top of page

ಅಲ್ಲು ಅರ್ಜುನ್ ಮನೆ ಮೇಲೆ ದಾಳಿ

  • Writer: Ananthamurthy m Hegde
    Ananthamurthy m Hegde
  • Dec 23, 2024
  • 1 min read

ree

ಸಂಧ್ಯಾ ಥಿಯೇಟರ್‌ ಕಾಲ್ತುಳಿದ ದುರಂತದ ಸುತ್ತ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರ ನಿವಾಸದ ಮೇಲೆ ಹಾನಿ ಉಂಟು ಮಾಡಿರುವ ಆರೋಪದ ಮೇಲೆ ಉಸ್ಮಾನಿಯಾ ವಿಶ್ವವಿದ್ಯಾಲಯದ ಜಂಟಿ ಕ್ರಿಯಾ ಸಮಿತಿಯ ಆರು ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.

ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಅಲ್ಲು ಅರ್ಜುನ್ ಮನೆಯೆದುರು ಪ್ರತಿಭಟನಾಕಾರರ ಗುಂಪು ಜಮಾಯಿಸಿ ಘೋಷಣೆಗಳನ್ನು ಕೂಗುತ್ತಾ ಮತ್ತು ಫಲಕಗಳನ್ನು ಹಿಡಿದುಕೊಂಡು ಜಮಾಯಿಸಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ಪೊಲೀಸರು ತಿಳಿಸಿರುವಂತೆ ಮನೆಯೆದುರು ಜಮಾಯಿಸಿದ್ದ ಪ್ರತಿಭಟನಾಕಾರರು ನಿವಾಸದ ಮೇಲೆ ಟೊಮೆಟೊಗಳನ್ನು ಎಸೆದರು ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆಗಿಳಿದಿರು. ಈ ಸಂದರ್ಭದಲ್ಲಿ ಹೂವಿನ ಕುಂಡಗಳು ಮತ್ತು ಇತರ ಆಸ್ತಿ, ವಸ್ತುಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.


ಕಾಲ್ತುಳಿತದಲ್ಲಿ ಮಹಿಳೆಯ ಸಾವು, ಮಗುವಿಗೆ ಗಾಯ

ಪ್ರತಿಭಟನೆಯು ಸಂಧ್ಯಾ ಥಿಯೇಟರ್‌ ದುರಂತಕ್ಕೆ ಸಂಬಂಧಿಸಿದ ಅಸಮಾಧಾನದ ಪ್ರತೀಕವಾಗಿದ್ದು ಓಯು-ಜೆಎಸಿಯ ವಿದ್ಯಾರ್ಥಿ ಸಂಘಟನೆಯ ಸದಸ್ಯರು, ಡಿಸೆಂಬರ್ 4 ರಂದು ನಡೆದ ಪುಷ್ಪ 2: ದಿ ರೂಲ್‌ನ ಪ್ರಥಮ ಪ್ರದರ್ಶನದ ವೇಳೆ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತದಲ್ಲಿ ಮಹಿಳೆಯೋರ್ವರು ಸಾವನ್ನಪ್ಪಿದ್ದು ಆಕೆಯ ಮಗುವಿಗೆ ಗಾಯಗಳುಂಟಾದ ಘಟನೆಯ ಬಗ್ಗೆ ಪ್ರತಿಭಟನೆ ನಡೆಸಿದ್ದಾರೆ.


ಉದ್ವಿಗ್ನಗೊಂಡ ಪ್ರತಿಭಟನಾಕಾರರು

ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಸಂದರ್ಭದಲ್ಲಿ ಆರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು ಇವರು ಓಯು-ಜೆಎಸಿ ಸಂಘಟನೆಯವರು ಎಂದು ಹೈದರಾಬಾದ್‌ನ ಡಿಸಿಪಿ (ಪಶ್ಚಿಮ ವಲಯ) ದೃಢಪಡಿಸಿದ್ದಾರೆ.

ಸಂಜೆಯ ವೇಳೆಗೆ ನಟ ಅಲ್ಲು ಅರ್ಜುನ್ ಮನೆಗೆ ಏಕಾಏಕಿ ಆಗಮಿಸಿದ ಕೆಲವು ವ್ಯಕ್ತಿಗಳು ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗಲಾರಂಭಿಸಿದರು.

ಕೆಲವರು ಕಂಪೌಂಡ್ ಹಾರಿ ನಟನ ಮನೆಯ ಮೇಲೆ ಟೊಮೆಟೊ ಎಸೆದಿದ್ದಾರೆ. ಭದ್ರತಾ ಸಿಬ್ಬಂದಿ ಮನೆಯ ಆವರಣ ಬಿಟ್ಟು ಹೊರನಡೆಯುವಂತೆ ಸೂಚಿಸಿದಾಗ ಅವರೊಂದಿಗೆ ಘರ್ಷಣೆಗೆ ಇಳಿದಿದ್ದಾರೆ ಹಾಗೂ ಹೊಡೆದಿದ್ದಾರೆ. ಇನ್ನು ಅಲ್ಲಿದ್ದ ಹೂವಿನ ಕುಂಡಗಳನ್ನು ಒಡೆದು, ಗಾಜುಗಳನ್ನು ಪುಡಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಘಟನಾ ಸ್ಥಳಕ್ಕೆ ತುರ್ತಾಗಿ ಆಗಮಿಸಿದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಟನಾಗಲಿ ಇಲ್ಲವೇ ಅವರ ಮನೆಯವರು ಅಧಿಕೃತ ದೂರು ದಾಖಲಿಸಿಲ್ಲ ಎಂದು ಪೊಲೀಸ್ ವಲಯದವರು ಮಾಹಿತಿ ನೀಡಿದ್ದಾರೆ.


Comments


Top Stories

bottom of page