top of page

ಅಯೋಧ್ಯೆಗೆ ಭೇಟಿ ನೀಡಿದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ

Writer: Ananthamurthy m Hegde
Ananthamurthy m Hegde
May 25, 2025
1 min read

ಕ್ರಿಕೆಟಿಗ ವಿರಾಟ್​​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ತಮ್ಮ ಕುಟುಂಬದೊಂದಿಗೆ ಅಯೋಧ್ಯೆಯ ರಾಮ ಮಂದಿರ ಮತ್ತು ಹನುಮಾನ್ ಗರ್ಹಿಗೆ ಭೇಟಿ ನೀಡಿದ್ದಾರೆ. ದಂಪತಿಗಳು ಒಟ್ಟಿಗೆ ಹೋಗಿ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ. ಪೂಜೆ, ಪುನಸ್ಕಾರದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿರಾಟ್​​ ಕೊಹ್ಲಿ ಮತ್ತು ಅನುಷ್ಕಾ ಭೇಟಿಯ ಸಮಯದಲ್ಲಿ, ದಂಪತಿಗಳು ಹನುಮಾನ್ ಗರ್ಹಿಯ ಮಹಾಂತ್ ಜ್ಞಾನ್ ದಾಸ್ ಅವರ ಉತ್ತರಾಧಿಕಾರಿ ಮತ್ತು ಸಂಕಟ್ ಮೋಚನ್ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಸಂಜಯ್ ದತ್ ಅವರನ್ನು ಭೇಟಿಯಾದರು. ಹನುಮಾನ್ ಗರ್ಹಿಯ ಹಿರಿಯ ಅರ್ಚಕ ಹೇಮಂತ್ ದಾಸ್ ದಂಪತಿಗಳ ದರ್ಶನ ಮತ್ತು ಆಚರಣೆಗಳನ್ನು ಸುಗಮಗೊಳಿಸಿದರು.

Comments


Top Stories

1/322
bottom of page