top of page

ತೂಕ ಇಳಿಕೆಗೆ ಆ್ಯಂಟಿ - ಇನ್‌ಫ್ಲಾಮೇಟರಿ ಡಯೆಟ್

  • Writer: Ananthamurthy m Hegde
    Ananthamurthy m Hegde
  • Mar 14
  • 2 min read

ತೂಕ ನಷ್ಟಕ್ಕೆ (Weight Loss) ಸ್ಥಿರವಾದ ಆಹಾರ ಪದ್ಧತಿ (Food System) ಹಾಗೂ ಜೀವನಶೈಲಿ (Lifestyle)  ಪಾಲಿಸುವುದು ಅಗತ್ಯವಾಗಿದೆ. ವೇಟ್ ಲಾಸ್ ಜರ್ನಿ (Weight Loss Journey) ಆರಂಭಿಸಿದ ಮೇಲೆ ನಡು ನಡುವೆ ಅನೇಕ ತೊಂದರೆಗಳು ಉಂಟಾಗುತ್ತಿರುತ್ತವೆ ಆದರೂ ನಮ್ಮ ಗುರಿ ಹಾಗೂ ಉದ್ದೇಶ ಸ್ಪಷ್ಟವಾಗಿರಬೇಕು. ಇನ್‌ಫ್ಲಾಮೇಶನ್ ತೂಕ ನಷ್ಟವನ್ನು ನಿಧಾನಗೊಳಿಸುತ್ತದೆ. ಹೆಚ್ಚುವರಿ ಕಿಲೋಗಳನ್ನು ಕಳೆದುಕೊಳ್ಳಲು ಸಹಾಯ ಮಾಡುವ ಉರಿಯೂತದ ತೂಕ ನಷ್ಟ (ಆ್ಯಂಟಿ - ಇನ್‌ಫ್ಲಾಮೇಟರಿ) ಆಹಾರ ಪದ್ಧತಿಯನ್ನು ಅನುಸರಿಸುವುದು ಅತ್ಯಗತ್ಯವಾಗಿದೆ. ನಟಿ ವಿದ್ಯಾ ಬಾಲನ್ ಕೂಡ ಇದೇ ಡಯೆಟ್ ಅನುಸರಿಸಿ ತೂಕ ಇಳಿಸಿಕೊಂಡಿದ್ದಾರೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಇಂದು ಆ್ಯಂಟಿ - ಇನ್‌ಫ್ಲಾಮೇಟರಿ ಡಯೆಟ್ ಹೆಚ್ಚು ಖ್ಯಾತಿ ಪಡೆದುಕೊಳ್ಳುತ್ತಿದ್ದು, ಮಹಿಳೆಯೊಬ್ಬರು 154 ಕೆಜಿಯಿಂದ 65 ಕೆಜಿಗೆ ತನ್ನ ತೀವ್ರ ರೂಪಾಂತರಕ್ಕೆ ಸಹಾಯ ಮಾಡಿದ ಕೊಬ್ಬು ನಷ್ಟ ಆಹಾರ ಯೋಜನೆಯನ್ನು ಹಂಚಿಕೊಂಡಿದ್ದಾರೆ. ಇನ್ನೂ ಈ ಡಯೆಟ್ ಎಲ್ಲರಿಗೂ ಹೊಂದಿಕೊಳ್ಳಬೇಕೆಂದೇನಿಲ್ಲ ಯಾವುದೇ ಆಹಾರ ಪದ್ಧತಿ ಅನುಸರಿಸುವ ಮುನ್ನ ವೈದ್ಯರನ್ನು ಕಂಡು ಸಮಾಲೋಚಿಸುವುದು ಅತ್ಯಗತ್ಯವಾಗಿದೆ.

ವೇಟ್ ಲಾಸ್ ಕೋಚ್ ಸಜೆಸ್ಟ್ ಮಾಡಿರುವ ಆ್ಯಂಟಿ - ಇನ್‌ಫ್ಲಾಮೇಟರಿ ಡಯೆಟ್

ವೇಟ್ ಲಾಸ್ ಕೋಚ್ ಆಗಿರುವ ಪವನ್ ದಾಗರ್ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ವೇಗವಾಗಿ ಹಾಗೂ ನಿರಂತರ ತೂಕ ಇಳಿಸಿಕೊಳ್ಳಲು ಸಂಬಂಧಿಸಿದ ಸಲಹೆಗಳು, ತಂತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ತೂಕ ಇಳಿಸುವ ಪಾನೀಯಗಳು, ಆಹಾರ ಟಿಪ್ಸ್‌ಗಳವರೆಗೆ ಅವರ ಪೇಜ್‌ನಲ್ಲಿ ಸಾಕಷ್ಟು ಮಾಹಿತಿಗಳು ದೊರೆಯುತ್ತವೆ. ಇತ್ತೀಚೆಗೆ ಪವನ್ ಅವರು ಆ್ಯಂಟಿ ಇನ್‌ಫ್ಲಾಮೇಟರಿ ಡಯೆಟ್ ಬಗ್ಗೆ ತಿಳಿಸಿದ್ದು ಇದು ವೇಗವಾಗಿ ತೂಕ ಇಳಿಸಲು ಸಹಕಾರಿಯಾಗಿದೆ ಎಂದಿದ್ದಾರೆ. ಅವರು ಹಂಚಿಕೊಂಡಿರುವ ಡಯೆಟ್ ಚಾರ್ಟ್ ನೋಡೋಣ


ಬೆಳಗ್ಗಿನ ಉಪಹಾರಕ್ಕೆ:

