ವರ್ಕೌಟ್ ಮಾಡದೇ ಸ್ಲಿಮ್ ಆಗಬೇಕಾ? ಚಿಂತೆ ಬೇಡ, ಹೀಗೆ ಮಾಡಿ ನೋಡಿ
- Ananthamurthy m Hegde
- Dec 20, 2024
- 1 min read

ಸಿಗೋ 24 ಗಂಟೆಯಲ್ಲಿ ಎಂಟು ತಾಸು ನಿದ್ರೆ, ಒಂಬತ್ತು ತಾಸು ಕೆಲಸ ಅಂತಾನೇ ಹೋಗುತ್ತದೆ. ಇನ್ನು ಉಳಿದ ಟೈಮ್‌ನಲ್ಲಿ ಓಡಾಟ, ಮನೆ, ಮಕ್ಕಳು, ಸಂಸಾರ ಇನ್ನಿತರೆ ಕೆಲಸ, ಊಟ- ತಿಂಡಿ ಅಂತಾ ಕಳೆದು ಹೋಗುತ್ತದೆ. ಹೌದು, ಇವಕ್ಕೆಲ್ಲಾ ಸಮಯ ಕೊಡ್ಲೇಬೇಕು. ಅದರ ಜೊತೆಗೆ ನಮ್ಮ ಕಾಳಜಿಗೂ ಒಂದಿಷ್ಟು ಸಮಯ ನೀಡಾಬೇಕಾಗುತ್ತದೆ. ಕೆಲವರಿಗೆ ಫೀಟ್ ಆಗಿರಬೇಕು ಅನ್ನೋ ಆಸೆ. ಆದ್ರೆ ಸಮಯದ್ದೇ ಕೊರತೆ. ಆಗಬೇಕು ಅನ್ನೋ ಆಸೆ ಇದ್ರೂ ಸಮಯದ ಅಭಾವದಿಂದ ಅದನ್ನು ಮಾಡಲು ಆಗೋದೇ ಇಲ್ಲ. ನಿಮಗೂ ಹೀಗನಿಸುತ್ತಿದ್ದರೆ ಡೋಂಟ್‌ವರಿ, ಸಣ್ಣಪುಟ್ಟ ಚಲನೆಯಿಂದಲೇ ಹೇಗೆ ಸ್ಲಿಮ್ ಆಗಬಹುದು ಎಂಬ ಟಿಪ್ಸ್ ಅನ್ನು ನಾವಿಲ್ಲಿ ನಿಮಗೆ ನೀಡ್ತಿದ್ದೇವೆ ನೋಡಿ.
ಮನೆ ಕೆಲಸವನ್ನು ನೀವೇ ಮಾಡಿ
ಸ್ವಚ್ಛವಾದ ಮನೆಯು ನಿಮ್ಮ ಮನಸ್ಸನ್ನು ಖುಷಿಯಾಗಿಡುವುದಲ್ಲದೇ, ಅದು ನಿಮ್ಮನ್ನು ಫಿಟ್ ಆಗಿ ಕೂಡ ಇರಿಸಬಹುದು. ಅಡುಗೆ, ಊಟ ಆದಮೇಲೆ ಪಾತ್ರೆಗಳನ್ನು ವಾಶ್ ಮಾಡೋದಾಗಿರಬಹುದು, ಮನೆಯನ್ನು ಗುಡಿಸಿ, ಒರೆಸೋದು, ಬಟ್ಟೆ ತೊಳೆಯುವಂತಹ ಕೆಲಸಗಳನ್ನು ನೀವೇ ಮಾಡಿ . ಈ ಅಭ್ಯಾಸವು ಮನೆಯನ್ನು ಶುಚಿಯಾಗಿಡುವುದರ ಜೊತೆಗೆ ನಿಮ್ಮನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ .
ನಡೆದಾಡುತ್ತಾ ಫೋನ್‌ನಲ್ಲಿ ಮಾತಾಡಿ
ಕೆಲಸದ ವಿಷಯವಾಗಿ, ಇಲ್ಲಾ ಪರ್ಸನಲ್ ಕಾಲ್‌ನಲ್ಲಿದ್ದಾಗ ಎಲ್ಲೋ ಒಂದು ಕಡೆ ಕೂತು ಮಾತಾಡೋದಕ್ಕಿಂತ ವಾಕ್ ಮಾಡುತ್ತಾ ಮಾತನಾಡುವ ಅಭ್ಯಾಸ ರೂಢಿಸಿಕೊಳ್ಳಿ. ಪರಿಣಾಮವಾಗಿ ನೀವು ಹತ್ತು ಹೆಜ್ಜೆ ನಡೆದು ಸಕ್ರಿಯವಾದಂತೆ ಆಗುತ್ತದೆ, ಜೊತೆಗೆ ನಿಮ್ಮ ಮಾತು ಕೂಡ ಮುಗಿಯುತ್ತೆ. ಇಂತಹ ಸಣ್ಣಪುಟ್ಟ ಅಭ್ಯಾಸಗಳು ನಮ್ಮನ್ನು ಹೆಚ್ಚುವರಿ ಬೊಜ್ಜಿನ ಅಪಾಯದಿಂದ ದೂರ ಮಾಡುತ್ತದೆ.
