ಡಾಲಿ ಮದುವೆಗೆ ಮುಹೂರ್ತ ಫಿಕ್ಸ್: ಸಾಮಾಜಿಕ ಜಾಲತಾಣದಲ್ಲಿ ಬಾಳ ಸಂಗಾತಿ ಪರಿಚಯಿಸಿದ ನಟ
- Ananthamurthy m Hegde
- Nov 1, 2024
- 1 min read

ಬೆಂಗಳೂರು : ಸ್ಯಾಂಡಲ್ ವುಡ್ ಖ್ಯಾತ ನಟ ಡಾಲಿ ಧನಂಜಯ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಕವನದ ಮೂಲಕ ಕನ್ನಡಿಗರಿಗೆ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡಾಲಿ, "ಪ್ರೀತಿಯ ಕರುನಾಡಿಗೆ, ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ.
ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ. ಮದುವೆಗೆ ಕರಿತೀನಿ, ಎಲ್ಲ ಬಂದು ಊಟ ಮಾಡಿಕೊಂಡು ಹೋಗ್ಬೇಕು. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು. ನಾನು ಧನ್ಯ ಇಂತಿ ನಿಮ್ಮವ" ಎಂದು ಡಾಲಿ ಧನಂಜಯ್ ತಿಳಿಸಿದ್ದಾರೆ.
ಧನ್ಯತಾ ಹಾಗೂ ಡಾಲಿ ಧನಂಜಯ್ ಮೈಸೂರಿನಲ್ಲಿಯೇ ಪರಿಚಯ ಆಗಿದ್ದಾರೆ. ಅರಸಿಕೆರೆ ಮೂಲದ ಧನಂಜಯ್ ಕೂಡ ಮೈಸೂರಿನಲ್ಲಿಯೇ ಓದಿದ್ದಾರೆ. ಧನ್ಯತಾ ಕೂಡ ಮೈಸೂರಿನಲ್ಲಿಯೇ ಪರಿಚಯ ಆಗಿದ್ದಾರೆ. ಆ ದಿನದಿಂದಲೂ ಈ ಜೋಡಿ ತಮ್ಮ ಸ್ನೇಹ ಮತ್ತು ಪ್ರೀತಿಯನ್ನ ಗುಟ್ಟಾಗಿಯೇ ಇಟ್ಟಿತ್ತು. ಮುಂದಿನ ವರ್ಷ ಫೆಬ್ರವರಿ ೧೬ ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮತ್ತು ಧನ್ಯತಾ ಮದುವೆ ಪ್ಲಾನ್ ಆಗಿದೆ.
Comentários