top of page

ಕೊನೆಗೂ ಮ್ಯಾಕ್ಸ್ ಸಿನಿಮಾ ಡೇಟ್ ರಿವೀಲ್

  • Writer: Ananthamurthy m Hegde
    Ananthamurthy m Hegde
  • Dec 21, 2024
  • 2 min read

ree

ಮ್ಯಾಕ್ಸ್ ಚಿತ್ರದಿಂದ ಒಂದು ಹೊಸ ಟ್ರೆಂಡ್ ಶುರು ಆಗುವಂತೆ ಇದೆ. ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲಿ ಹೆಚ್ಚಾಗಿ ಸಿನಿಮಾಗಳು ಶುಕ್ರವಾರವೇ ರಿಲೀಸ್ ಆಗುತ್ತಿದೆ. ಬಿಟ್ರೆ, ರಾಯರ ವಾರ ಅಂತ ಗುರುವಾರವೇ ರಿಲೀಸ್ ಆಗುತ್ತವೆ. ಅದು ಕನ್ನಡದಲ್ಲಿ ಮಾತ್ರವೇ ಅನ್ನೊದು ಕೂಡ ಅಷ್ಟೆ ಸತ್ಯ ಬಿಡಿ. ಆದರೆ, ಕಿಚ್ಚನ ಮ್ಯಾಕ್ಸ್ ಚಿತ್ರ ಬುಧವಾರ ರಿಲೀಸ್ ಆಗುತ್ತಿದೆ. ಈ ದಿನವೇ ರಿಲೀಸ್ ಆಗೋಕೆ ಒಂದು ವಿಶೇಷ ಕಾರಣ ಕೂಡ ಇದೆ. ಇದರ ಬಗ್ಗೆ ಸ್ವತಃ ಸುದೀಪ್ ಕೂಡ ಮಾತನಾಡಿದ್ದಾರೆ. ಹಾಗೇನೆ ಬುಧವಾರವೇ ಯಾಕೆ ರಿಲೀಸ್ ಅನ್ನೋದಕ್ಕೆ ತಮ್ಮದೇ ಒಂದು ವಿಶೇಷ ವಿವರ ಕೂಡ ಕೊಟ್ಟಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ


ಬುಧವಾರನೆೇ ಮ್ಯಾಕ್ಸ್ ರಿಲೀಸ್ ಯಾಕೆ

ಮ್ಯಾಕ್ಸ್ ಚಿತ್ರ ಮುಂದಿನ ವಾರ ರಿಲೀಸ್ ಆಗುತ್ತಿದೆ. ಗುರುವಾರವೋ..? ಶುಕ್ರವಾರವೋ ? ಈ ಚಿತ್ರ ರಿಲೀಸ್ ಆಗುತ್ತಿಲ್ಲ. ಬದಲಾಗಿ ಇದು ಬುಧವಾರ ರಿಲೀಸ್ ಆಗುತ್ತಿದೆ. ಇದಕ್ಕೆ ಕಾರಣ ಕೂಡ ಇದೆ. ಸ್ವತಃ ಕಿಚ್ಚ ಸುದೀಪ್ ಹೇಳುವಂತೆ ಇಲ್ಲಿ ಒಂದು ವಿಶೇಷ ಕಾರಣವೂ ಇದೆ.

ಹೌದು, ಬುಧವಾರ ರಿಲೀಸ್ ಮಾಡ್ಬೇಕು ಅಂತ ಏನೂ ಇರಲಿಲ್ಲ. ರಜೆಗಳನ್ನ ಲೆಕ್ಕಹಾಕಿದಾಗ ಬುಧವಾರವೇ ಅದು ಬಂದಿತು. ವಿಶೇಷವಾಗಿ ಬುಧವಾರ 25 ರಂದು ಕ್ರಿಸ್ಮಸ್ ಹಬ್ಬವೂ ಇದೆ. ಕ್ರಿಸ್ಮಸ್ ಹಬಕ್ಕೆ ರಜೆ ಇರುತ್ತದೆ. ಮುಂದೆ ಬರೋ ದಿನಗಳಲ್ಲೂ ರಜೆಗಳೇ ಇವೆ. ಈ ಕಾರಣಕ್ಕೇನೆ ಮ್ಯಾಕ್ಸ್ ಚಿತ್ರ ಬುಧವಾರ ಬರ್ತಿದೆ.