ದಿನಚರಿಯನ್ನು ಬಿಟ್ಟು ಇದನ್ನು ಮಾಡಿ
ಮನೆಯಲ್ಲಿ ಕೆಲಸ ಜಾಸ್ತಿ, ವರ್ಕೌಟ್‌ಗೆಲ್ಲಾ ಟೈಮ್ ಇಲ್ಲಾ ಅನ್ನೋರು ದಿನದಲ್ಲಿ 10 ನಿಮಿಷನಾದ್ರೂ ನಿಮಗಾಗಿ ಫ್ರೀ ಮಾಡ್ಕೊಳ್ಳಿ. ಈ ಹತ್ತು ನಿಮಿಷದಲ್ಲಿ ದೇಹಕ್ಕೊಂದಿಷ್ಟು ವ್ಯಾಯಾಮ ಕೊಡಿ. ಕನಿಷ್ಠಪಕ್ಷ ಬಾಡಿ ಸ್ಟ್ರೆಚ್ ಮಾಡೋದು, ವಾಕಿಂಗ್ ಮಾಡೋದು, ದೇಹವನ್ನು ಬೆಂಡಾಗಿಸುವುದು, ಡ್ಯಾನ್ಸ್ ಹೀಗೆ ಇಂತಹ ಚಟುವಟಿಕೆಗಳಿಗೆ ಹತ್ತು ನಿಮಿಷವಾದರೂ ಸಮಯ ಕೊಡಿ. ಇದು ವಾಸ್ತವವಾಗಿ ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುತ್ತದೆ ಮತ್ತು ನೀವು ಸಕ್ರಿಯವಾಗಿರಲು ಸಹಾಯ ಮಾಡುತ್ತದೆ.
ನೀರು ಕುಡಿಯುವುಡ್ನ್ನು ಹೆಚ್ಚಿಸಿಕೊಳ್ಳಿ
ಹಲವರು ನೀರನ್ನು ನಿರ್ಲಕ್ಷ್ಯಿಸುತ್ತಾರೆ. ನೀರು ಕುಡಿಯುವುದನ್ನು ಕಡಿಮೆ ಮಾಡಿದ್ರೆ ಬೇರೆ ಬೇರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಒಂದೊಮ್ಮೆ ನೀವು ಸ್ಲಿಮ್ ಆಗಬೇಕು ಎಂದರೆ ದಿನಕ್ಕೆ ಕನಿಷ್ಠ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಲೇಬೇಕು.
ಪ್ರತಿದಿನ ಜಿಮ್‌ಗೆ ಹೋಗಿ ಬೆವರು ಹರಿಸಲು ಬದಲು ಪ್ರತಿದಿನ ಸ್ವಲ್ಪ ಹೊತ್ತಾದರೂ ಮನೆಯಲ್ಲಿ ಓಡುವ ಅಥವಾ ಮೂಲಭೂತ ಜಾಗಿಂಗ್ ಮಾಡಲು ಪ್ರಯತ್ನಿಸಿ. ರನ್ನಿಂಗ್ ಇನ್ ಪ್ಲೇಸ್‌ನಂತಹ ವರ್ಕೌಟ್ ಮಾಡಿದರೂ ಸಾಕು. ಇದು ನಿಮ್ಮ ಕ್ಯಾಲೋರಿಯನ್ನು ಬರ್ನ್ ಮಾಡುತ್ತದೆ. ಆದರೆ ಇಂತಹ ಅಭ್ಯಾಸಗಳನ್ನು ನೀವು ಅಭ್ಯಾಸ ಮಾಡಬೇಕು ಮತ್ತು ಪ್ರತಿನಿತ್ಯ ಮಾಡಲು ಆದ್ಯತೆ ಕೊಡಬೇಕು. ಇದರಿಂದ ನೀವೂ ಫಿಟ್ ಆಗಿ ಉಳಿಯಬಹುದು.
Comments