top of page

ಜಪಾನ್ ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ದೇಶವಾಗಿ ಹೊರ ಹೊಮ್ಮಿದ ಭಾರತ

  • Writer: Ananthamurthy m Hegde
    Ananthamurthy m Hegde
  • May 25
  • 1 min read

ree

ಭಾರತ ದೇಶ ಈಗ ಆರ್ಥಿಕ ರಂಗದಲ್ಲಿ ಜಪಾನ್ ದೇಶವನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮಿದೆ. ಭಾರತವು ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಸರ್ಕಾರಿ ಚಿಂತಕರ ಚಾವಡಿ ನೀತಿ ಆಯೋಗದ ಸಿಇಒ ಬಿ.ವಿ ಆರ್ ಸುಬ್ರಹ್ಮಣ್ಯಂ ಶನಿವಾರ ಹೇಳಿದ್ದಾರೆ. ನೀತಿ ಆಯೋಗದ ಆಡಳಿತ ಮಂಡಳಿಯ 10 ನೇ ಸಭೆಯ ನಂತರ  ಸುಬ್ರಹ್ಮಣ್ಯಂ ಈ ಹೇಳಿಕೆಯನ್ನು ನೀಡಿದ್ದಾರೆ. ಒಟ್ಟಾರೆಯಾಗಿ ಜಾಗತಿಕ ಮತ್ತು ಆರ್ಥಿಕ ವಾತಾವರಣ ಭಾರತಕ್ಕೆ ಅನುಕೂಲಕರವಾಗಿದೆ ಎಂದು ಸುಬ್ರಹ್ಮಣ್ಯಂ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, 'ನಾವು ಈಗ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಆಗಿ ಹೊರ ಹೊಮ್ಮಿದ್ದೇವೆ. ಇಂದು ನಾವು 4,000 ಬಿಲಿಯನ್ ಡಾಲರ್ (4 ಟ್ರಿಲಿಯನ್ ಡಾಲರ್) ಆರ್ಥಿಕತೆಯಾಗಿದ್ದೇವೆ' ಎಂದು ಹೇಳಿದರು. ಐಎಂಎಫ್ ದತ್ತಾಂಶವನ್ನು ಉಲ್ಲೇಖಿಸಿ ಸುಬ್ರಹ್ಮಣ್ಯಂ, ಭಾರತ ಇಂದು ಜಪಾನ್‌ಗಿಂತ ದೊಡ್ಡದಾಗಿದೆ ಎಂದು ಹೇಳಿದರು.

Comments


Top Stories

bottom of page