡುವ ಸಮಯದಲ್ಲಿ ಮನೆ ಮಂದಿಯೆಲ್ಲ ಒಕ್ಕೂರಿಲಿನಿಂದ ಹನುಮಂತನಿಗೆ ಕಳಪೆ ಕೊಟ್ಟಿದ್ದಾರೆ. ರೆಸಾರ್ಟ್ ಟಾಸ್ಕ್ನಲ್ಲಿ ಹನುಮಂತು ಶುಚಿತ್ವ ಮೇಂಟೇನ್ ಮಾಡಲಿಲ್ಲ ಎಂದು ಅವನದ್ದೇ ತಂಡದವರು ಹನುಮಂತನಿಗೆ ಕಳಪೆ ಕೊಟ್ಟಿದ್ದಾರೆ. ಕಳಪೆಯನ್ನು ಖುಷಿಯಿಂದಲೇ ಸ್ವೀಕಾರ ಮಾಡಿದ ಹನುಮಂತು, ಇದರಿಂದ ನಾನು ಕುಗ್ಗುವುದಿಲ್ಲ ಎಂದು ಹೇಳಿ ಖುಷಿಯಿಂದಲೇ ಜೈಲು ಸೇರಿದ್ದಾರೆ.















Comments