ಮ್ಯಾಕ್ಸ್‌ನಿಂದ ಹೊಸ ಟ್ರೆಂಡ್

ಕನ್ನಡದಲ್ಲಿ ಚಿತ್ರಗಳು ಹೆಚ್ಚಾಗಿ ಶುಕ್ರವಾರವೇ ಬರುತ್ತವೆ. ರಾಜ್‌ಕುಮಾರ್ ಫ್ಯಾಮಿಲಿಯ ಚಿತ್ರಗಳು ಗುರುವಾರ ಬಂದಿರೋದು ಇದೆ. ಆದರೆ, ಇದೀಗ ಕಿಚ್ಚನ ಮ್ಯಾಕ್ಸ್ ಸಿನಿಮಾ ಬುಧವಾರ ಬರ್ತಿದೆ. ಇದಕ್ಕೆ ಕಾರಣ ಏನೂ ಅನ್ನದು ಗೊತ್ತಾಗಿದೆ. ನಮ್ಮ ಚಿತ್ರ ಬುಧವಾರ ರಿಲೀಸ್ ಆಗುತ್ತಿದೆ. ಇದರಿಂದ ಒಳ್ಳೆಯದಾದ್ರೆ ಆಗ್ಲಿ, ನಿರ್ಮಾಪಕರಿಗೆ ಒಳ್ಳೆಯದಾಗುತ್ತದೆ. ಈ ಒಂದು ನಮ್ಮ ಐಡಿಯಾ ಕ್ಲಿಕ್ ಆದ್ರೆ ಒಳ್ಳೆಯದೇ ಅಲ್ವೇ? ಈ ದಿನ ಮತ್ತೆ ಬೇರೆ ಚಿತ್ರಗಳೂ ರಿಲೀಸ್ ಆಗುತ್ತವೆ. ಇದು ಒಂದು ರೀತಿ ಟ್ರೆಂಡ್ ಕೂಡ ಆಗಬಹುದು ಅನ್ನೋ ಅರ್ಥದಲ್ಲಿಯೆ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ.


ಮ್ಯಾಕ್ಸ್ ಚಿತ್ರ ಟ್ರೈಲರ್ ರಿಲೀಸ್

ಮ್ಯಾಕ್ಸ್ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಚಿತ್ರದುರ್ಗದಲ್ಲಿಯೇ ನಡೆಯುತ್ತಿದೆ. ಅದ್ಯಾವುದೋ ಸಮಯದಲ್ಲಿ ಚಿತ್ರದುರ್ಗದಲ್ಲಿಯೇ ಒಂದು ಕಾರ್ಯಕ್ರಮ ಮಾಡ್ತೀವಿ ಅಂತ ಕಿಚ್ಚ ಸುದೀಪ್ ಹೇಳಿದ್ದಾರೆ. ಆ ಒಂದು ಮಾತನ್ನ ಇದೀಗ ಸುದೀಪ್ ನಿಜವಾಗಿಸುತ್ತಿದ್ದಾರೆ. ಮ್ಯಾಕ್ಸ್ ಸಿನಿಮಾ ತಂಡವೂ ಅದಕ್ಕೆ ಸಪೋರ್ಟ್ ಮಾಡಿದೆ.

ಹಾಗಾಗಿಯೇ ಇದೇ ತಿಂಗಳು ಡಿಸೆಂಬರ್-22 ರಂದು ಸಂಜೆ 6.30ಕ್ಕೆ ಚಿತ್ರದುರ್ಗದಲ್ಲಿ ಪ್ರೀ-ರಿಲೀಸ್ ಇವೆಂಟ್ ಪ್ಲಾನ್ ಆಗಿದೆ. ಈ ಒಂದು ವಿಷಯವನ್ನ ಅಧಿಕೃತವಾಗಿಯೂ ಹೇಳಲಾಗಿದೆ. ಹಾಗೇನೆ ಇದೇ ದಿನ ಬೆಳಗ್ಗೆ 11.08 ನಿಮಿಷಕ್ಕೆ ಚಿತ್ರದ ಫಸ್ಟ್ ಟ್ರೈಲರ್ ಕೂಡ ರಿಲೀಸ್ ಆಗುತ್ತಿದೆ.


ಡಿಸೆಂಬರ್-25 ರಂದು ಚಿತ್ರ ರಿಲೀಸ್

ಡಿಸೆಂಬರ್-25 ರಂದು ಮ್ಯಾಕ್ಸ್ ಚಿತ್ರ ರಿಲೀಸ್ ಆಗುತ್ತಿದೆ. ಕನ್ನಡ, ತಮಿಳು, ತೆಲುಗು ಹೀಗೆ ಬಹುಭಾಷೆಯಲ್ಲಿಯೇ ಈ ಚಿತ್ರ ರಿಲೀಸ್ ಆಗುತ್ತಿದೆ. ಯುಐ ಆದ್ಮೇಲೆ ಬರ್ತಿರೋ ಮ್ಯಾಕ್ಸ್ ಚಿತ್ರದ ಬಗ್ಗೆನೂ ಕ್ರೇಜ್ ಇದೆ. ವರ್ಷದ ಬಿಗ್ ಸಿನಿಮಾಗಳಲ್ಲಿ ಒಂದು ಯುಐ ಆಗಿದೆ. ಮತ್ತೊಂದು ಮ್ಯಾಕ್ಸ್ ಚಿತ್ರವೇ ಆಗಿದೆ. ಈ ಎರಡೂ ಚಿತ್ರಗಳು ಅಷ್ಟೇ ನಿರೀಕ್ಷೆ ಹುಟ್ಟುಹಾಕಿವೆ. ಆ ಲೆಕ್ಕದಲ್ಲಿ ಡಿಸೆಂಬರ್-20 ರಂದು ಯುಐ ರಿಲೀಸ್ ಆಗಿದೆ. ಒಳ್ಳೆ ರೆಸ್ಪಾನ್ಸ್ ಕೂಡ ಪಡೆದುಕೊಂಡಿದೆ. ಇದೀಗ ಮ್ಯಾಕ್ಸ್ ಸರದಿ ಅಂತಲೇ ಹೇಳಬಹುದು.


Comments


Top Stories

bottom of page