top of page

ಸಂತೋಷವನ್ನು ಬೆನ್ನಟ್ಟುವುದೇ ಅಸಂತೋಷಕ್ಕೆ ಕಾರಣ; ಧನಾತ್ಮಕ ಭಾವನೆಗಳ ಹೆಚ್ಚಿಸಲು ಇಲ್ಲಿದೆ ಸಿಂಪಲ್ ಟಿಪ್ಸ್..!

  • Oct 22, 2024
  • 2 min read

ಮನಸು ನೆಮ್ಮದಿಯಿಂದ ಇದ್ದು, ಅದರ ಆರೋಗ್ಯ ಚೆನ್ನಾಗಿದ್ದಾರೆ ವ್ಯಕ್ತಿ ಉತ್ತಮ ರೀತಿಯಲ್ಲಿ ಆಲೋಚಿಸಬಲ್ಲ. ಚಿಂತನ-ಮಂಥನ ಮಾಡಬಲ್ಲ. ವಸ್ತು, ವಿಷಯವನ್ನು ಅರ್ಥಮಾಡಿಕೊಳ್ಳಬಲ್ಲ.












ಕೆಡುಕನ್ನೇ ಚಿಂತಿಸುತ್ತಿದ್ದರೆ ಆರೋಗ್ಯಕ್ಕೆ ಕೆಟ್ಟದ್ದು ಎನ್ನುತ್ತಾರೆ ಹಿರಿಯರು. ಲೋಕದ ಗೊಡವೆ ನಮಗ್ಯಾಕಯ್ಯಾ? ಎಂದು ಚಿಂತೆಗಳಿಗೆ ಬಲಿಯಾಗದೆ ಒಳಿತನ್ನೇ ಧ್ಯಾನಿಸುವವರ ಆರೋಗ್ಯ ಸದಾ ಹಸಿರಾಗಿರುತ್ತೆ. ಸಕಾರಾತ್ಮಕ ಅಥವಾ ಧನಾತ್ಮಕ ಭಾವನೆ ನಮ್ಮಲ್ಲಿದ್ದರೆ ದೇಹ ಮತ್ತು ಮನಸ್ಸು ಯಾವಾಗಲೂ ಉಲ್ಲಾಸ ಭರಿತವಾಗಿರುತ್ತದೆ.

ಪ್ರತಿಯೊಬ್ಬರು ತಮ್ಮ ಜೀವನ ಆರೋಗ್ಯಕರವಾಗಿ ಹಾಗೂ ನೆಮ್ಮದಿಯಿಂದಿರಬೇಕೆಂದು ಬಯಸುವುದುಂಟು. ದುಃಖ, ಒಂಟಿತನ ಮತ್ತು ಅಸೂಯೆ ಅನುಭವಿಸುವ ಅಥವಾ ಕೋಪಗೊಳ್ಳುವ ಅನೇಕ ಕ್ಷಣಗಳು ನಮ್ಮ ಜೀವನದಲ್ಲಿ ಬಂದು ಹೋಗುತ್ತಿರುತ್ತವೆ. ಆದರೆ, ಉತ್ತಮ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮಕ್ಕಾಗಿ ಜೀವನದಲ್ಲಿ ಹೆಚ್ಚು ಸಕಾರಾತ್ಮಕ ಭಾವನೆಗಳನ್ನು ಅನುಭವಿಸಲು ಪ್ರಯತ್ನಿಸಬೇಕು. ನಮ್ಮ ಒಟ್ಟಾರೆ ಯೋಗಕ್ಷೇಮವನ್ನು ನಿರ್ಧರಿಸಲು ಸಕಾರಾತ್ಮಕ ಅಥವಾ ಧನಾತ್ಮಕ ಭಾವನೆಗಳು ಪ್ರಮುಖವಾಗುತ್ತದೆ.

ಮನಸು ನೆಮ್ಮದಿಯಿಂದ ಇದ್ದು, ಅದರ ಆರೋಗ್ಯ ಚೆನ್ನಾಗಿದ್ದಾರೆ ವ್ಯಕ್ತಿ ಉತ್ತಮ ರೀತಿಯಲ್ಲಿ ಆಲೋಚಿಸಬಲ್ಲ. ಚಿಂತನ-ಮಂಥನ ಮಾಡಬಲ್ಲ. ವಸ್ತು, ವಿಷಯವನ್ನು ಅರ್ಥಮಾಡಿಕೊಳ್ಳಬಲ್ಲ. ಸಮಸ್ಯೆ ಸನ್ನಿವೇಶವನ್ನು ಸರಿಯಾಗಿ ವಿಶ್ಲೇಷಿಸಬಲ್ಲ. ಸೂಕ್ತ ಪರಿಹಾರ-ನಿರ್ಧಾರಗಳನ್ನು ಕೈಗೊಳ್ಳಬಲ್ಲ. ಏಕಾಗ್ರತೆಯಿಂದ ಚೆನ್ನಾಗಿ ಕೆಲಸ-ಕರ್ತವ್ಯಗಳನ್ನು ನಿರ್ವಹಿಸಬಲ್ಲ. ಕುಟುಂಬದವರೊಂದಿಗೆ-ಇತರರೊಂದಿಗೆ ಒಳ್ಳೆಯ ಸ್ನೇಹ ಸಂಬಂಧವನ್ನು ಇಟ್ಟುಕೊಳ್ಳಬಲ್ಲ. ತನ್ನ ಕ್ಷೇಮಕ್ಕೆ ಅಷ್ಟೇ ಅಲ್ಲದೆ, ಸಮಾಜದ ಕ್ಷೇಮಕ್ಕೂ ಗಮನ ಕೊಡಬಲ್ಲ.

