top of page

ಬಿಬಿಕೆ ಮನೆಯಲ್ಲಿ 8 ಮಂದಿಗೆ ನಾಮಿನೇಷನ್ ಭೂತ

  • Writer: Ananthamurthy m Hegde
    Ananthamurthy m Hegde
  • Dec 27, 2024
  • 1 min read
ree

ಇನ್ನೇನು ಬಿಗ್ ಬಾಸ್ ಕನ್ನಡ ಸೀಸನ್ 11ರ ಶೋ ಮುಕ್ತಾಯವಾಗಲು ಕೆಲವೇ ವಾರಗಳು ಬಾಕಿ ಇವೆ. ಸದ್ಯ ಮನೆಯೊಳಗೆ 10 ಮಂದಿ ಸದಸ್ಯರು ಇದ್ದಾರೆ. ಇವರಲ್ಲಿ ನಿಧಾನವಾಗಿ ಒಬ್ಬೊಬ್ಬರೇ ಮನೆಯಿಂದ ಜಾಗ ಖಾಲಿ ಮಾಡೋದಂತೂ ಪಕ್ಕಾ. ಸದ್ಯ ಬಿಗ್ ಬಾಸ್ ಮನೆಯಲ್ಲಿ 13ನೇ ವಾರದ ನಾಮಿನೇಷನ್ ಪ್ರಕ್ರಿಯೆ ಮುಕ್ತಯವಾಗಿದೆ. ಮನೆಯೊಳಗೆ ಈಗ 10 ಮಂದಿ ಇದ್ದು, ಅದರಲ್ಲಿ ಬರೋಬ್ಬರಿ 8 ಮಂದಿ ಈ ವಾರ ನಾಮಿನೇಟ್ ಆಗಿದ್ದಾರೆ.

ಈ ವಾರ ಮನೆಯೊಳಗೆ ಮುಖಾಮುಖಿ ನಾಮಿನೇಷನ್ ನಡೆದಿದೆ. ಬಿಬಿ ಅಡ್ಡಕ್ಕೆ ಎಲ್ಲಾ ಸ್ಪರ್ಧಿಗಳು ಬಂದರು. ಅವರ ಎದುರು ಬಾಟಲಿಗಳನ್ನು ಇರಿಸಲಾಗಿತ್ತು. ಸ್ಪರ್ಧಿಗಳು ಯಾರನ್ನು ನಾಮಿನೇಟ್ ಮಾಡಬೇಕಿತ್ತೋ, ಅವರನ್ನು ಕರೆದು, ನಾಮಿನೇಷನ್‌ಗೆ ಸೂಕ್ತ ಕಾರಣಗಳನ್ನು ತಿಳಿಸಿ, ನಂತರ ಅವರ ತಲೆ ಮೇಲೆ ಬಾಟಲಿಯಿಂದ ಹೊಡೆಯಬೇಕು. ಅಂದಹಾಗೆ, ಆ ಬಾಟಲಿಗಳೇನೂ ನಿಜವಾದ ಬಾಟಲಿಗಳಲ್ಲ. ಸಕ್ಕರೆ ಪಾಕದಿಂದ ತಯಾರಿಸಿದ ನಕಲಿ ಬಾಟಲಿಗಳು!

ಬಿಗ್ ಬಾಸ್ ಮನೆಯಲ್ಲಿ ಪದೇಪದೇ ನಾಮಿನೇಟ್ ಆಗುವುದರಲ್ಲಿ ಫೇಮಸ್ ಆಗಿರುವ ಮೋಕ್ಷಿತಾ ಪೈ ಮತ್ತು ಚೈತ್ರಾ ಕುಂದಾಪುರ ಈ ವಾರ ಕೂಡ ನಾಮಿನೇಟ್ ಆಗಿದ್ದಾರೆ. ಉಳಿದಂತೆ, ಗೌತಮಿ ಜಾಧವ್, ಧನರಾಜ್ ಆಚಾರ್, ತ್ರಿವಿಕ್ರಮ್, ಹನುಮಂತ ಲಮಾಣಿ, 'ಉಗ್ರಂ' ಮಂಜು ಅವರು ನಾಮಿನೇಟ್ ಆಗಿದ್ದಾರೆ. ಐಶ್ವರ್ಯಾ ಶಿಂಧೋಗಿ ಅವರನ್ನು ಕ್ಯಾಪ್ಟನ್ ಭವ್ಯಾ ಗೌಡ ಅವರು ನೇರವಾಗಿ ನಾಮಿನೇಟ್ ಮಾಡಿದರು.

ಪದೇಪದೇ ನಾಮಿನೇಟ್ ಆಗುವವರ ಸಾಲಿನಲ್ಲಿ ಇರುತ್ತಿದ್ದ ಭವ್ಯಾ ಗೌಡ ಅವರಿಗೆ ಈ ವಾರ ಲಕ್ ಚೆನ್ನಾಗಿತ್ತು. ಯಾಕೆಂದರೆ, ಈ ವಾರ ಭವ್ಯಾ ಗೌಡ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿರುವುದರಿಂದ ಅವರು ನಾಮಿನೇಷನ್‌ನಿಂದ ಬಚಾವ್ ಆದರು. ಇನ್ನು, ರಜತ್ ಕಿಶನ್ ಅವರು ಕೂಡ ನಾಮಿನೇಟ್ ಆಗಿಲ್ಲ ಅನ್ನೋದು ವಿಶೇಷ. ಚೈತ್ರಾ ಕುಂದಾಪುರ ಅವರ ಜೊತೆಗೆ ರಜತ್ ಸಾಕಷ್ಟು ಜಗಳ ಮಾಡಿಕೊಂಡಿದ್ದರು. ಕೊನೇಪಕ್ಷ ಚೈತ್ರಾ ಅವರಾದರೂ ರಜತ್‌ರನ್ನು ನಾಮಿನೇಟ್ ಮಾಡಬಹುದು ಎಂಬ ನಿರೀಕ್ಷೆಇತ್ತು. ಆದರೆ ಅದು ಕೂಡ ನಡೆಯಲಿಲ್ಲ.

ಅಲ್ಲಿಗೆ ಈ ವಾರ 10 ಮಂದಿಯಲ್ಲಿ ಇಬ್ಬರು ಮಾತ್ರ ಸೇಫ್ ಆಗಿದ್ದು, ಉಳಿದ 8 ಮಂದಿಗೆ ಎಲಿಮಿನೇಷನ್ ಭೂತ ಕಾಡುತ್ತಿದೆ. ಯಾರು ಎಲಿಮಿನೇಟ್ ಆಗುತ್ತಾರೆ? ಯಾರು ಸೇಫ್ ಆಗ್ತಾರೆ ಎಂಬುದನ್ನು ಕಾದುನೋಡಬೇಕು.

Comments


Top Stories

bottom of page