  • ಸೋಮವಾರ: ಓಟ್‌ಮೀಲ್ (50 ಗ್ರಾಮ್ ಓಟ್ಸ್ ಅನ್ನು ಸೇಬು/ಬ್ಲ್ಯೂಬೆರ್ರಿ/ದಾಳಿಂಬೆ ಹಾಗೂ ನೀರಿನೊಂದಿಗೆ ತೆಗೆದುಕೊಳ್ಳಬೇಕು

  • ಮಂಗಳವಾರ: 250 ಗ್ರಾಮ್ ಪಪ್ಪಾಯ ಹಾಗೂ 10 ಬಾದಾಮಿ

  • ಬುಧವಾರ: 250 ಗ್ರಾಮ್ ಪಪ್ಪಾಯ ಹಾಗೂ 10 ಬಾದಾಮಿ

  • ಗುರುವಾರ: ಓಟ್‌ಮೀಲ್ (ನೀರು ಹಾಕಿದ 50 ಗ್ರಾಮ್ ಓಟ್ಸ್ ಇದರೊಂದಿಗೆ ಸೇಬು/ಬ್ಲ್ಯುಬೆರಿ/ದಾಳಿಂಬೆ ಯಾವುದಾದರೊಂದು ಹಣ್ಣು 10 ಬಾದಾಮಿ

  • ಶುಕ್ರವಾರ: 2 ಸೇಬು ಹಾಗೂ 28 ಗ್ರಾಮ್ ನಟ್ಸ್ (ವಾಲ್‌ನಟ್ ಹಾಗೂ ಬಾದಾಮಿ)

  • ಶನಿವಾರ: 2 ಸೇಬು ಹಾಗೂ 2 ಚಮಚ ಬಾದಾಮಿ ಬಟರ್ / ನಟ್ಸ್

  • ಭಾನುವಾರ: ಓಟ್‌ಮೀಲ್ (ನೀರು ಬೆರೆಸಿದ 50 ಗ್ರಾಮ್ ಓಟ್ಸ್ / ಯಾವುದಾದರೊಂದು ಹಣ್ಣು ಹಾಗೂ 10 ಬಾದಾಮಿ)


ಮಧ್ಯಾಹ್ನದೂಟದ ಮೆನು


  • ಸೋಮವಾರ: ಕಡಲೆಕಾಳು ಹಾಗೂ ಸಲಾಡ್‌ನೊಂದಿಗೆ 150 ಗ್ರಾಮ್ ಬ್ರೌನ್ ರೈಸ್

  • ಮಂಗಳವಾರ: ಬೇಳೆ ಹಾಗೂ ಸಲಾಡ್‌ನೊಂದಿಗೆ 150 ಗ್ರಾಮ್ ಬ್ರೌನ್ ರೈಸ್

  • ಬುಧವಾರ: ಕಿನೋವಾ ಕಡಲೆಕಾಳು ಸಲಾಡ್

  • ಗುರುವಾರ: 150 ಗ್ರಾಮ್ ಬ್ರೌನ್ ರೈಸ್ ಜೊತೆಗೆ ರಾಜ್ಮಾ ಸಲಾಡ್

  • ಶುಕ್ರವಾರ: 150 ಗ್ರಾಮ್ ಬ್ರೌನ್ ರೈಸ್ ಜೊತೆಗೆ ಕಡಲೆಕಾಳು ಸಲಾಡ್

  • ಶನಿವಾರ: 150 ಗ್ರಾಮ್ ಬ್ರೌನ್ ರೈಸ್ ಜೊತೆಗೆ ದಾಲ್ ಹಾಗೂ ಸಲಾಡ್

  • ಭಾನುವಾರ: ಕಿನೋವಾ ಕಡಲೆಕಾಳು ಸಲಾಡ್ / ರಾಜ್ಮಾ ರೈಸ್


    ರಾತ್ರಿಯೂಟದ ಮೆನು


  • ಸೋಮವಾರ: 1 ಬೌಲ್ ಬೇಳೆ ಸೂಪ್ ಸೂಚಿಸಿದ್ದಾರೆ.

  • ಮಂಗಳವಾರ: 100 ಗ್ರಾಮ್ ಬ್ರೌನ್ ರೈಸ್ ಇದರೊಂದಿಗೆ ಕಡಲೆಕಾಳು ದಾಲ್ / ಸಲಾಡ್ ಸೇವಿಸಲು ಹೇಳಿದ್ದಾರೆ

  • ಬುಧವಾರ: 1 ಬೌಲ್ ಬೇಳೆ ಸೂಪ್

  • ಗುರುವಾರ: 100 – 120 ಗ್ರಾಮ್ ಬ್ರೌನ್ ರೈಸ್ ಇದರೊಂದಿಗೆ ದಾಲ್

  • ಶುಕ್ರವಾರ: ಕಿನೋವಾ ಚಿಕ್‌ಪೀಸ್ / ರಾಜ್ಮಾ ಸಲಾಡ್

  • ಶನಿವಾರ: 1 ಬೌಲ್ ಬೇಳೆ ಸೂಪ್ ಸೇವಿಸಲು ತಿಳಿಸಿದ್ದಾರೆ

  • ಭಾನುವಾರ: ಬ್ರೌನ್ ರೈಸ್‌ನೊಂದಿಗೆ ದಾಲ್ / ಕಡಲೆಕಾಳು ಸೇವಿಸಲು ತಿಳಿಸಿದ್ದಾರೆ.

Comments


Top Stories

bottom of page