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ಭಾವನಾತ್ಮಕ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದು, ಈ ಸಮಯದಲ್ಲಿ ಬದುಕುತ್ತಿರುವ ನಾವೇ ಅದೃಷ್ವವಂತರು. ಆದರೆ, ಸಾಕಷ್ಟು ಆಧ್ಯಯನಗಳು ಜನರದಲ್ಲಿ ಸಂತೋಷ ಇಳಿಮುಖವಾಗುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತಿದೆ.

18-24 ವರ್ಷ ವಯಸ್ಸಿನ ಯುವಕರು ಆತಂಕ ಮತ್ತು ಖಿನ್ನತೆ ಸಮಸ್ಯೆಗಳನ್ನು ಎದುರಿಸುತ್ತಿರುವುದು ಕಂಡು ಬರುತ್ತಿದೆ. ಈ ವಯೋಮಾನದ ನಾಲ್ವರ ಪೈಕಿ ಒಬ್ಬರು ಈ ಸಮಸ್ಯೆ ಎದುರಿಸುತ್ತಿರುವುದು ತಿಳಿದುಬಂದಿದೆ. ಪ್ರಮುಖವಾಗಿ 2000 ವರ್ಷದ ಬಳಿಕ ಈ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ ಎಂದು ಅಧ್ಯಯನಗಳು ತಿಳಿಸಿವೆ.


ಇತ್ತೀಚಿನ ದಿನಗಳಲ್ಲಿ ಯುವಕರು-ಯುವತಿಯರು ತಮ್ಮ ಭಾವನೆಗಳನ್ನು ತಮ್ಮಲ್ಲೇ ಹುದುಗಿಸುತ್ತಿರುವುದು ಹೆಚ್ಚಾಗುತ್ತಿದ್ದು, ಇದರಿಂದ ಆತಂಕ, ನೋವು, ಹಾಗೂ ಅಶಾಂತಿ ಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ. ಇದು ಕಾಲಾಂತರ ನಕಾರಾತ್ಮಕ ಭಾವನೆಗಳು ಹೆಚ್ಚಾಗುವಂತೆ ಮಾಡುತ್ತದೆ.

ಪ್ರತಿನಿತ್ಯ ಒಬ್ಬ ವ್ಯಕ್ತಿ ಸುಮಾರು 400 ವಿಭಿನ್ನ ಭಾವನೆಗಳನ್ನು ಎದುರಿಸುತ್ತಿರುತ್ತಾನೆ. ಮಾನವ ಭಾವನೆಗಳು ಸಂಕೀರ್ಣವಾಗಿದ್ದು, ಜೀವನ ಹಾಗೂ ಸಾಮಾಜಿಕ ಸಂಪರ್ಕಕ್ಕೆ ಅಗತ್ಯ ಪಾತ್ರಗಳನ್ನು ವಹಿಸುತ್ತವೆ. ಸಂತೋಷದಿಂದ ಪ್ರೀತಿ, ಕೋಪ, ದುಃಖ ಮತ್ತು ಜುಗುಪ್ಸೆಯವರೆಗೆ ಪ್ರತಿಯೊಂದು ಭಾವನೆಯು ನಮ್ಮ ಪರಿಸರ ಮತ್ತು ನಮ್ಮ ಅನುಭವಗಳ ಬಗ್ಗೆ ಸಂಕೇತಗಳನ್ನು ಹೊಂದಿರುತ್ತದೆ. ಈ ಸಂಕೇತಗಳು ಸಾಮಾಜಿಕ ಸಂವಹನಗಳ ಮೂಲಕ ನಮಗೆ ಮಾರ್ಗದರ್ಶನ ನೀಡುತ್ತವೆ ಮತ್ತು ನಮ್ಮ ಸುರಕ್ಷತೆ, ಯೋಗಕ್ಷೇಮದ ಮೇಲೆ ಪ್ರಭಾವ ಬೀರುತ್ತವೆ.

ಈ ಭಾವನೆಗಳನ್ನು ಬುದ್ದಿವಂತಿಕೆಯಿಂದ ನಿಭಾಯಿಸುವುದು ಅತ್ಯಗತ್ಯ. ನಕಾರಾತ್ಮಕ ಭಾವನೆಗಳು ಕೆಲಸವನ್ನು ಹಾಳು ಮಾಡುವುದಲ್ಲದೆ, ಒತ್ತಡ ಹಾಗೂ ಅತೃಪ್ತಿ ಭಾವನೆಯನ್ನು ಹೆಚ್ಚಿಸುತ್ತದೆ.

