ಇಂಫಾಲ್ ನಲ್ಲಿ ಏಳು ಉಗ್ರರ ಬಂಧನ
ಇಂಫಾಲ್: ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ನಿಷೇಧಿತ ಸಂಘಟನೆಯಾದ ನ್ಯಾಷನಲ್ ರೆವಲ್ಯೂಷನರಿ ಫ್ರಂಟ್ ಆಫ್ ಮಣಿಪುರ(NRFM)ದ ಅಡಗುತಾಣವನ್ನು ಭದ್ರತಾ ಪಡೆಗಳು ಭೇದಿಸಿದ್ದು, ಏಳು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಖಚಿತ ಸುಳಿವಿನ ಮೇರೆಗೆ ಪೊಲೀಸರು ಭಾನುವಾರ ಟೆಲ್ಲೌ ಮಖಾ ಲೈಕೈನಲ್ಲಿ ದಾಳಿ ನಡೆಸಿ ಉಗ್ರರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬಂಧಿತ ಉಗ್ರರಿಂದ ಮ್ಯಾಗಜೀನ್ ಮತ್ತು 15 ಕಾರ್ಟ್ರಿಡ್ಜ್‌ಗಳನ್ನು ಹೊಂದಿರುವ A1 ಅಸಾಲ್ಟ್ ರೈಫಲ್, ಮ್ಯಾಗಜೀನ್ ಮತ್ತು 13 ಕಾರ್ಟ್ರಿಡ್ಜ್‌ಗಳನ್ನು ಹೊಂದಿರುವ AK-47 ರೈಫಲ್, ಮ್ಯಾಗಜೀನ್ ಮತ್ತು 12 ಕಾರ್ಟ್ರಿಡ್ಜ್‌ಗಳನ್ನು ಹೊಂದಿರುವ ಎರಡು INSAS ರೈಫಲ್‌ಗಳು, ಮ್ಯಾಗಜೀನ್‌ಗಳು ಮತ್ತು 30 ಕಾರ್ಟ್ರಿಡ್ಜ್‌ಗಳನ್ನು ಹೊಂದಿರುವ ಎರಡು ಸ್ವಯಂ-ಲೋಡಿಂಗ್ ರೈಫಲ್‌ಗಳು, ಐದು ಬುಲೆಟ್ ಪ್ರೂಫ್ ಜಾಕೆಟ್‌ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.










Comments