'ಅಲಾರ್ಮ್' ಇಟ್ಟು ಮಲಗುವವರೇ ಎಚ್ಚರ: ಇದರಿಂದ BP ಹೆಚ್ಚಾಗಬಹುದು ಗೊತ್ತಾ?

ಹಾಗಿದ್ದರೆ ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳುವುದು ಹೇಗೆ...?

  • ನಾನಿರುವುದೇ ಹೀಗೇ ಎಂದು ಸೆಲ್ಫ್ ಜಡ್ಜ್ ಮೆಂಟ್ ಇಲ್ಲದೆ, ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ. ಇದು ಭಾವನೆಗಳ ಮೇಲೆ ಹಿಡಿತ ಸಾಧಿಸಲು ಮೊದಲ ಹೆಜ್ಜೆಯಾಗಿದೆ. ಅತಿಯಾದ ವಿಮರ್ಶಾತ್ಮಕ ಅಥವಾ ತೀರ್ಪಿನ ಬದಲಿಗೆ, ಸ್ವಯಂ ಕಾಳಜಿಯನ್ನು ಅಭ್ಯಾಸ ಮಾಡಿ.

  • ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಆರೋಗ್ಯಕರ ಮಾರ್ಗಗಳನ್ನು ಕಂಡುಕೊಳ್ಳಿ. ವಿಶ್ವಾಸಾರ್ಹ ಸ್ನೇಹಿತನೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ವ್ಯಕ್ತಿ ಅಲ್ಲದಿದ್ದರೂ, ಚಿತ್ರಕಲೆ ಅಥವಾ ಸಂಗೀತವನ್ನು ನುಡಿಸುವುದರ ಮೂಲಕ ಅಥವಾ ಡೈರಿ ಬರೆಯುವ ಮೂಲಕ ವ್ಯಕ್ತಪಡಿಸಿಕೊಳ್ಳಿ. ಈ ಮೂಲಕ ನಿಮ್ಮ ಭಾವನೆಗಳನ್ನು ನಿಮ್ಮೊಳಗೆ ಇಟ್ಟುಕೊಳ್ಳುವ ಬದಲು ಹೊರಗೆ ಹಾಕಿದ ಸಮಾಧಾನ ನಿಮಗಿರುತ್ತದೆ.

  • ವ್ಯಾಯಾಮ, ಧ್ಯಾನ ಮಾಡುವ ಆರೋಗ್ಯಕರ ಅಭ್ಯಾಸ ರೂಢಿಸಿಕೊಳ್ಳಿ. ಇದು ನಿಮ್ಮ ಭಾವನೆಗಳ ನಿಯಂತ್ರಿಸಲು ಸಹಾಯ ಮಾಡುತ್ತದೆ. ಮತ್ತು ನಕಾರಾತ್ಮಕ ಭಾವನೆಗಳನ್ನೂ ಕಡಿಮೆ ಮಾಡುತ್ತದೆ.

  • ನಿಮ್ಮ ದುರ್ಬಲತೆಯನ್ನು ಕಂಡು ಕಂಡುಕೊಳ್ಳಿ. ಅದನ್ನು ನಿಯಂತ್ರಿಸಲು ಪ್ರಯತ್ನಿಸಿ. ಸಂತೋಷವನ್ನು ಬೆನ್ನಟ್ಟದೆ, ಜೀವನ ಪ್ರತೀಯೊಂದು ಕ್ಷಣವನ್ನೂ ಆನಂದಿಸಿ.

  • ಭಯ, ಆತಂಕ ಅಥವಾ ಋಣಾತ್ಮಕತೆಯ ಭಾವನೆಗಳನ್ನು ಉಲ್ಬಣಗೊಳಿಸಬಹುದಾದ ನಕಾರಾತ್ಮಕ ಸುದ್ದಿ ಮತ್ತು ಸಾಮಾಜಿಕ ಮಾಧ್ಯಮದ ವಿಷಯಕ್ಕೆ ಒಡ್ಡಿಕೊಳ್ಳುವುದನ್ನು ಮಿತಿಗೊಳಿಸಿ. ಬದಲಾಗಿ, ಸ್ಫೂರ್ತಿ ನೀಡುವ ಕಥೆಗಳನ್ನು ಮತ್ತು ಸುದ್ದಿಯನ್ನು ನೋಡಿ. ನಷ್ಟ, ನಿರಾಕರಣೆ ಹಾಗೂ ವೈಫಲ್ಯಗಳ ಬಗ್ಗೆ ಹೆಚ್ಚು ಚಿಂತಿಸದಿರಿ. ಪ್ರಬುದ್ಧತೆ ಅಳವಡಿಸಿಕೊಳ್ಳಿ. ಇದರಿಂದ ಸಂತೋಷಕರ ಜೀವನ ನಮ್ಮದಾಗಿಸಿಕೊಳ್ಳಬಹುದು.

Comments


Top Stories

bottom of page